ಶಿಗ್ಗಾವಿ: ಮನುಕುಲದ ಸರ್ವಾಂಗೀಣ ಏಳ್ಗೆಗೆ ಗುರುವಿನ ಮಾರ್ಗದರ್ಶನ ಮುಖ್ಯವಾಗಿದೆ. ಗುರುವಿನ ತೃಪ್ತಿ ಶಿಷ್ಯನ ಬೆಳ ವಣಿಗೆಗೆ ಕಾರಣವಾಗಿದೆ. ಹೀಗಾಗಿ ಗುರುವಿಗೆ ಗುಲಾಮನಾಗಿ ಸೇವೆ ಮಾಡುವ ಮೂಲಕ ಬದುಕನ್ನು ವಿಕಾಸ ಮಾಡಿಕೊಳ್ಳಬೇಕು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಲಿಂಗೈಕ್ಯ ಶಾಂತವೀರ ಸ್ವಾಮೀಜಿ 46ನೇ ವರ್ಷದ ಪುಣ್ಯಾರಾಧನೆ, ಜಾತ್ರಾ ಮಹೋತ್ಸವ ಅಂಗವಾಗಿ ಶುಕ್ರವಾರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯನ ಜೀವನ ಪಶು, ಪಕ್ಷಿ, ಪ್ರಾಣಿಗಳಿಂಗಿಂತ ವಿಭಿನ್ನವಾಗಿದೆ. ಹೀಗಾಗಿ ಮನುಷ್ಯನ ಬದುಕು ಒಂದು ಚೌಕಟ್ಟಿನಲ್ಲಿ ನಡೆದಾಗ ಮಾತ್ರ ಮೌಲ್ಯಾಧಾರಿತವಾಗಿ ಜೀವನ ಸಾಗಿಸಲು ಸಾಧ್ಯವಿದೆ ಎಂದರು.

ಸಿಂದಗಿ ಹಿರೇಮಠದ ಶಿವಾನಂದ ಶಿವಾಚಾರ್ಯರು ಮಾತನಾಡಿದರು.

ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ಮುಖಂಡರಾದ ಅಶೋಕ ಗುಳೇದ ಧರ್ಮಣ್ಣ ಭಂಗಿ, ಪ್ರವೀಣ ಗುಳಣ್ಣವರ, ನಾಗಪ್ಪ ಕೊಡಶೆಟ್ಟರ, ನಾಗಪ್ಪ ಪರಸನವರ, ರುದ್ರಪ್ಪ ಭಂಗಿ, ಚಂದ್ರಪ್ಪ ಬೆಳವತ್ತಿ, ದ್ಯಾಮಣ್ಣ ಸವಣೂರು, ಮಾಲತೇಶ ಮೂಡೂರ, ಚಂದ್ರಶೇಖರ ಮೆಟಿಮನಿ, ಬಸನಗೌಡ, ಹನುಮಂತಪ್ಪ ವಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಿಂದಗಿ ಮಠದ ಸೇವಾ ಸಮಿತಿ ಸದಸ್ಯರು. ಸುತ್ತಲಿನ ಗ್ರಾಮಗಳ ಭಕ್ತ ಸಮೂಹ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-22-638110673

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.