ಹಿರೇಕೆರೂರ: ಮೇ ತಿಂಗಳ ಕೊನೆಯ ವಾರದಲ್ಲಿ ಹಮ್ಮಿಕೊಳ್ಳುವ ಬಕ್ರೀದ್ ಹಬ್ಬಕ್ಕೆ ನಡೆಯುವ ಗೋಹತ್ಯೆ ಹಾಗೂ ಗೋವುಗಳ ಸಾಗಣೆ ತಡೆಯಬೇಕು ಎಂದು ಆಗ್ರಹಿಸಿ ಶುಕ್ರವಾರ ತಾಲ್ಲೂಕಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ತಾಲ್ಲೂಕಿನ ತಹಶೀಲ್ದಾರ್ ಎಂ. ರೇಣುಕಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಹಿಂದೂ ಜಾಗರಣ ವೇದಿಕೆಯ ತಾಲ್ಲೂಕು ಸಂಯೋಜಕ ಚಂದ್ರಶೇಖರ ತೇರೆದಹಳ್ಳಿ ಮಾತನಾಡಿ, ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೂ, ಬಕ್ರೀದ್ಗೆ ಪ್ರಾಣಿಗಳ ಹತ್ಯೆ ನಡೆಯುತ್ತದೆ. ಆದ್ದರಿಂದ ಸಂಬಂಧಿತರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ತಾಲ್ಲೂಕಿಗೆ ಪ್ರವೇಶಿಸುವ ಎಲ್ಲ ವಾಹನಗಳನ್ನು ನಾಕಾ ಬಂದಿ ಹಾಕುವ ಮೂಲಕ ತಪಾಸಣೆ ನಡೆಸಿ ಗೋವುಗಳನ್ನು ಸಾಗಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು’ ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಬಕ್ರೀದ್ ಹಬ್ಬದ ದಿನ ಗೋವಧೆ ಮಾಡದೇ ಹಬ್ಬ ಆಚರಿಸಬೇಕು. ಒಂದು ವೇಳೆ ಗೋ ವಧೆ ನಡೆದರೆ ಗೋ ಪ್ರೇಮಿಗಳೆಲ್ಲರೂ ಹೋರಾಟಕ್ಕೆ ಇಳಿಯಬೇಕಾಗುತ್ತದೆ’ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈಗಾಗಲೇ ಅಕ್ರಮ ಕಸಾಯಿಖಾನೆ ಬಗ್ಗೆ ಪ್ರಕರಣ ದಾಖಲಾಗಿರುವವರನ್ನು ಕರೆಯಿಸಿ ಎಚ್ಚರಿಕೆ ನೀಡಿ, ಸಂಭಾವ್ಯ ಸ್ಥಳಗಳಲ್ಲಿ ಪೊಲೀಸ್ ನಿಗಾ ವಹಿಸಿ ಅಲ್ಲಿ ಅಪರಾಧ ಆಗದಂತೆ ನೋಡಿಕೊಳ್ಳಬೇಕು. ಬೀಟ್ ಪೊಲೀಸರ ಮೂಲಕ ಅಕ್ರಮ ಕಸಾಯಿಖಾನೆ ಗುರುತಿಸಿ ಅದನ್ನು ಬಂದ್ ಮಾಡಿಸಬೇಕು. ಖಾಲಿ ಜಾಗ, ಮೈದಾನ, ಪರಿತ್ಯಕ್ತ ಕಟ್ಟಡ ಮುಂತಾದೆಡೆ ಬಲಿ ಕೊಡಲಿಕ್ಕಾಗಿ ಗೋವುಗಳನ್ನು ಸಂಗ್ರಹಿಸಿ ಇಡುವ ಸಂಭವವಿದ್ದು ಮೇ 28ರ ಮೊದಲು ಹಾಗೆ ಇಡದಂತೆ ಸಾರ್ವಜನಿಕರಿಗೆ ಆದೇಶ ಹೊರಡಿಸಬೇಕು. ಮತ್ತು ಶೇಖರಿಸಿದರೆ ಅವುಗಳನ್ನು ತಕ್ಷಣ ವಶಪಡಿಸಿ ಗೋಶಾಲೆಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದರು.

ವಕೀಲ ಹಾಲೇಶ ಆರಿಕಟ್ಟಿ, ಬೋಜೇಗೌಡ ನೂಲಗೇರಿ, ಪುನೀತ ಮಡಿವಾಳರ, ಧೀರಾಜ್ ಕೊಲ್ಲಾಪುರ , ಶಿವು ಸೋಮಲಾಪುರ, ನಂದೀಶ ತಿಪ್ಪಕ್ಳವರ, ಮಲ್ಲಿಕ ಕೋಡಿ, ಪ್ರಸಾದ್ ಗುಜ್ಜರ್, ಪ್ರಮೋದ ಮಡಿವಾಳ, ಧರ್ಮರಾಜ ಎತ್ತಿನಹಳ್ಳಿ, ಶಿವಕುಮಾರ ಪ್ಯಾಟೆರ, ತಿಲಕ್ ಚಕ್ರಸಾಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-22-1635895649

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.