ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಳ್ಳುವ ಹಾವೇರಿ ಜಿಲ್ಲೆಯು, ಪ್ರತಿ ವರ್ಷವೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸುತ್ತಿದೆ. ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲೇ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಗರದ ಮನೆಗಳಿಗೆ ಕೇವಲ ಒಂದು ಗಂಟೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವರದಾ ಹಾಗೂ ತುಂಗಭದ್ರಾ ನದಿಗಳು ಹರಿದಿರುವ ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಳೆಗಾಲದಲ್ಲಷ್ಟೇ ನದಿಗಳು ತುಂಬಿ ಹರಿಯುತ್ತವೆ. ಬೇಸಿಗೆಯಲ್ಲಿ ನದಿಗಳಲ್ಲಿ ನೀರು ಬತ್ತುತ್ತದೆ. ಇದೇ ಅವಧಿಯಲ್ಲಿ ನದಿ ತೀರದ ಗ್ರಾಮಗಳಲ್ಲಿಯೂ ನೀರಿನ ಹಾಹಾಕಾರ ಸೃಷ್ಟಿಯಾಗುತ್ತದೆ.

ಹಾವೇರಿ ನಗರಕ್ಕೆ ತುಂಗಭದ್ರಾ ನದಿ ಹರಿದಿರುವ ಕಂಚಾರಗಟ್ಟಿ ಪ್ರದೇಶದಿಂದ ನೀರು ಸರಬರಾಜು ಮಾಡಲಾಗುತ್ತದೆ. ಹೆಗ್ಗೇರಿ ಕೆರೆಯಿಂದಲೂ ನೀರು ಪೂರೈಕೆ ಮಾಡುವ ವ್ಯವಸ್ಥೆಯಿದೆ. ಈಗ ಬೇಸಿಗೆ ಇರುವುದರಿಂದ, ತುಂಗಭದ್ರಾ ನದಿಯಲ್ಲಿಯೂ ನೀರಿನ ಅಭಾವ ಉಂಟಾಗಿದೆ. ಇದೇ ಕಾರಣಕ್ಕೆ ನಗರಸಭೆಯಿಂದ, ನಗರದ ಮನೆಗಳಿಗೆ ಒಂದು ಅವಧಿಯಲ್ಲಿ ಒಂದು ಗಂಟೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ. ‘ಒಂದು ಗಂಟೆಯಷ್ಟೇ ನೀರು ಬಿಟ್ಟರೆ, ಹೇಗೆ ಜೀವನ ನಡೆಸುವುದು’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಹಾವೇರಿಗೆ ದಿನಕ್ಕೆ 10 ಎಂ.ಎಲ್.ಡಿ ನೀರು ಬೇಕು. ನೀರು ಪೂರೈಕೆ ವ್ಯವಸ್ಥೆಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಆಗಾಗ, ಪೈಪ್ಗಳು ಒಡೆಯುತ್ತಿವೆ. ಇದರ ನಡುವೆಯೇ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ನಾನಾ ಕಾರಣಗಳಿಂದ ನೀರು ಪೂರೈಕೆ ಅವಧಿಯಲ್ಲೂ ವ್ಯತ್ಯಾಸವಾಗುತ್ತಿದೆ.

‘ನಗರಸಭೆಯವರು 10ರಿಂದ 15 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ. ಅದು ಸಹ ಸಮರ್ಪಕವಾಗಿ ನೀರು ಬಿಡುವುದಿಲ್ಲ. ಇದರಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ನಗರದಲ್ಲಿದ್ದರೂ ನೀರು ಸಿಗುತ್ತಿಲ್ಲ’ ಎಂದು ಜನರು ಅಸಮಾಧಾನ ಹೊರಹಾಕಿದರು.

‘ಹಾವೇರಿ ನಗರದಲ್ಲಿ ನಿರಂತರ ನೀರು ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಆ ಕಾಮಗಾರಿಯೂ ಸಮರ್ಪಕವಾಗಿ ನಡೆದಿಲ್ಲ. ಹಾವೇರಿಯಲ್ಲಿ ಸುಸಜ್ಜಿತ ರೀತಿಯಲ್ಲಿ ನೀರು ಪೂರೈಕೆ ಮಾಡುವ ವ್ಯವಸ್ಥೆ ರೂಪಿಸಬೇಕು. ಜೊತೆಗೆ, ಮನೆಗೆ ನೀರು ತಲುಪುವವರೆಗೂ ಕಾಮಗಾರಿ ಪ್ರಗತಿ ಗಮನಿಸಬೇಕು. ಕಾಮಗಾರಿ ನಡೆಯುತ್ತಿದೆ ಎಂದು ಹೇಳಿ ಸುಮ್ಮನಾದರೆ, ಜನರಿಗೆ ನೀರು ಸಿಗುವುದಿಲ್ಲ’ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು.

