ಹಾವೇರಿ: ಇಲ್ಲಿಯ ಬಸವೇಶ್ವರನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 10 ಲಕ್ಷ ಲೀಟರ್ ಸಾಮರ್ಥ್ಯದ ಜಲ ಸಂಗ್ರಹಗಾರ (ಟ್ಯಾಂಕ್) ನಿರ್ಮಿಸಲು ನಗರಸಭೆ ಮುಂದಾಗಿದೆ. ಈ ಕಾಮಗಾರಿ ಆರಂಭಿಸಲು ಜೆಸಿಬಿ ಯಂತ್ರದ ಸಮೇತ ಸೋಮವಾರ ಸ್ಥಳಕ್ಕೆ ಬಂದಿದ್ದ ಎಂಜಿನಿಯರ್ಗಳ ಕೆಲಸಕ್ಕೆ ಕೆಲ ಸ್ಥಳೀಯರು ಅಡ್ಡಿಪಡಿಸಿದ್ದರಿಂದ, ಬಿಗುವಿನ ವಾತಾವರಣ ನಿರ್ಮಾಣವಾಯಿತು.

ನಗರದಲ್ಲಿ ಬೇಸಿಗೆ ಶುರುವಾಗಿದ್ದು, ಅಲ್ಲಲ್ಲಿ ನೀರಿನ ಹಾಹಾಕಾರ ಉಂಟಾಗುತ್ತಿದೆ. ಇದೇ ಕಾರಣಕ್ಕೆ ನಗರಸಭೆಯು ಕುಡಿಯುವ ನೀರಿನ ಕಾಮಗಾರಿ ಆರಂಭಕ್ಕೆ ಆದ್ಯತೆ ನೀಡಿದೆ. ಸರ್ಕಾರದ ಹಣಕಾಸು ವರ್ಷ ಮುಗಿಯುತ್ತಿದ್ದು, ಅದಕ್ಕೂ ಮುನ್ನವೇ ಕೆಲಸಕ್ಕೆ ಚಾಲನೆ ನೀಡಲು ನಗರಸಭೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಬಸವೇಶ್ವರನಗರ ಬಳಿಯ ಗಣಪತಿ ದೇವಸ್ಥಾನದ ಕಿರು ಉದ್ಯಾನಕ್ಕೆ ಹೊಂದಿಕೊಂಡು, ದೊಡ್ಡ ಉದ್ಯಾನವಿದೆ. ಅದೇ ಸ್ಥಳದ ಒಂದು ಬದಿಯಲ್ಲಿ ಜನ ಸಂಗ್ರಹಗಾರ ನಿರ್ಮಿಸಲು ನಗರಸಭೆಯು ಅಮೃತ 2 ಯೋಜನೆಯಡಿ ಕೆಲಸ ಆರಂಭಿಸುತ್ತಿದೆ. ಯೋಜನೆಯ ರೂಪುರೇಷೆ ಸಿದ್ಧಪಡಿಸಿ ಜಾಗ ಗುರುತಿಸಿದ್ದ ಎಂಜಿನಿಯರ್ಗಳ ತಂಡ, ಪೊಲೀಸರ ಭದ್ರತೆಯೊಂದಿಗೆ ಜೆಸಿಬಿ ಯಂತ್ರದ ಸಮೇತ ಸೋಮವಾರ ಸ್ಥಳಕ್ಕೆ ಬಂದಿತ್ತು. ಉದ್ಯಾನದೊಳಗೆ ಹೋಗಲು ಮುಂದಾಗಿತ್ತು. ಸ್ಥಳಕ್ಕೆ ಬಂದ ಕೆಲ ಸ್ಥಳೀಯರು, ಕೆಲಸಕ್ಕೆ ಅಡ್ಡಿಪಡಿಸಿದರು. ಪರಸ್ಪರ ವಾಗ್ವಾದವೂ ನಡೆಯಿತು.

