ಹಾವೇರಿ: ‘ಸಾಗರ ಮಾಲಾ ಯೋಜನೆಯಡಿಯಲ್ಲಿ ಕೈಗೆತ್ತಿಕೊಂಡಿರುವ ಹಾವೇರಿ–ಶಿರಸಿ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ದಿ ಕಾಮಗಾರಿಯನ್ನು ಏಪ್ರಿಲ್ 30ರೊಳಗಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.

ನಗರದ ಹಳೇ ಪಿ.ಬಿ. ರಸ್ತೆ ಬಳಿ ಇರುವ ಲೋಕಸಭಾ ಸದಸ್ಯರ ಜನಸಂಪರ್ಕ ಕಚೇರಿಯಲ್ಲಿ ಗುರುವಾರ ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ’ ನಡೆಸಿದ ಅವರು, ಕಾಮಗಾರಿ ಚುರುಕುಗೊಳಿಸುವಂತೆ ಹೇಳಿದರು.

‘ಹಾನಗಲ್ನ ನಾಲ್ಕರ ಕ್ರಾಸ್ನಿಂದ ಸಮ್ಮಸಗಿವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಅದನ್ನು ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ಹಾವೇರಿಯಿಂದ ಹಾನಗಲ್ ಸಂಪರ್ಕಿಸುವ ರಸ್ತೆಯು ಅಲ್ಲಲ್ಲಿ ಹಾಳಾಗಿದ್ದು, ಅದನ್ನು ಸರಿಪಡಿಸಬೇಕು’ ಎಂದರು.

‘ಯೋಜನೆಯ ಕಾಮಗಾರಿಯನ್ನು ವಿಳಂಬ ಮಾಡದೇ ಇದೇ ತಿಂಗಳು ಮುಗಿಸಬೇಕು. ರಸ್ತೆಯನ್ನು ವಾಹನ ಸಂಚಾರಕ್ಕೆ ಸುಗಮಗೊಳಿಸಬೇಕು. ನಾನು ಬಹಳ ಗಂಭೀರವಾಗಿ ಹೇಳುತ್ತಿದ್ದೇನೆ. ನನ್ನ ಜೊತೆಗೆ ಆಟ ಆಡಬೇಡಿ. ಕೆಲಸ ಸರಿಯಾಗಿ ಮಾಡದಿದ್ದರೆ ಹತ್ತು ವರ್ಷಗಳವರೆಗೆ ಕಪ್ಪು ಪಟ್ಟಿಗೆ ಸೇರಿಸುತ್ತೇನೆ. ನನಗೆ ಕೆಲಸ ಆಗಬೇಕು. ಬೇರೆ ರಾಜಕಾರಣಿಯಂತೆ ಅಲ್ಲ’ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

‘ಈಗಾಗಲೇ ಮಾಡಿರುವ 5 ಕಿ.ಮೀ ರಸ್ತೆಯಲ್ಲಿ ಸುಗಮವಾಗಿ ವಾಹನ ಸಂಚರಿಸುವಂತೆ ಮಾಡಬೇಕು. ಉಳಿದ 3 ಕಿ.ಮೀ ರಸ್ತೆಯನ್ನು ತ್ವರಿತವಾಗಿ ಮಾಡಬೇಕು. ಕಂತ್ರಿಕೊಪ್ಪದಿಂದ ಸಮ್ಮಸಗಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಅಕ್ಕಿಆಲೂರು ಬಸ್ ನಿಲ್ದಾಣದ ಎದುರಿಗೆ ರಸ್ತೆಯಲ್ಲಿ ನೀರು ನಿಲ್ಲುವುದನ್ನು ಸರಿಪಡಿಸಬೇಕು. ಸದ್ಯದಲ್ಲೇ ನಾನೇ ಕಾಮಗಾರಿ ವೀಕ್ಷಣೆಗೆ ಬರುತ್ತೇನೆ’ ಎಂದು ಹೇಳಿದರು.

ಕಾಮಗಾರಿ ಮಾಹಿತಿ ನೀಡಿದ ಅಧಿಕಾರಿಗಳು, ‘ಹಾನಗಲ್ ನಾಲ್ಕರ ಕ್ರಾಸ್ನಿಂದ ಹನುಮನಕೊಪ್ಪವರೆಗಿನ 4.5 ಕಿ.ಮೀ. ರಸ್ತೆ ಕಾಮಗಾರಿ ಮುಗಿದಿದೆ. ಹನುಮನಕೊಪ್ಪದಿಂದ ಬ್ಯಾಲಹಳ್ಳಿವರೆಗಿನ 2.5 ಕಿ.ಮೀ.ವರೆಗೆ ಕೆಲಸ ಮುಗಿದಿದೆ. ಸಬ್ ಗ್ರೇಡ್ ಮಾಡಿ ಡಿಬಿಎಂ ಮುಗಿಸಲು 25 ದಿನ ಬೇಕು. ಬಾಲಹಳ್ಳಿಯಿಂದ ಕತ್ರಿಕೊಪ್ಪ 1 ಕಿ.ಮೀ.ವರೆಗೆ ಡಿಬಿಎಂ ಮಾಡಿ, ಇದೇ ಮೇ 10ರ ನಂತರ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು’ ಎಂದರು.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಪ್ರಾಧಿಕಾರದ ಹೊನ್ನಾವರ ವಿಭಾಗದ ಯೋಜನಾ ನಿರ್ದೇಶಕ ಎಂ. ಶಿವಕುಮಾರ, ಎಂಜಿನಿಯರ್ ಅಮರ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-22-147590954

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.