ಹಿರೇಕೆರೂರು; ತಾಲ್ಲೂಕಿನ ಚನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿಗೆ ಹಾಹಾಕಾರ ಶುರುವಾಗಿದ್ದು, ನೀರು ಸಿಗದೇ ಜನರು ಹೈರಾಣಾಗಿದ್ದಾರೆ. ಬಳಸಲು ಹಾಗೂ ಕುಡಿಯಲು ನೀರು ಇಲ್ಲದಿದ್ದರಿಂದ ಆಕ್ರೋಶಗೊಂಡಿರುವ ಜನರು, ಚನ್ನಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ಚನ್ನಳ್ಳಿ ಗ್ರಾಮ ಪಂಚಾಯತಿ ಎದುರು ಸೇರಿದ್ದ ಚನ್ನಳ್ಳಿ, ಚನ್ನಳ್ಳಿ ತಾಂಡಾ, ದೂದಿಹಳ್ಳಿ ಗ್ರಾಮಗಳ ಜನರು, ‘ನೀರಿನ ವ್ಯವಸ್ಥೆ ಮಾಡಿ’ ಎಂದು ಘೋಷಣೆ ಕೂಗಿದರು. ಖಾಲಿ ಕೂಡಗಳು ಹಾಗೂ ನೀರಿನ ತಳ್ಳುಗಾಡಿ ಸಮೇತ ಗ್ರಾಮಸ್ಥರು ಪಂಚಾಯಿತಿ ಕಚೇರಿಗೆ ಬಂದಿದ್ದರು.

‘ನಮ್ಮ ಗ್ರಾಮಗಳಲ್ಲಿ ನಿತ್ಯವೂ ನೀರಿನ ಸಮಸ್ಯೆ ಉಂಟಾಗುತ್ತಿದೆ. ನೀರು ಸಿಗುವುದೇ ದುಸ್ತರವಾಗಿದೆ. ಹಲವು ಕಡೆಗಳಲ್ಲಿ ಕೂಳವೆ ಬಾವಿಗಳು ಬತ್ತಿವೆ. ಗ್ರಾಮ ಪಂಚಾಯಿತಿ ವತಿಯಿಂದಲೂ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಜನರು ಆಕ್ರೋಶ ಹೊರಹಾಕಿದರು.‘ಗ್ರಾಮದ ಬಹುತೇಕ ಜನರು, ಕೃಷಿ ಹಾಗೂ ಕೂಲಿ ನೆಚ್ಚಿ ಜೀವನ ನಡೆಸುತ್ತಿದ್ದಾರೆ. ಈಗ ನೀರಿನ ಸಮಸ್ಯೆ ವಿಪರೀತವಾಗಿರುವುದರಿಂದ, ಪ್ರತಿಯೊಬ್ಬರು ನೀರು ತರಲು ಸಮಯ ಮೀಸಲಿಟ್ಟಿದ್ದಾರೆ. ಕೃಷಿ ಹಾಗೂ ಕೂಲಿ ಕೆಲಸ ಬಿಟ್ಟು ನೀರು ತರುವುದೇ ದೊಡ್ಡ ಕೆಲಸ ಆಗುತ್ತಿದೆ’ ಎಂದು ಅಳಲು ತೋಡಿಕೊಂಡರು.

‘ಚನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚನ್ನಳ್ಳಿ, ಚನ್ನಳ್ಳಿ ತಾಂಡಾ, ದೂದಿಹಳ್ಳಿ, ಚನ್ನಳ್ಳಿ ಪ್ಲಾಟ್, ವರಹ ಮತ್ತು ವರಹ ಪ್ಲಾಟ್ ಗ್ರಾಮಗಳು ಬರುತ್ತವೆ. ಈ ಗ್ರಾಮಗಳಲ್ಲಿ ಸಾವಿರಾರು ಕುಟುಂಬಗಳು ವಾಸವಾಗಿವೆ. ಈಗ ಎಲ್ಲ ಕಡೆಯೂ ನೀರಿನ ಸಮಸ್ಯೆ ಉಲ್ಭಣಿಸಿದೆ’ ಎಂದು ಹೇಳಿದರು.

‘ನೀರಿನ ಸಮಸ್ಯೆ ಬಗೆಹರಿಸದಿ ದ್ದರೆ, ಗಂಭೀರ ಸ್ವರೂಪದ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-22-131651201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.