5 ದಿನಗಳಿಗೊಮ್ಮೆ ನೀರು: ‘ಹಾವೇರಿ ನಗರಕ್ಕೆ 8–10 ದಿನಕ್ಕೊಮ್ಮೆ ನೀರು ಪೂರೈಕೆ ಆಗುತ್ತಿತ್ತು. ಈಗ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. 4–5 ದಿನಕ್ಕೊಮ್ಮೆ ನೀರು ಬಿಡುತ್ತಿದ್ದೇವೆ. ಆದರೆ, ಬೇಸಿಗೆಯಲ್ಲಿ ನೀರು ಅಭಾವವಿದೆ. ಹೀಗಾಗಿ, 4–5 ದಿನಕ್ಕೊಮ್ಮೆ ಒಂದು ಗಂಟೆ ಮಾತ್ರ ನೀರು ಪೂರೈಸಲಾಗುತ್ತಿದೆ’ ಎಂದು ನಗರಸಭೆ ಪೌರಾಯುಕ್ತ ಕಾಂತರಾಜು ಅವರು ‘ಪ್ರಜಾವಾಣಿ’ಗೆ ಹೇಳಿದರು.

‘ತಡವಾಗಿ ನೀರು ಬಿಡುವ ಬಗ್ಗೆ ಜನರಿಂದ ಸಾಕಷ್ಟು ದೂರುಗಳಿದ್ದವು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಹ ಈ ಬಗ್ಗೆ ಸಾಕಷ್ಟು ಬಾರಿ ಸೂಚನೆಗಳನ್ನು ನೀಡಿದ್ದರು. ಆದರೆ, ಹಲವು ಕಾರಣಗಳಿಂದ ನೀರು ಸರಬರಾಜು ಸಮರ್ಪಕವಾಗಿ ಮಾಡಲು ಆಗುತ್ತಿರಲಿಲ್ಲ. ಈಗ, ಜನರಿಗೆ ಅಗತ್ಯವಿರುವಷ್ಟು ನೀರು ಲಭ್ಯವಾಗುವಂತೆ ಪೂರೈಕೆ ಮಾಡಲಾಗುತ್ತಿದೆ’ ಎಂದರು.

‘ಹಾವೇರಿ ನಗರದ ಪ್ರತಿಯೊಂದು ಪ್ರದೇಶಕ್ಕೂ 4–5 ದಿನಗಳಿಗೊಮ್ಮೆ ಒಂದು ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ 15 ದಿನದಿಂದ ಈ ವ್ಯವಸ್ಥೆ ಜಾರಿಯಲ್ಲಿದೆ. ಒಂದು ದಿನ ಮಾತ್ರ ಸಮಸ್ಯೆಯಾಗಿತ್ತು. ಅದನ್ನು ತ್ವರಿತವಾಗಿ ಬಗೆಹರಿಸಿ, ಜನರಿಗೆ ನೀಡು ಕೊಡಲಾಗಿದೆ’ ಎಂದು ಹೇಳಿದರು.

ಪೋಲಾಗುತ್ತಿದ್ದ ನೀರು: ‘8–10 ದಿನಗಳಿಗೊಮ್ಮೆ ನಾಲ್ಕರಿಂದ ಐದು ಗಂಟೆ ನೀರು ನೀಡಲಾಗುತ್ತಿತ್ತು. ಇದರಿಂದ, ಹಲವು ಕಡೆಗಳಲ್ಲಿ ನೀರು ಪೋಲಾಗುತ್ತಿತ್ತು. ಆದರೆ, ಈಗ ಒಂದು ಗಂಟೆ ಮಾತ್ರ ನೀರು ಬಿಡಲಾಗುತ್ತಿದೆ. ಜನರು ಸಹ ಪೋಲು ಮಾಡದೇ ನೀರು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ’ ಎಂದು ಪೌರಾಯುಕ್ತ ಕಾಂತರಾಜು ತಿಳಿಸಿದರು.

ವಿದ್ಯುತ್ ಸಮಸ್ಯೆ ವಿಪರೀತ: ‘ಹಾವೇರಿ ನಗರಕ್ಕೆ ಬೇಕಾಗುವಷ್ಟು ನೀರು ಲಭ್ಯವಿದೆ. ಆದರೆ, ವಿದ್ಯುತ್ ಸಮಸ್ಯೆಯೇ ವಿಪರೀತವಾಗಿದೆ. ನೀರು ಸರಬರಾಜು ಮಾಡಲು ವಿದ್ಯುತ್ ಅಗತ್ಯವಿದೆ. ಆದರೆ, ಪದೇ ಪದೇ ಸಮಸ್ಯೆ ಆಗುತ್ತಿದೆ. ಇದೇ ಕಾರಣಕ್ಕೆ, ಅಂದುಕೊಂಡ ಸಮಯದಲ್ಲಿ ನೀರು ಪೂರೈಕೆ ಮಾಡಲು ಅಡ್ಡಿಯಾಗುತ್ತಿದೆ’ ಎಂದು ಕಾಂತರಾಜು ಹೇಳಿದರು.

‘ಕಂಚಾರಗಟ್ಟಿಯಿಂದ ಹಾವೇರಿ ನಗರಕ್ಕೆ ಪೈಪ್ ಮೂಲಕ ನೀರು ಬರುತ್ತದೆ. ಮಾರ್ಗಮಧ್ಯೆ ಹಲವು ಬಾರಿ ಪೈಪ್ಗಳು ಒಡೆಯುತ್ತಿದೆ. ಕೆಲ ಕಿಡಿಗೇಡಿಗಳು ಇಂಥ ಕೃತ್ಯ ಎಸಗುತ್ತಿದ್ದಾರೆ. ಪೈಪ್ ಒಡೆದ ಸಂದರ್ಭದಲ್ಲಿಯೂ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-22-546856785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.