ಹಿರೇಕೆರೂರ: ಈ ಹಬ್ಬ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದ್ದು, ಹೋಳಿ ಆಚರಣೆಯಿಂದ ಮಳೆ ಬೆಳೆ ಚೆನ್ನಾಗಿ ಆಗಿ, ಎಲ್ಲರೂ ಸುಖ ಶಾಂತಿಯಿಂದ ಬಾಳಲಿ ಎಂದು ಬಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಬಸವನಬೀದಿಯ ಹೋಳಿ ಹಬ್ಬ ಆಚರಣಾ ಸಮೀತಿಯ ವತಿಯಿಂದ ನಡೆದ ಬಸವೇಶ್ವರ ದೇವಸ್ಥಾನದ ಎದುರು ಶನಿವಾರ ಡಿ.ಜೆ ಸೌಂಡ್ ಸಿಸ್ಟಮ್ನಿಂದ ಸಂಗೀತ ಕಾರ್ಯಕ್ರಮ ಮತ್ತು ಹಲಗೆ ವಾದ್ಯ ಮತ್ತು ಓಕಳಿಯೊಂದಿಗೆ ಆರಂಭಗೊಂಡ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹೋಳಿ ಹಬ್ಬ ಆಚರಣಾ ಸಮೀತಿ ಅಧ್ಯಕ್ಷ ರಾಜು ತಿಪ್ಪಶೆಟ್ಟಿ ಅಧ್ಯಕ್ಷತೆಯಲ್ಲಿ ಪಟ್ಟಣದ ಬಸವನಬೀದಿಯ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಹೋಳಿ ಹಬ್ಬದ ನಿಮಿತ್ತ ಪ್ರತಿಷ್ಟಾಪಿಸಿದ್ದ ರತಿ ಮನ್ಮಥರ{ಕಾಮಣ್ಣನ} ಮೂರ್ತಿಗಳಿಗೆ ಶುಕ್ರವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಿ, ಕಾಮದಹನ ಮಂಟಪವನ್ನು ನಿರ್ಮಿಸಲಾಯಿತು.

ಬಸವೇಶ್ವರ ದೇವಸ್ಥಾನದ ಎದುರು ಶನಿವಾರ ಡಿ.ಜೆ ಸೌಂಡ್ ಸಿಸ್ಟಮ್ನಿಂದ ಸಂಗೀತ ಕಾರ್ಯಕ್ರಮ ಮತ್ತು ಹಲಗೆ ವಾದ್ಯ ಮತ್ತು ಓಕಳಿಯೊಂದಿಗೆ ಆರಂಭಗೊಂಡ , ನಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಡಿ.ಜೆ.ಸೌಂಡ್ ಸಂಗೀತಕ್ಕೆ ಯುವಕರು, ಸಾರ್ವಜನಿಕರು ಕುಣಿದು ಕುಪ್ಪಳಿಸಿದರು.

ದಾರಿಯುದ್ಧಕ್ಳೂ ಟ್ರಾಕ್ಟರ್ನಲ್ಲಿ ಬ್ಯಾರಲಿನಲ್ಲಿ ತುಂಬಿರಿಸಿದ್ದ ವಿವಿದ ಬಣ್ಣವನ್ನು ಎಲ್ಲರಿಗೂ ಎರೆಚಲಾಯಿತು. ಚೌಡಿ ಸರ್ಕಲ್, ಬಸ್ ನಿಲ್ದಾಣ, ವಿದ್ಯಾನಗರ, ಚೌಡಿ ಸರ್ಕಲ್, ಕಾಳಿದಾಸ ನಗರದ ಮೂಲಕ ಹಾದು ಮರಳಿ ಪೇಟೆ ದೇವಸ್ಥಾನಕ್ಕೆ ಆಗಮಿಸಿತು. ನಂತರ ಹಲಗೆ ವಾದ್ಯದ ಮೂಲಕ ಅಂಬೇಡ್ಕರ್ ನಗರಕ್ಕೆ ಸಾಗಿ ಅಲ್ಲಿ ಮನೆಯೊಂದರಲ್ಲಿ ಬೆಂಕಿಯನ್ನು ತಗೆದುಕೊಂಡು ಬಂದು, ಕಾಮಣ್ಣನ ಚಿತೆಗೆ ವಿಶೇಷ ಪೂಜೆ ಸಲ್ಲಿಸಿ, ಅಗ್ನಿಸ್ಪರ್ಶ ಮಾಡುವ ಮೂಲಕ ಹೋಳಿ ಆಚರಣೆಯನ್ನು ಸಂಪನ್ನಗೊಳಿಸಲಾಯಿತು.

ರಾಘವೇಂದ್ರ ಕಾಲನೀಯಲ್ಲಿ ರಾಘವೇಂದ್ರ ಸೇವಾ ಸಮೀತಿಯ ಮಹಿಳಾ ಘಟಕದ ವತಿಯಿಂದ ಡಿಜೆ ಎರ್ಪಡಿಸುವ ಮೂಲಕ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ನಗರಗಳ ಮಹಿಳೆಯರು ಪರಸ್ಪರ ಬಣ್ಣವನ್ನು ಎರೆಚಿಕೊಂಡು, ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಮೂಲಕ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿದ್ದು, ಬಹು ವಿಶೇಷವಾಗಿತ್ತು.

ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಸಿಪಿಐ ಮಂಜುನಾಥ ಪಂಡಿತ, ಪಿ.ಎಸ್.ಐ ನೀಲಪ್ಪ ನರಲಾರ ಮತ್ತು ಸಿಬ್ಬಂದಿ ವರ್ಗದವರು ಭಾರಿ ಬಿಗಿ ಪೋಲಿಸ್ ಬಂದೋಬಸ್ತ್ ಎರ್ಪಡಿಸಿದ್ದರು.

ಮದ್ವೀರಶೈವ ಸಮಾಜದ ಅಧ್ಯಕ್ಷ ವಿ.ಡಿ.ಹಂಪಾಳಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಪಪಂ ಮಾಜಿ ಅಧ್ಯಕ್ಷೆ ಸುಧಾ ಚಿಂದಿ, ಪ್ರಕಾಶಗೌಡ ಗೌಡರ, ಹೋಳಿ ಆಚರಣಾ ಸಮೀತಿ ಉಪಾಧ್ಯಕ್ಷ ಮಲ್ಲೀಕಾರ್ಜುನ ಅಬಲೂರ, ಕಾರ್ಯದರ್ಶಿ ಕಂಠಾಧರ ಅಂಗಡಿ, ಖಜಾಂಚಿ ಮಹೇಶ ಅಸುಂಡಿ,. ಸಹಕಾರ್ಯದರ್ಶಿಗಳಾದ ಚಂದ್ರಣ್ಣ ಹಾದ್ರಿಹಳ್ಳಿ, ಉಮೇಶ ಹಳಕಟ್ಟಿ, ಕುಮಾರ ಹಾಲೋನವರ, ಶಿವಕುಮಾರ ತಿಪ್ಪಶೆಟ್ಟಿ, ವೀಶಾಲಾಕ್ಷಿ ಹಳಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.