‘ಅಂಬೇಡ್ಕರ್ ಭವನ ಬಳಿ ದೊಡ್ಡ ಟ್ಯಾಂಕ್ ನಿರ್ಮಿಸಲಾಗಿದೆ. ಅದನ್ನು ಇದುವರೆಗೂ ಉಪಯೋಗ ಮಾಡಿಲ್ಲ. ಹಣ ವ್ಯರ್ಥವಾಗುತ್ತಿದೆ. ಈಗ ಉದ್ಯಾನದಲ್ಲಿ ಪುನಃ ಮತ್ತೊಂದು ಟ್ಯಾಂಕ್ ನಿರ್ಮಿಸಲು ಹೊರಟಿದ್ದಾರೆ. ಆರ್ಥಿಕ ವರ್ಷ ಮುಗಿಯುವ ಸಂದರ್ಭದಲ್ಲಿಯೇ ಅಧಿಕಾರಿಗಳು, ತರಾತುರಿಯಲ್ಲಿ ಟ್ಯಾಂಕ್ ನಿರ್ಮಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಣ ಕಬಳಿಸುವ ಸಂಶಯವಿದೆ. ಉದ್ಯಾನದಲ್ಲಿ ಗಿಡಗಳಿವೆ. ಅದರ ಅಭಿವೃದ್ಧಿಗಾಗಿ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಈಗ ಉದ್ಯಾನ ಜಾಗದಲ್ಲಿ ಟ್ಯಾಂಕ್ ನಿರ್ಮಾಣ ಮಾಡುವುದು ಸರಿಯಲ್ಲ. ನಗರಸಭೆಯ ಕಾಮಗಾರಿಯನ್ನು ಪ್ರಶ್ನಿಸಿ ನಾವು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದೇವೆ. ಅದು ಇತ್ಯರ್ಥವಾಗುವವರೆಗೂ ಟ್ಯಾಂಕ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕೆಲ ಸ್ಥಳೀಯರು ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಎಂಜಿನಿಯರ್ಗಳು, ‘ಜನರಿಗೆ ಕುಡಿಯುವ ನೀರು ನೀಡಲು ಆದ್ಯತೆ ನೀಡಲಾಗಿದೆ. ಕಂಚಾರಗಟ್ಟಿಯಿಂದ ಹಾವೇರಿಗೆ ನೀರು ತರಲು ₹ 150 ಕೋಟಿ ಮೊತ್ತದ ಯೋಜನೆ ಜಾರಿಗೆ ಬರುತ್ತಿದೆ. ಹೀಗೆ, ತಂದ ನೀರನ್ನು ಸಂಗ್ರಹ ಮಾಡಿಟ್ಟುಕೊಳ್ಳಲು ಟ್ಯಾಂಕ್ಗಳ ಅಗತ್ಯವಿದೆ. ಹೀಗಾಗಿ, ಟ್ಯಾಂಕ್ ನಿರ್ಮಿಸುತ್ತಿದ್ದೇವೆ. ಕೆಲಸಕ್ಕೆ ಅಡ್ಡಿಪಡಿಸಬೇಡಿ’ ಎಂದು ಕೋರಿದರು. ಅಷ್ಟಾದರೂ ಸ್ಥಳೀಯರು, ಕೆಲಸಕ್ಕೆ ಅವಕಾಶ ನೀಡಲಿಲ್ಲ. ಪೌರಾಯುಕ್ತ ಎಚ್. ಕಾಂತರಾಜು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಸ್ಥಿತಿ ತಿಳಿಗೊಳಿಸಿದ ಇನ್ಸ್ಪೆಕ್ಟರ್: ಜಟಾಪಟಿ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಹರ ಠಾಣೆ ಇನ್ಸ್ಪೆಕ್ಟರ್ ಮೋತಿಲಾಲ್ ಪವಾರ, ಕಾಮಗಾರಿ ಬಗ್ಗೆ ಮಾಹಿತಿ ಪಡೆದರು. ಕೆಲಸಕ್ಕೆ ಅಡ್ಡಿಪಡಿಸಿದ ಕೆಲ ಸ್ಥಳೀಯರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಇದು ಜನರ ಕುಡಿಯುವ ನೀರಿಗೆ ಸರ್ಕಾರ ಮಾಡುತ್ತಿರುವ ಕೆಲಸ. ಉದ್ಯಾನವು ಸರ್ಕಾರದ ಆಸ್ತಿ. ಅದೇ ಜಾಗದಲ್ಲಿ ಎಂಜಿನಿಯರ್ಗಳು ಕೆಲಸಕ್ಕೆ ಅನುಮತಿ ಪಡೆದಿದ್ದಾರೆ. ಆದೇಶವೂ ಇದೆ. ಅವರ ಕೆಲಸಕ್ಕೆ ಅಡ್ಡಿಪಡಿಸುವುದು ಕಾನೂನುಬಾಹಿರ’ ಎಂದು ತಿಳಿ ಹೇಳಿದರು.

