ಹಾವೇರಿ: ‘ಜಿಲ್ಲೆಯ ಮೂರು ಕಾರ್ಖಾನೆಗಳಲ್ಲಿ ಸಕ್ಕರೆಯ ರಿಕವರಿ ದರವು ಶೇ 10.5ಕ್ಕಿಂತ ಹೆಚ್ಚಿಗೆ ಬರುತ್ತಿದೆ. ಆದರೆ, ಕಾರ್ಖಾನೆಯವರು ಶೇ 9.4ರಷ್ಟು ಮಾತ್ರ ರಿಕವರಿ ತೋರಿಸಿ ರೈತರು ಹಾಗೂ ಸರ್ಕಾರವನ್ನು ವಂಚಿಸುತ್ತಿದ್ದಾರೆ. ಈ ಮೂಲಕ ರೈತರ ಸುಲಿಗೆ ಮಾಡುತ್ತಿದ್ದಾರೆ’ ಎಂದು ಕಬ್ಬು ಬೆಳೆಗಾರರು ಆರೋಪಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಸಮ್ಮುಖದಲ್ಲಿ ಗುರುವಾರ ‘ಕಬ್ಬುಬೆಳೆಗಾರರು ಹಾಗೂ ಕಾರ್ಖಾನೆ ಪ್ರತಿನಿಧಿಗಳ ಸಭೆ’ ಜರುಗಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಕಬ್ಬು ಬೆಳೆಗಾರರು, ಕಾರ್ಖಾನೆ ವರ್ತನೆ ವಿರುದ್ಧ ಆಕ್ರೋಶ ಹೊರಹಾಕಿದರು.

‘ಪ್ರಸಕ್ತ ವರ್ಷದಲ್ಲಿ ಬೆಳಗಾರರು, ಕಾರ್ಖಾನೆಗೆ ತಮ್ಮ ಕಬ್ಬು ಸಾಗಣೆ ಮಾಡಿದ್ದಾರೆ. ಹದಿನೈದು ದಿನಕೊಮ್ಮೆ ಕಾರ್ಖಾನೆಗೆ ಭೇಟಿ ನೀಡಿದ್ದ ಸರ್ಕಾರದ ಅಧಿಕಾರಿಗಳು, ರಿಕವರಿ ಪರಿಶೀಲನೆ ಮಾಡಿಸಿದ್ದಾರೆ. ಪ್ರತಿ ಸಂದರ್ಭದಲ್ಲೂ ಶೆ 10.5ಕ್ಕಿಂತ ಹೆಚ್ಚು ರಿಕವರಿ ಬಂದಿದೆ. ಆದರೆ, ಕಾರ್ಖಾನೆಯವರು ಸಕ್ಕರೆ ಆಯುಕ್ತರಿಗೆ ಕಡಿಮೆ ರಿಕವರಿ ಎಂಬುದಾಗಿ ತಪ್ಪು ಮಾಹಿತಿ ನೀಡಿದ್ದಾರೆ. ಕಬ್ಬಿನ ದರ ಕಡಿಮೆ ಮಾಡುವ ಹುನ್ನಾರ ಅವರದ್ದಾಗಿದೆ’ ಎಂದು ಬೆಳೆಗಾರರು ದೂರಿದರು.

‘ಉತ್ತಮ ರಿಕವರಿ ಇರುವುದು ಪರಿಶೀಲನೆಯಿಂದ ಗೊತ್ತಾಗಿದೆ. ಕಾರ್ಖಾನೆಯವರು ನೀಡುತ್ತಿರುವ ತಪ್ಪು ಮಾಹಿತಿಯನ್ನು ನಾವು ಒಪ್ಪುವುದಿಲ್ಲ. ಜಿಲ್ಲಾಧಿಕಾರಿಯವರು ಕೂಡಲೇ ಪರಿಶೀಲನೆ ನಡೆಸಿ, ನೈಜ ರಿಕವರಿ ಎಷ್ಟಿದೆ? ಎಂಬುದನ್ನು ತಿಳಿದುಕೊಳ್ಳಬೇಕು. ಸಕ್ಕರೆ ಆಯುಕ್ತರಿಗೆ ವರದಿ ನೀಡಬೇಕು. ಮುಂಬರುವ ವರ್ಷದಲ್ಲಿ ಕಬ್ಬಿಗೆ ಹೆಚ್ಚಿನ ದರ ಕೊಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಹೋರಾಟ ಮಾಡಲಾಗುವುದು’ ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ‘ರಿಕವರಿ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

‘ಕಬ್ಬು ಸಾಗಿಸಿದ 14 ದಿನದೊಳಗೆ ಬಿಲ್ ಪಾವತಿಸಬೇಕೆಂಬ ನಿಯಮವಿದೆ. ಆದರೆ, ಇದುವರೆಗೂ ಬಿಲ್ ಪಾವತಿ ಮಾಡಿಲ್ಲ. 2025–26ನೇ ಸಾಲಿನಲ್ಲಿ ₹ 70 ಕೋಟಿ ಬಿಲ್ ಬಾಕಿ ಇದೆ. ಒಂದು ವಾರದ ಒಳಗಾಗಿ ಬಿಲ್ ಕೊಡಿಸಬೇಕು’ ಎಂದು ರೈತರು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ, ‘ನಿಯಮದ ಪ್ರಕಾರವೇ ಬಿಲ್ ಪಾವತಿ ಮಾಡಬೇಕು. ಈಗಾಗಲೇ ಬಿಲ್ ಪಾವತಿ ತಡವಾಗಿದೆ. ವಾರದೊಳಗೆ ಬಿಲ್ ಪಾವತಿ ಮಾಡಬೇಕು’ ಎಂದು ಕಾರ್ಖಾನೆಯವರಿಗೆ ತಾಕೀತು ಮಾಡಿದರು. ಅದಕ್ಕೆ ಕಾರ್ಖಾನೆಯವರು ಒಪ್ಪಿಗೆ ವ್ಯಕ್ತಪಡಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಮೂರು ಕಾರ್ಖಾನೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-22-695614585

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.