ಹಾವೇರಿ: ಜಿಲ್ಲೆಯಾದ್ಯಂತ ಇತ್ತೀಚೆಗೆ ಸುರಿದ ಪೂರ್ವ ಮುಂಗಾರು ಮಳೆಯಿಂದಾಗಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯ ರೈತರು ಸೋಯಾಬೀನ್ ಬೆಳೆಯಲು ಮುಂದಾಗಿದ್ದು, ಅದೇ ಬೀಜಕ್ಕೆ ಈಗ ಬೇಡಿಕೆ ಬಂದಿದೆ. ಬಿತ್ತನೆ ಮುಗಿದು 7–10 ದಿನದೊಳಗೆ ಮಳೆಯಾಗದಿದ್ದರೆ ತೇವಾಂಶವಿಲ್ಲದೇ ಸೋಯಾಬೀನ್ ಬೆಳೆ ಹಾನಿಯಾಗುವ ಆತಂಕ ಶುರುವಾಗಿದೆ.

ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರಗಳ ಪೈಕಿ ಬಹುತೇಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ಮಾರಾಟ ನಡೆಯುತ್ತಿದೆ. ರೈತರು ಸರದಿಯಲ್ಲಿ ನಿಂತು ಬೀಜ ಖರೀದಿ ಮಾಡುತ್ತಿದ್ದಾರೆ. ಹಾವೇರಿ, ಕರ್ಜಗಿ, ಸವಣೂರು, ಶಿಗ್ಗಾವಿ, ಬಂಕಾಪುರ ಸೇರಿದಂತೆ ಹಲವು ಕೇಂದ್ರಗಳಲ್ಲಿ ಸೋಯಾಬೀನ್ ಹಾಗೂ ಶೇಂಗಾ ಬೀಜಕ್ಕೆ ಬೇಡಿಕೆ ಬಂದಿದೆ.

ಕಳೆದ ವರ್ಷ ಗೋವಿನಜೋಳದ ಬೆಲೆ ಕುಸಿತ ಕಂಡಿತ್ತು. ಸೋಯಾಬೀನ್ ದರ ಉತ್ತಮವಾಗಿತ್ತು. ಅದೇ ಕಾರಣಕ್ಕೆ ಈ ವರ್ಷ ರೈತರು, ಸೋಯಾಬೀನ್ ಬಿತ್ತನೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ, ತೇವಾಂಶ ಇಲ್ಲದ ಜಮೀನುಗಳಲ್ಲಿ ಸೋಯಾಬೀನ್ ಬಿತ್ತನೆ ಮಾಡಿದರೆ ಮೊಳಕೆಯೊಡೆಯುವ ಸಾಧ್ಯತೆ ಕಡಿಮೆ ಎಂಬುದಾಗಿ ತಜ್ಞರು ಹೇಳುತ್ತಿದ್ದಾರೆ.

ಜಿಲ್ಲೆಯಲ್ಲಿ ಮೇ 18ರಿಂದ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಶುರುವಾಗಿದೆ. ಮೇ 25ರ ಅಂತ್ಯಕ್ಕೆ 9210.50 ಕ್ವಿಂಟಲ್ ಸೋಯಾಬೀನ್ ಬೀಜ ಮಾರಾಟವಾಗಿದೆ. 481.20 ಕ್ವಿಂಟಲ್ ಶೇಂಗಾ, 224.7 ಕ್ವಿಂಟಲ್ ಹೈಬ್ರಿಡ್ ಗೋವಿನಜೋಳ, 34.5 ಕ್ವಿಂಟಲ್ ಭತ್ತ, 36.8 ಕ್ವಿಂಟಲ್ ತೊಗರಿ, 6.25 ಕ್ವಿಂಟಲ್ ಹೆಸರು ಬೀಜ ಮಾರಾಟವಾಗಿದೆ. ಈ ಅಂಕಿ–ಅಂಶ ಗಮನಿಸಿದರೆ, ಇದುವರೆಗೂ 9,993.95 ಕ್ವಿಂಟಲ್ ಬೀಜ ಮಾರಾಟವಾಗಿದೆ. ಸೋಯಾಬೀನ್ ಬೀಜಗಳ ಮಾರಾಟ ಹೆಚ್ಚಾಗಿದೆ.

