ಹಾವೇರಿ: ‘ಕೃಷಿ ಪ್ರಧಾನ ಜಿಲ್ಲೆ’ ಎನಿಸಿಕೊಂಡಿರುವ ಹಾವೇರಿಯಲ್ಲಿ ವರದಾ–ತುಂಗಭದ್ರಾ ನದಿಗಳು ಹರಿಯುತ್ತಿವೆ. ಜಿಲ್ಲೆಯ ಕೆರೆಗಳೂ ವಿಶಾಲವಾಗಿವೆ. ಮಳೆಗಾಲದಲ್ಲಿ ನೀರಿನ ಲಭ್ಯತೆಯೂ ಉತ್ತಮವಾಗಿದೆ. ಆದರೆ, ನೀರನ್ನು ವ್ಯವಸ್ಥಿತ ರೀತಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಬೇಸಿಗೆಯಲ್ಲಿ ಜನರಿಗೆ ಪೂರೈಸಲು ಸಮರ್ಪಕ ಯೋಜನೆಗಳಿಲ್ಲ!

ಇದರಿಂದಾಗಿ ಕೆಲ ಯೋಜನೆಗಳು ಜಾರಿಯಾದರೂ ವ್ಯವಸ್ಥೆಯ ಲೋಪದಿಂದಾಗಿ ಕಾಮಗಾರಿಯು ಅಪೂರ್ಣ ಸ್ಥಿತಿಯಲ್ಲೇ ಅಂತ್ಯವಾಗುತ್ತಿದೆ. ಜಿಲ್ಲೆಯ ಜನರು, ಪ್ರತಿವರ್ಷ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುತ್ತಿದ್ದಾರೆ. ಈ ವರ್ಷವೂ ಜನರು ನೀರಿಗಾಗಿ ಹೋರಾಟ ಮಾಡುವ ಸ್ಥಿತಿ ಬಂದೊದಗಿದೆ.

ಜಿಲ್ಲೆಯ ಬ್ಯಾಡಗಿ, ಹಾನಗಲ್, ಹಾವೇರಿ, ಶಿಗ್ಗಾವಿ, ಸವಣೂರು, ಹಿರೇಕೆರೂರು, ರಟ್ಟೀಹಳ್ಳಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈಗಾಗಲೇ ನೀರಿನ ಸಮಸ್ಯೆ ಉಲ್ಬಣಿಸಿದೆ. ಜಿಲ್ಲಾಡಳಿತವು ತಾತ್ಕಾಲಿಕ ಕ್ರಮಗಳ ಮೂಲಕ ನೀರು ಸರಬರಾಜಿಗೆ ವ್ಯವಸ್ಥೆ ಮಾಡಿದೆ. ಅಷ್ಟಾದರೂ ಜನರಿಗೆ ದಿನಬಳಕೆಗೆ ಅಗತ್ಯದಷ್ಟು ನೀರು ಲಭ್ಯವಾಗುತ್ತಿಲ್ಲ. ‘ನಮಗೆ ನೀರು ದೊರಕಿಸಲು ಶಾಶ್ವತ ಪರಿಹಾರ ಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಹಾವೇರಿ, ಸವಣೂರು, ಬಂಕಾಪುರ, ಶಿಗ್ಗಾವಿ ಪಟ್ಟಣದ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಐದರಿಂದ 15 ದಿನಕ್ಕೊಮ್ಮೆ ನೀರು ಬಿಡುವ ಸ್ಥಿತಿ ಬಂದಿದೆ. ಈ ಪಟ್ಟಣದ ಜನರಿಗೆ, ನೀರು ಸಂಗ್ರಹಿಸಿಟ್ಟುಕೊಳ್ಳುವುದೇ ದೊಡ್ಡ ಸವಾಲಾಗಿದೆ. ಮನೆಗೊಂದು ತಳ್ಳುಗಾಡಿ ಇಟ್ಟುಕೊಂಡಿರುವ ಜನರು, ನೀರು ತರುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.

‘ಬೇಸಿಗೆ ಆರಂಭವಾಗುತ್ತಿದ್ದಂತೆ ಜಿಲ್ಲೆಯ 286 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಭಣಿಸುತ್ತದೆ’ ಎಂಬ ಮಾಹಿತಿ ಜಿಲ್ಲಾಡಳಿತದ ಬಳಿಯಿದೆ. ಪ್ರತಿ ವರ್ಷವೂ ಪತ್ರಿಕಾ ಪ್ರಕಟಣೆ ಹೊರಡಿಸುವ ಜಿಲ್ಲಾಡಳಿತ, ‘286 ಗ್ರಾಮಗಳಲ್ಲಿ ನೀರಿಗೆ ವ್ಯವಸ್ಥೆ ಮಾಡಿದ್ದೇವೆ. ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆದಿದ್ದೇವೆ’ ಎಂದಷ್ಟೇ ಹೇಳಿ ದಿನದೂಡುತ್ತದೆ. ಆದರೆ, ಈ ಗ್ರಾಮಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವೇನು? ಎಂಬುದನ್ನು ಯೋಚಿಸುತ್ತಿಲ್ಲ.

