ಹಾವೇರಿ: ಜಿಲ್ಲಾ ಕೇಂದ್ರವಾಗಿರುವ ಹಾವೇರಿ ನಗರದಲ್ಲಿ ಕಸ ವಿಲೇವಾರಿ ಹಾಗೂ ಸ್ವಚ್ಛತೆ ಕೊರತೆ ಕಣ್ಣಿಗೆ ರಾಚುತ್ತಿದೆ. ರಸ್ತೆಯ ಅಕ್ಕ–ಪಕ್ಕ, ಖುಲ್ಲಾ ಜಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಸ ಎಸೆಯುತ್ತಿದ್ದಾರೆ. ಇದರಿಂದ ಇಡೀ ಪ್ರದೇಶ ಗಲೀಜಾಗುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಈ ಕಸದ ಸಮಸ್ಯೆಗೆ ಕಾರಣರಾದ ಜನರನ್ನು ಜಾಗೃತಿಗೊಳಿಸಲು ಮಕ್ಕಳು ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ವಿದ್ಯಾನಗರ ‘ಅ’ ಬ್ಲಾಕ್ನಲ್ಲಿರುವ ಕೆಲ ನಿವಾಸಿಗಳು, ತಮ್ಮ ಮನೆಯ ಕಸವನ್ನು ರಸ್ತೆ ಪಕ್ಕದಲ್ಲಿ ಹಾಕುತ್ತಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮಕ್ಕಳು ತಂಡ ಕಟ್ಟಿಕೊಂಡು, ಕಸದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಪೋಷಕರು ಖರ್ಚಿಗಾಗಿ ನೀಡಿದ ಹಣದಲ್ಲಿಯೇ ಬ್ಯಾನರ್ ಮಾಡಿಸಿಕೊಂಡಿದ್ದಾರೆ.

ಕಸದ ರಾಶಿ ಇರುವ ಕಡೆಯಲ್ಲಿ ಹೋಗಿ ಬ್ಯಾನರ್ ಹಿಡಿದು ನಿಲ್ಲುತ್ತಿರುವ ಮಕ್ಕಳು, ‘ಈ ಜಾಗದಲ್ಲಿ ಕಸ ಎಸೆದು ಪರಿಸರ ಹಾನಿ ಮಾಡಬೇಡಿ’ ಎಂದು ಕೋರುತ್ತಿದ್ದಾರೆ. ‘ನಮ್ಮ ನಗರ ಸ್ವಚ್ಛ ನಗರ. ಇಲ್ಲಿ ಕಸ ಹಾಕಿದವರು ಕಸಕ್ಕೆ ಸಮಾನರು. ಇಲ್ಲಿ ಕಸ ಹಾಕಿದವರಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಬ್ಯಾನರ್ನಲ್ಲಿ ಬರೆಸಲಾಗಿದೆ. ಕಸ ಎಸೆಯುವ ನಿವಾಸಿಗಳನ್ನು ಪ್ರಶ್ನಿಸುತ್ತಿರುವ ಮಕ್ಕಳು, ಅವರಿಗೆ ಸ್ವಚ್ಛತೆ ಪಾಠ ಮಾಡುತ್ತಿದ್ದಾರೆ.

ಮಕ್ಕಳಾದ ವಿನಯ ಕಲ್ಮನಿ, ಅದಿತಿ ಗಿರಿಯಪ್ಪನವರ, ಸುಪ್ರಿತಾ ಸೋಮನಾಳ, ಸನ್ನಿದಿ ಕಲ್ಮನಿ, ಸಂಕೇತ್ ಮತ್ತೂರ ಹಾಗೂ ಇತರು ತಂಡದಲ್ಲಿದ್ದಾರೆ. ಭಾನುವಾರ ಹಾಗೂ ರಜಾ ದಿನದಂದು ಈ ಅಭಿಯಾನವನ್ನು ಮಾಡುತ್ತಿರುವುದಾಗಿ ಮಕ್ಕಳು ತಿಳಿಸಿದರು.

‘ಮುಂದಿನ ಭವಿಷ್ಯಕ್ಕಾಗಿ ಸ್ವಚ್ಛ ಹಾವೇರಿ ನೀಡಿ’ ಎಂದು ಆಗ್ರಹಿಸುತ್ತಿರುವ ಮಕ್ಕಳು, ‘ಎಲ್ಲರೂ ಆರೋಗ್ಯದಿಂದ ಇರಬೇಕಾದರೆ, ಪರಿಸರ ಸ್ವಚ್ಛವಿರಬೇಕು. ಇದರ ಹೊಣೆ ಎಲ್ಲರ ಮೇಲಿದೆ’ ಎಂದು ಹೇಳುತ್ತಿದ್ದಾರೆ.

