ಹಿರಿಯೂರು: ‘ದೀನ– ದಲಿತರು, ಬಡವರು, ದನಿ ಇಲ್ಲದವರಿಗೆ ಸ್ಪಂದಿಸುವ, ಕಷ್ಟದ ಸಮಯದಲ್ಲಿ ನಾನಿದ್ದೇನೆಂದು ಧೈರ್ಯ ತುಂಬುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು’