ಹಾವೇರಿ: ‘ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಹಳೇ ಪಿ.ಬಿ. ರಸ್ತೆಯ ಬದಿಯಲ್ಲಿದ್ದ ಗೂಡಂಗಡಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ತೆರವು ಮಾಡಲಾಗಿದ್ದು, ನಮಗೆ ಅನ್ಯಾಯವಾಗಿದೆ’ ಎಂದು ಬೀದಿಬದಿ ವ್ಯಾಪಾರಸ್ಥರು ಆರೋಪಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಇತ್ತೀಚೆಗೆ ನಿಯೋಗದ ಮೂಲಕ ತೆರಳಿದ್ದ ವ್ಯಾಪಾರಸ್ಥರು, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಿದರು. ‘ನಮಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ಬಸ್ ನಿಲ್ದಾಣದ ವಾಣಿಜ್ಯ ಸಮುಚ್ಛಯ ಕಟ್ಟಡದ ಎದುರು ರಸ್ತೆಯಲ್ಲಿ ಅಂಗಡಿಗಳನ್ನು ಇಟ್ಟುಕೊಂಡಿದ್ದೆವು. ಸುಮಾರು ವರ್ಷಗಳಿಂದ ಅಂಗಡಿಗಳ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡಿದ್ದೆವು. ಆದರೆ, ಇತ್ತೀಚೆಗೆ ವಾಣಿಜ್ಯ ಸಮುಚ್ಚಯ ಕಟ್ಟಡದ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗೆ ಟೆಂಡರ್ ಮೂಲಕ ನೀಡಲಾಗಿದೆ. ಇದೇ ವ್ಯಕ್ತಿಯ ಅಣತಿಯಂತೆ ಅಧಿಕಾರಿಗಳು, ನಮ್ಮ ಗೂಡಂಗಡಿಗಳನ್ನು ಮೇ 7ರಂದು ನಸುಕಿನಲ್ಲಿ ಏಕಾಏಕಿ ತೆರವು ಮಾಡಿದ್ದಾರೆ’ ಎಂದು ವ್ಯಾಪಾರಸ್ಥರು ದೂರಿದರು.

‘ಸುಮಾರು 30 ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದೇವೆ. ನಗರಸಭೆ ಅಧಿಕಾರಿಗಳು, ದಿಢೀರ್ ಸ್ಥಳಕ್ಕೆ ಬಂದು ನಮ್ಮನ್ನು ತೆರವು ಮಾಡಿದ್ದಾರೆ. ನೋಟಿಸ್ ಸಹ ನೀಡಿಲ್ಲ. ನಮಗೆ ಅದೇ ಸ್ಥಳದಲ್ಲಿ ಪುನಃ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಇಲ್ಲ, ಪರ್ಯಾಯ ಜಾಗವನ್ನು ಸೂಚಿಸಬೇಕು’ ಎಂದು ಒತ್ತಾಯಿಸಿದರು.

ವ್ಯಾಪಾರಿಗಳಾದ ಚೇತನಾ ಅರಳಿ, ಹೊನ್ನಪ್ಪ ಹೊಟ್ಟಿಈರಪ್ಪನವರ, ಬಸವರಾಜ ಕಲ್ಮುರಿ, ತುಕಾರಾಮ ಕಲಾಲ, ರೇಣವ್ವ ಬಡಕಣ್ಣನವರ, ನಾಗರಾಜ ಎಚ್.ಬಿ., ಬಸವರಾಜ ಮಾದರ, ಶೃತಿ ಎಚ್.ಬಿ., ಶಿಲ್ಪಾ ಬತ್ತಿಕೊಪ್ಪ, ಸುರೆಶ ಪೂಜಾರ, ವೀರಪ್ಪ ಅರಳಿ, ರಾಜು ಹೊಟ್ಟಿಈರಪ್ಪನವರ ನಿಯೋಗದಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-22-850333879

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.