‘2025ರ ಜೂನ್ವರೆಗೆ 7,291 ಕ್ವಿಂಟಲ್ ಸೋಯಾಬೀನ್ ಬೀಜ ಮಾರಾಟವಾಗಿತ್ತು. ಈ ವರ್ಷ ಮೇ 25ರ ಅಂತ್ಯಕ್ಕೆ 9,993.95 ಕ್ವಿಂಟಲ್ ಸೋಯಾಬೀನ್ ಬೀಜ ಮಾರಾಟವಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬೀಜ ಮಾರಾಟವಾಗುವ ಸಾಧ್ಯತೆಯಿದೆ. ಈ ವರ್ಷ 24 ಸಾವಿರದಿಂದ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಸೋಯಾಬೀನ್ ಬೆಳೆಯುವ ನಿರೀಕ್ಷೆ ಇದೆ. ಬಿತ್ತನೆ ಬೀಜಕ್ಕೆ ಜಿಲ್ಲೆಯಲ್ಲಿ ಕೊರತೆಯಿಲ್ಲ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತೇವಾಂಶ ಉತ್ತಮವಾಗಿದ್ದರೆ ಮಾತ್ರ, ಸೋಯಾಬೀನ್ ಬೆಳೆ ಚೆನ್ನಾಗಿ ಬೆಳೆಯುತ್ತದೆ. ಆದರೆ, ತೇವಾಂಶ ಕಡಿಮೆಯಾದರೆ ಮೊಳಕೆ ಬರುವುದು ಕಷ್ಟ. ಬೆಳೆಯೂ ಒಣಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ರೈತರು ಸೋಯಾಬೀನ್ ಬೀಜ ಖರೀದಿಸುತ್ತಿದ್ದಾರೆ. ಹೀಗಾಗಿ, ತೇವಾಂಶ ನೋಡಿಕೊಂಡು ಬಿತ್ತನೆ ಮಾಡುವುದು ಸೂಕ್ತ’ ಎಂದರು.

ದೇವಿಹೊಸೂರು ರೈತ ಶಂಕರಪ್ಪ, ‘ಕಳೆದ ವರ್ಷ ತಡವಾಗಿ ಮಳೆ ಬಂದರೂ ಸೋಯಾಬೀನ್ ಉತ್ತಮವಾಗಿ ಬೆಳೆದಿತ್ತು. ಈ ವರ್ಷವೂ ಅದನ್ನೇ ಬೆಳೆಯುತ್ತಿದ್ದೇವೆ’ ಎಂದರು.

ಆರ್ಎಸ್ಕೆಗಳಲ್ಲಿ ಬೀಜ ಖರೀದಿ ಮುಂದುವರಿಕೆ:

ರೈತ ಸಂಪರ್ಕ ಕೇಂದ್ರಗಳಲ್ಲಿ ಸೋಮವಾರವೂ ಬೀಜ ಖರೀದಿ ಮುಂದುವರಿಯಿತು. ಹಾವೇರಿ, ಕರ್ಜಗಿ, ಬಂಕಾಪುರ, ಶಿಗ್ಗಾವಿ, ಸವಣೂರು ಕೇಂದ್ರಗಳಲ್ಲಿ ರೈತರು ಸರದಿಯಲ್ಲಿ ನಿಂತು ಬೀಜ ಖರೀದಿಸಿದರು.

