ಹಿರೇಕೆರೂರ: ತಾಲ್ಲೂಕಿನ ದೂಪಹಳ್ಳಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಹಾಗೂ ಬಸವೇಶ್ವರ ದೇವರ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಸಡಗರದಿಂದ ಜರುಗಿತು.

ಬೆಳಿಗ್ಗೆ ದೊಡ್ಡ ರಥವನ್ನು ಬಣ್ಣ-ಬಣ್ಣದ ಬಟ್ಟೆ, ನಿಶಾನೆ, ಹೂವಿನ ಮಾಲೆ ಹಾಗೂ ವಿವಿಧ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು. ನಂತರ ಗ್ರಾಮದ ಭಕ್ತರು ರಥಕ್ಕೆ ಎಡೆ ನೈವೇದ್ಯ ಮಾಡಿದ ಬಳಿಕ ರಥದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗ್ರಾಮದ ಉಡುಚಲಮ್ಮದೇವಿ ದೇವಸ್ಥಾನದಿಂದ ಮುಖ್ಯ ಬೀದಿಯಲ್ಲಿ ಸಾಗಿ ಬಸವೇಶ್ವರ ದೇವಸ್ಥಾನದವರೆಗೆ ಗುಗ್ಗಳ ಹಾಗೂ ವಾದ್ಯ ಮೇಳಗಳೊಂದಿಗೆ ರಥವನ್ನು ಎಳೆಯಲಾಯಿತು.

ಬಳಿಕ ರಥಕ್ಕೆ ಕಟ್ಟಿದ್ದ ಅಲಂಕಾರಿಕ ವಸ್ತುಗಳನ್ನು, ನಿಶಾನೆಗಳನ್ನು ಹರಾಜು ಮಾಡಲಾಯಿತು. ರಥೋತ್ಸವದ ವೇಳೆ ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಹರಕೆ ತೀರಿಸಿದರು. ನಂತರ ಭಕ್ತರಿಗೆ ಹಣ್ಣು, ಕಾಯಿ ನೈವೇದ್ಯ ಮಾಡಿಕೊಡಲಾಯಿತು. ಶುಕ್ರವಾರ ಸ್ವಾಮಿಯ ಹೂವಿನ ರಥೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-22-810595406

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.