ಹಾವೇರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ನದಿಯಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸುತ್ತಿರುವ ಕಾರ್ಮಿಕರು, ನೀರನ್ನು ಸೂಸಿ ಅದರಲ್ಲಿ ಸಿಗುವ ಅಲ್ಪಸ್ವಲ್ಪ ಚಿನ್ನವನ್ನು ಮಾರಿ ಜೀವನ ಸಾಗಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಬೇಸಿಗೆಯ ಬಿಸಿ ತೀರಾ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ವರದಾ ನದಿಯ ನೀರು ಸಹ ಅಲ್ಲಲ್ಲಿ ಬತ್ತಿದೆ. ಕೆಲವು ಕಡೆಗಳಲ್ಲಿ ಮಾತ್ರ ನೀರು ನಿಂತುಕೊಂಡಿದೆ. ಅದೇ ನೀರಿನಲ್ಲಿಯೇ ಈಗ ಚಿನ್ನದ ಹುಡುಕಾಟ ನಡೆಯುತ್ತಿದೆ.

ಶಿವಮೊಗ್ಗದಿಂದ ಹಾವೇರಿ ಜಿಲ್ಲೆಗೆ ಬಂದಿರುವ ಇರ್ಲರ್ ಸಮುದಾಯದ ಕಾರ್ಮಿಕರು, ವರದಾ ನದಿಯ ನೀರಿನಲ್ಲಿ ಇಳಿದು ಚಿನ್ನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನು ನೋಡಿ, ಸ್ಥಳೀಯ ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಹಲವು ದಿನಗಳ ನಂತರ, ಕಾರ್ಮಿಕರಿಗೆ ಅಲ್ಪಸ್ವಲ್ಪ ಚಿನ್ನದ ಕುರುಹು ಇರುವ ವಸ್ತು ಸಿಗುತ್ತಿದೆ. ಅದೇ ವಸ್ತುವನ್ನು ಮಾರಿ ಬಂದ ಹಣದಲ್ಲಿ ಜೀವನ ಸಾಗಿಸುವುದಾಗಿ ಕಾರ್ಮಿಕರು ಹೇಳುತ್ತಿದ್ದಾರೆ.

‘ನದಿಯ ಉದ್ದಕ್ಕೂ ನೂರಾರು ಪ್ರಕಾರದ ಕಲ್ಲುಗಳಿವೆ. ಮರಳು ಸಹ ಯಥೇಚ್ಚವಾಗಿ ಸಿಗುತ್ತದೆ. ಇದರ ನಡುವೆಯೇ ಅಲ್ಲಲ್ಲಿ ಚಿನ್ನದ ಕುರುಹುಗಳು ಇರುತ್ತವೆ. ಅದಕ್ಕಾಗಿಯೇ ನಾವು ಹುಡುಕಾಟ ನಡೆಸುತ್ತಿವೆ. ಶೇ 100ರಷ್ಟು ಗುಣಮಟ್ಟದ ಚಿನ್ನವೇನು ನಮಗೆ ಸಿಗುವುದಿಲ್ಲ. ಕಡಿಮೆ ದರ್ಜೆಯ ಚಿನ್ನ ಸಿಗುತ್ತದೆ. ಅದರಿಂದ ಒಬ್ಬ ವ್ಯಕ್ತಿ ದಿನಕ್ಕೆ ₹ 200ರಿಂದ ₹500 ಸಂಪಾದಿಸುತ್ತಾನೆ. ಚಿನ್ನದ ಹುಡುಕಾಟವೆಂದರೆ, ಅದರಿಂದ ನಾವೇನು ದೊಡ್ಡ ಶ್ರೀಮಂತರಾಗಿಲ್ಲ. ಹೊಟ್ಟೆ–ಬಟ್ಟೆಗೆ ಎಲ್ಲವೂ ಸಾಕಾಗುತ್ತಿದೆ’ ಎಂದು ಕಾರ್ಮಿಕರೊಬ್ಬರು ಹೇಳಿದರು.

‘ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ, ಇಲ್ಲಿಗೆ ಬಂದಿದ್ದೇವೆ. ಮರಳಿನ ಕಪ್ಪು ಮಣ್ಣಿನಲ್ಲಿ ಚಿನ್ನದ ಕುರುಹುಗಳು ಸಿಗುತ್ತವೆ. ನದಿ ನೀರನ್ನು ಸೂಸಿ, ಮರಳನ್ನು ತೊಳೆಯುತ್ತೇವೆ. ಕೊನೆಯಲ್ಲಿ ಚಿನ್ನದ ಕುರುಹು ಸಿಕ್ಕರೂ ಸಿಗಬಹುದು. ಸಿಗದಿದ್ದರೆ, ಪುನಃ ಪ್ರಯತ್ನ ಮುಂದುವರಿಸುತ್ತೇವೆ’ ಎಂದರು.

‘ಕೈಯಲ್ಲಿ ಜರಡಿ ಹಿಡಿದು ನದಿಯೊಳಗೆ ಬಂಗಾರದ ಕಣಗಳ ಹುಡುಕಾಟ ಮಾಡುತ್ತೇವೆ. ಒಂದು ಕಣ ಸಿಕ್ಕರೂ ನಮಗೆ ಅನ್ನ ಸಿಕ್ಕಂತೆ. ಬೇಸಿಗೆ ಮುಗಿಯುವ ತನಕ ನಮ್ಮ ಈ ಕಾಯಕ ಮುಂದುವರಿಯುತ್ತದೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-22-198307900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.