‘ಸ್ಥಿರವಾಗದ ಮಳೆ; ಮೊಳಕೆ ಅನುಮಾನ’

‘ಜಿಲ್ಲೆಯ ಕೆಲ ಭಾಗಗಳಲ್ಲಿ ಆರಂಭಿಕವಾಗಿ ಮಳೆಯಾಗಿದೆ. ಆದರೆ, ಮಳೆಗಾಲ ಇನ್ನೂ ಸ್ಥಿರವಾಗಿಲ್ಲ. ಮುಂಗಾರು ಮಳೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಸೋಯಾಬೀನ್ ಬೆಳೆಯುವ ರೈತರು ತಾಳ್ಮೆಯಿಂದ ವರ್ತಿಸಬೇಕು. ಮಣ್ಣಿನಲ್ಲಿ 3–5 ಸೆಂ.ಮೀ. ಆಳದವರೆಗೆ ತೇವಾಂಶ ಇದ್ದರಷ್ಟೇ ಬಿತ್ತನೆ ಮಾಡಬೇಕು. ಇಲ್ಲದಿದ್ದರೆ, ಬೀಜಗಳು ಮೊಳಕೆಯೊಡೆಯುವುದು ಅನುಮಾನವಾಗಿದೆ. ಹಾನಿ ಅನುಭವಿಸಬೇಕಾಗುತ್ತದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಮಲ್ಲಿಕಾರ್ಜುನ ಹಾಗೂ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎ.ಎಚ್. ಬಿರಾದಾರ್ ತಿಳಿಸಿದ್ದಾರೆ.

ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸೋಯಾಬೀನ್ ಬೆಳೆಯು ಅತ್ಯಂತ ಸೂಕ್ಷ್ಮವಾದ ಬೆಳೆ. ಇದರ ಬೆಳವಣಿಗೆಗೆ ತೇವಾಂಶ ಮುಖ್ಯವಾಗಿದೆ. ತಜ್ಞರ ಅಭಿಪ್ರಾಯ ಪಡೆದು, ಬಿತ್ತನೆ ಮಾಡುವುದು ಒಳ್ಳೆಯದು’ ಎಂದಿದ್ದಾರೆ.

‘ಮೊದಲ ಮಳೆಯಾಗುತ್ತಿದ್ದಂತೆ ಬಿತ್ತನೆ ಮಾಡಬಾರದು. ದೀರ್ಘಕಾಲದಲ್ಲಿ ಮಳೆಯಾಗದಿದ್ದರೆ, ಬೀಜ ಮೊಳಕೆಯೊಡೆಯುವುದಿಲ್ಲ. ಬೆಳೆಯು ಒಣಗುತ್ತದೆ. ನಿರಂತರವಾಗಿ ಮಳೆಯಾಗುವ ಸಂದರ್ಭದಲ್ಲಿ ಮಾತ್ರ ಬಿತ್ತನೆ ಮಾಡಬೇಕು’ ಎಂದು ಹೇಳಿದ್ದಾರೆ. ‘ಸದ್ಯದ ಮಳೆಯಲ್ಲಿ ರೈತರು ಜಮೀನನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧವಿಟ್ಟುಕೊಳ್ಳಬೇಕು. ತೇವಾಂಶ ಸಂರಕ್ಷಣೆಗಾಗಿ ಅನಗತ್ಯ ಉಳುಮೆ ತಪ್ಪಿಸಬೇಕು. 5 ಸೆಂ.ಮೀ.–7.50 ಸೆಂ.ಮೀ. ಮಳೆಯಾದ ನಂತರವೇ ಬಿತ್ತನೆ ಆರಂಭಿಸಬೇಕು. ಬಿತ್ತನೆ ನಂತರ, 7–10 ದಿನ ಮಳೆಯಾಗದೇ ಒಣ ಹವೆ ಇದ್ದರೆ ಮೊಳಕೆ ಸಮಸ್ಯೆ ಆಗುತ್ತದೆ. ಹೆಚ್ಚು ಮಳೆಯಾದರೆ, ನೀರು ನಿಲ್ಲದಂತೆಯೂ ಕಾಲುವೆ ವ್ಯವಸ್ಥೆ ಮಾಡಬೇಕು’ ಎಂದು ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-22-1653703052

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.