ಜಿಲ್ಲೆಯ ಆಡಳಿತ ವರ್ಗದ ಮುಖ್ಯಸ್ಥರಾದ ಜಿಲ್ಲಾಧಿಕಾರಿ ಹಾಗೂ ಸರ್ಕಾರದ ಕೆಲಸಗಳ ಪ್ರಗತಿಯ ಹೊಣೆ ಹೊತ್ತ ಜಿಲ್ಲಾ ಉಸ್ತುವಾರಿ ಸಚಿವರು, ಆಗಾಗ ಬದಲಾಗುತ್ತಾರೆ. ಇವರೆಲ್ಲರೂ ತಾತ್ಕಾಲಿಕ ಪರಿಹಾರಕ್ಕಷ್ಟೇ ಸೀಮಿತವಾಗುವ ಕೆಲಸ ಮಾಡಿ ಹೋಗುತ್ತಿದ್ದಾರೆ. ಶಾಶ್ವತ ಪರಿಹಾರದತ್ತ ಗಮನ ಹರಿಸುತ್ತಿಲ್ಲ. ಇದೇ ಕಾರಣಕ್ಕೆ, ಹಾವೇರಿ ಜಿಲ್ಲೆಯ ನೀರಿನ ಸಮಸ್ಯೆಗೆ ಇಂದಿಗೂ ಪರಿಹಾರ ಸಿಕ್ಕಿಲ್ಲವೆಂಬ ನೋವು ಜನರಲ್ಲಿದೆ.

ನಿರಂತರ ನೀರು, ಮನೆ ಮನೆಗೆ ನೀರು, ಅಮೃತ ಯೋಜನೆ, ಬಹುಗ್ರಾಮ ಯೋಜನೆ ಸೇರಿ ಹಲವು ಯೋಜನೆಗಳು ಜಿಲ್ಲೆಯಲ್ಲಿ ಜಾರಿಯಲ್ಲಿವೆ. ಆದರೆ, ಒಂದೂ ಯೋಜನೆಯು ಪೂರ್ಣಗೊಂಡಿಲ್ಲ. ಜನರಿಗೆ ನೀರು ಕೊಡಲು ಆಗುತ್ತಿಲ್ಲ. ಇದೇ ವಿಚಾರವಾಗಿಯೇ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಪ್ರತಿ ಬಾರಿಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯುತ್ತಿದ್ದಾರೆ.

‘ಜನರಿಗೆ ನೀರು ಕೊಡಲು ಜಿಲ್ಲೆಯಲ್ಲಿ ಹಲವು ಯೋಜನೆಗಳಿವೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಯೋಜನೆ ಪೂರ್ಣಗೊಳಿಸಲು ಆಗುತ್ತಿಲ್ಲ. ನಮಗೂ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಜನರು ನಮ್ಮ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಶಿವಾನಂದ ಪಾಟೀಲ ಬಹಿರಂಗವಾಗಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಅಷ್ಟಾದರೂ ಅಧಿಕಾರಿಗಳು, ಯೋಜನೆ ಯಶಸ್ವಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಗತಿ ಪರಿಶೀಲನೆ ನೆಪದಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ.

‘ಸಭೆಯಲ್ಲಿ ಸಚಿವರು ಹೇಳುತ್ತಾರೆ. ವಾಪಸು ಹೋಗುತ್ತಾರೆ’ ಎಂಬ ಭಾವನೆಯಲ್ಲಿಯೇ ಅಧಿಕಾರಿಗಳು ದಿನ ಕಳೆಯುತ್ತಿದ್ದಾರೆ. ಈ ಮನಸ್ಥಿತಿಯಿಂದಲೇ ಜಿಲ್ಲೆಯ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.

ಗುತ್ತಿಗೆದಾರರ ಪರವಿರುವ ಅಧಿಕಾರಿಗಳು?: ಬೆಂಗಳೂರಿನ ವಿಧಾನಸೌಧದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಶಿವಾನಂದ ಪಾಟೀಲ, ‘ಹಾವೇರಿ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸಲು ಬಹುಗ್ರಾಮ, ನಿರಂತರ ನೀರು ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಗುತ್ತಿಗೆದಾರರೇ ನೇರ ಕಾರಣ’ ಎಂದು ನೇರವಾಗಿ ಆರೋಪಿಸಿದ್ದರು.

‘ಯೋಜನೆಗಳ ಅಂತಿಮ ದಿನವನ್ನು ಹತ್ತಕ್ಕೂ ಹೆಚ್ಚು ಬಾರಿ ವಿಸ್ತರಣೆ ಮಾಡಿಸಿಕೊಂಡಿದ್ದಾರೆ. ಅಷ್ಟಾದರೂ ಜನರಿಗೆ ನೀಡು ಕೊಡಲು ಆಗಿಲ್ಲ. ಮೇಲಿಂದ ಮೇಲೆ ನೊಟೀಸ್ ನೀಡಿ, ದಂಡ ವಿಧಿಸಿದರೂ ಗುತ್ತಿಗೆದಾರರು ಕ್ಯಾರೇ ಎಂದಿಲ್ಲ. ನಿರ್ಲಕ್ಷ್ಯ ವಹಿಸುತ್ತಿರುವ ಅವರ ಮೇಲೆ ಕಠಿಣ ಕ್ರಮದ ಅನಿವಾರ್ಯತೆಯಿದೆ. ಅಧಿಕಾರಿಗಳ ಬೇಜವಾಬ್ದಾರಿಯೂ ಇದರಲ್ಲಿದೆ’ ಎಂದು ಕಿಡಿಕಾರಿದ್ದರು.

ಆದರೆ, ಯೋಜನೆ ಅನುಷ್ಠಾನದಲ್ಲಿ ಲೋಪ ಎಸಗಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ‘ಕೇವಲ ಭಾಷಣಕ್ಕಷ್ಟೇ ಸೀಮಿತವಾದ ಸಚಿವರ ನಡೆಯೂ ಅನುಮಾನಕ್ಕೆ ಕಾರಣವಾಗಿದೆ’ ಎಂದು ಜನರು ಆರೋಪಿಸುತ್ತಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-22-898466357

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.