ಸ್ಥಳೀಯರು, ‘ಕೆಲಸ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇವೆ. ಅದರ ವಿಚಾರಣೆ ನಡೆಯುತ್ತಿದೆ. ಆದೇಶ ಬರುವವರೆಗೂ ಕಾಮಗಾರಿ ಆರಂಭಿಸಬಾರದು’ ಎಂದರು.

ಇನ್ಸ್ಪೆಕ್ಟರ್, ‘ನಿಯಮದ ಪ್ರಕಾರವೇ ಎಂಜಿನಿಯರ್ಗಳು ಕೆಲಸ ಆರಂಭಿಸುತ್ತಿದ್ದು, ಅವರಿಗೆ ಅವಕಾಶ ನೀಡಿ. ‘ಕೆಲಸ ಮಾಡಬೇಡಿ’ ಎಂದು ನ್ಯಾಯಾಲಯವು ತಡೆಯಾಜ್ಞೆ ನೀಡಿದ್ದರೆ, ಪ್ರತಿ ತೋರಿಸಿ. ಕೆಲಸ ನಿಲ್ಲಿಸುತ್ತೇವೆ. ಪ್ರತಿ ಇಲ್ಲವಾದರೆ, ಕೆಲಸಕ್ಕೆ ಸಹಕರಿಸಿ’ ಎಂದು ಹೇಳಿದರು. ಬಳಿಕ, ಎಂಜಿನಿಯರ್ ಹಾಗೂ ಸ್ಥಳೀಯರು ಮಾತನಾಡಿಕೊಂಡರು. ಮುಖಂಡರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಂಡ ಬಳಿಕವೇ ಕಾಮಗಾರಿ ಆರಂಭಿಸುವ ಬಗ್ಗೆ ಪರಸ್ಪರ ಒಪ್ಪಿಗೆ ವ್ಯಕ್ತಪಡಿಸಿದರು. ಬಳಿಕವೇ ಪರಿಸ್ಥಿತಿ ತಿಳಿಗೊಂಡಿತು. ಸದ್ಯಕ್ಕೆ ಉದ್ಯಾನದಲ್ಲಿ ಯಥಾಸ್ಥಿತಿ ಮುಂದುವರಿದಿದೆ.

‘ಕೆಲಸಕ್ಕೆ ಅಡ್ಡಿಪಡಿಸಿದರೆ ಪ್ರಕರಣ’ ‘ನಗರಸಭೆಯ ಎಂಜಿನಿಯರ್ಗಳು ಸರ್ಕಾರದ ಅಧಿಕಾರಿಗಳು. ಜನರಿಗಾಗಿ ಅವರು ಕೆಲಸ ಮಾಡುತ್ತಿದ್ದಾರೆ. ನಿಮಗೆ ನೀರು ಕೊಡಲು ಟ್ಯಾಂಕ್ ಕಟ್ಟುತ್ತಿದ್ದಾರೆ. ಅವರ ಕೆಲಸಕ್ಕೆ ಅಡ್ಡಿಪಡಿಸಿದರೆ ಎಂಜಿನಿಯರ್ ಅವರಿಂದ ದೂರು ಪಡೆದು ಪ್ರಕರಣ ದಾಖಲಿಸಲಾಗುವುದು’ ಎಂದು ಇನ್ಸ್ಪೆಕ್ಟರ್ ಮೋತಿಲಾಲ್ ಪವಾರ ಎಚ್ಚರಿಕೆ ನೀಡಿದರು. ‘ಕೆಲಸದ ಬಗ್ಗೆ ಏನೇ ತಕರಾರು ಇದ್ದರೆ ನ್ಯಾಯಾಲಯದಿಂದ ಆದೇಶ ತನ್ನಿ. ಕೆಲಸ ನಿಲ್ಲಿಸುವ ಆದೇಶವಿದ್ದರೆ ಕೆಲಸ ನಿಲ್ಲಿಸುತ್ತೇನೆ. ಅದನ್ನು ಬಿಟ್ಟು ವಿನಾಕಾರಣ ಕೆಲಸಕ್ಕೆ ಅಡ್ಡಿಪಡಿಸುವುದು ಶೋಭೆಯಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.