ಹಿರೇಕೆರೂರ: ದಡಾರ ಲಸಿಕೆ ಹಾಕಿಸಿಕೊಂಡ ಅಂಗನವಾಡಿ ಮಕ್ಕಳು ವಾಂತಿ-ಭೇದಿ, ಜ್ವರದಿಂದ ಬಳಲಿದ ಪರಿಣಾಮ ಘೋಷಣೆ ಮಾಡಲಾಗಿದ್ದ ಪರಿಹಾರ ಧನ ಇನ್ನೂ ಬಂದಿಲ್ಲ.

ತಾಲ್ಲೂಕಿನ ಚನ್ನಳ್ಳಿ ತಾಂಡಾದಲ್ಲಿ 2024ರ ಡಿಸೆಂಬರ್ 12ರಂದು ವಾಂತಿ–ಭೇದಿಯಿಂದ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸಿದ್ದರು.

ಗ್ರಾಮದದಲ್ಲಿನ ಅಂಗನವಾಡಿ ಕೇಂದ್ರ ಸಂಖ್ಯೆ 1 ರಲ್ಲಿ 3 ವರ್ಷದೊಳಗಿನ ಒಟ್ಟು 24 ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದರು. ಇದರಲ್ಲಿ 6 ತಿಂಗಳಿನಿಂದ 3 ವರ್ಷದ ಒಳಗಿರುವ 16 ಮಕ್ಕಳಿಗೆ ಆರೋಗ್ಯ ಇಲಾಖೆ ವತಿಯಿಂದ ದಡಾರ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಿಯಮದಂತೆ ಲಸಿಕೆಯನ್ನು ಹಂತ ಹಂತವಾಗಿ ಒಟ್ಟು 4 ಬಾರಿ ಹಾಕಲಾಗಿದೆ. ಆದರೆ, ಲಸಿಕೆ ನೀಡಿ 5 ಗಂಟೆಯ ನಂತರ 15 ಮಕ್ಕಳ ಪೈಕಿ 5 ಮಕ್ಕಳಿಗೆ ವಾಂತಿ-ಭೇದಿ ಶುರುವಾಗಿದೆ. ಮೊದಲಿಗೆ ವಿಪರೀತ ಜ್ವರ ಕಾಣಿಸಿಕೊಂಡು, ಆಮೇಲೆ ಮಕ್ಕಳ ಕಾಲುಗಳು ಊದಿಕೊಂಡಿವೆ. ನಂತರ ವಾಂತಿ ಶುರುವಾಗಿದೆ. ಮಕ್ಕಳ ಬಣ್ಣ ಸಂಪೂರ್ಣ ಕೆಂಪಾಗಿದ್ದು, ದೇಹದಲ್ಲಿ ತುರಿಕೆ ಆರಂಭಗೊಂಡಿದೆ. ಹೀಗೆ ಒಂದಿಲ್ಲೊಂದು ಅಡ್ಡಪರಿಣಾಮಗಳು ಹೆಚ್ಚಾಗತೊಡಗಿದ್ದ ಕಾರಣ ಮಕ್ಕಳನ್ನು ಹಿರೇಕೆರೂರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆಗೆ ಹಾಗೂ ಇನ್ನುಳಿದವರನ್ನು ರಾಣೆಬೆನ್ನೂರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತಂದೆ ತಾಯಂದಿರು ತಮ್ಮ ಕೂಲಿ ಕೆಲಸ ಬಿಟ್ಟು ಸಾಲ ಮಾಡಿ ಮಕ್ಕಳನ್ನು ಗುಣವಾಗಿಕೊಂಡು ಮನೆಗೆ ಮರಳಿದ್ದಾರೆ. ಒಂದು ಮಗು ದಾವಣಗೆರೆಯಲ್ಲಿ, ನಾಲ್ವರು ಮಕ್ಕಳು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಘಟನೆಯಿಂದ ಇಡೀ ಗ್ರಾಮದ ಜನ ಬೆಚ್ಚಿ ಬಿದ್ದಿದ್ದು, ಊಹಾಪೋಹಗಳು ಹಬ್ಬ ತೊಡಗಿದ್ದು ಪಾಲಕರಲ್ಲಿ ಆತಂಕ ಉಂಟಾಗಿದೆ. ಈ ಬಗ್ಗೆ ಯಾವ ಲಸಿಕೆ ಅಡ್ಡಪರಿಣಾಮ ಬೀರಿದೆ ಎಂಬುದನ್ನು ಮೇಲಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಮತ್ತು ಪರಿಹಾರ ನೀಡಬೇಕು ಎಂದು ಪಾಲಕರು ಮತ್ತು ಗ್ರಾಮಸ್ಥರು ತಾಲ್ಲೂಕು ಆರೋಗ್ಯಾ ಧಿಕಾರಿಗಳ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಂ. ಜಯಾನಂದ ಚನ್ನಳ್ಳಿ ತಾಂಡಾದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರ ಸಭೆ ಮಾಡಿದ್ದರು. ಸರ್ಕಾರಕ್ಕೆ ವರದಿ ಮಾಡಿ ಪರಿಹಾರ ನೀಡಲಾಗುವುದು ಎಂದು ಹೇಳಿದ್ದರು.

ಘಟನೆ ನಡೆದು ವರ್ಷಗಳೆ ಕಳೆದರೂ ಇನ್ನುವರೆಗೂ ಪರಿಹಾರ ಬಾರದಕ್ಕೆ ಮಕ್ಕಳ ಪಾಲಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

’ಘಟನೆಯ ವರದಿ ಬಂದ ನಂತರ ಪರಿಹಾರ ನೀಡಲಾಗುವುದು ಎಂದು ಹೇಳಿದ್ದು ಈ ಬಗ್ಗೆ ಆರೋಗ್ಯ ಇಲಾಖೆಯ ಯಾವ ಅಧಿಕಾರಿಗಳು ಮಾತನಾಡುತ್ತಿಲ್ಲ. ಪರಿಹಾರದ ಬಗ್ಗೆ ಕೇಳಿದರೆ ವರದಿ ಇನ್ನು ಬಂದಿಲ್ಲ ಎಂದು ಹೇಳುತ್ತಾರೆ’ ಎಂದು ಮಕ್ಕಳ ಪಾಲಕ ಮಂಜುನಾಥ ಲಮಾಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.