‘ನಗರಸಭೆಯ ಕಸದ ವಾಹನಗಳು ನಿತ್ಯವೂ ಮನೆಯ ಎದುರು ಬರುತ್ತವೆ. ಆದರೆ, ಕೆಲವರು ವಾಹನಕ್ಕೆ ಕಸ ಹಾಕುವುದಿಲ್ಲ. ರಸ್ತೆಯ ಪಕ್ಕದಲ್ಲಿ ಕಸ ಎಸೆಯುತ್ತಿದ್ದಾರೆ’ ಎಂದು ಮಕ್ಕಳು ದೂರುತ್ತಿದ್ದಾರೆ.

‘ರಸ್ತೆ ಪಕ್ಕದಲ್ಲಿ ಕಸ ಹಾಕುವುದರಿಂದ ಸೊಳ್ಳೆಗಳು ಹೆಚ್ಚಾಗುತ್ತದೆ. ದುರ್ವಾಸನೆ ಬರುತ್ತದೆ. ಆಹಾರಕ್ಕಾಗಿ ನಾಯಿಗಳು ಕಸ ಬಳಿ ಬರುತ್ತವೆ. ಮಕ್ಕಳ ಮೇಲೂ ದಾಳಿ ಮಾಡುತ್ತವೆ. ಕಸದಿಂದ ನಾನಾ ಆರೋಗ್ಯ ಸಮಸ್ಯೆ ಉಂಟಾಗುತ್ತದೆ’ ಎಂದು ಮಕ್ಕಳು ಹೇಳುತ್ತಿದ್ದಾರೆ.

ನಾಯಿ ಗುಂಪು ಸೇರಿ ದಾಳಿ ಭಯ ಬ್ಯಾನರ್ ಹಿಡಿದು ಮಕ್ಕಳ ಜಾಗೃತಿ

‘ಅವಿದ್ಯಾವಂತರಂತೆ ವರ್ತನೆ’

‘ವಿದ್ಯಾನಗರ ಬಸವೇಶ್ವರನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯಾವಂತರೇ ಹೆಚ್ಚಾಗಿ ನೆಲೆಸಿದ್ದಾರೆ. ಇದರಲ್ಲಿ ಹಲವರು ನಗರಸಭೆಯ ವಾಹನಕ್ಕೆ ಕಸ ಹಾಕುತ್ತಿದ್ದಾರೆ. ಕೆಲವರು ಮಾತ್ರ ರಸ್ತೆಯ ಅಕ್ಕ–ಪಕ್ಕದಲ್ಲಿ ಹಾಗೂ ಖುಲ್ಲಾ ಜಾಗದಲ್ಲಿ ಕಸ ಎಸೆಯುತ್ತಿದ್ದಾರೆ’ ಎಂದು ಮಕ್ಕಳು ದೂರಿದರು. ‘ಮನೆ ಮುಂದೆ ಆಟವಾಡುವಾಗ ಹಾಗೂ ಶಾಲೆಗೆ ಹೋಗಿ ಬರುವಾಗ ಕಸದ ರಾಶಿ ನೋಡುತ್ತೇವೆ. ನಮ್ಮ ಎದುರೇ ಜನರು ಕಸ ತಂದು ಎಸೆದು ಹೋಗುತ್ತಿದ್ದಾರೆ. ಈ ವಿದ್ಯಾವಂತರಿಗೆ ಏನು ಹೇಳಬೇಕು ಎಂಬುದು ಗೊತ್ತಾಗುವುದಿಲ್ಲ. ಹಿರಿಯರೇ ಈ ರೀತಿ ಮಾಡಿದರೆ ನಾವು ಅವರಿಂದ ಏನು ಕಲಿಯಬೇಕು’ ಎಂದು ಮಕ್ಕಳು ಪ್ರಶ್ನಿಸಿದರು. ‘ನಮ್ಮ ನಗರವನ್ನು ನಾವೇ ಸ್ವಚ್ಛವಾಗಿಟ್ಟುಕೊಳ್ಳಬೇಕು. ಎಲ್ಲವನ್ನೂ ನಗರಸಭೆಯವರು ಮಾಡಲಿ ಎಂಬ ಮನಸ್ಥಿತಿ ಸರಿಯಲ್ಲ. ಅವರ ಸಹಕಾರ ಪಡೆದು ನಾವೂ ನಗರದ ಬಗ್ಗೆ ಕಾಳಜಿ ವಹಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ಬದಲು ವಾಹನಕ್ಕೆ ನೀಡಬೇಕು. ಮನೆಯಿಂದಲೇ ಸ್ವಚ್ಛತೆ ಶುರುವಾದರೆ ನಗರ ಸ್ವಚ್ಛವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.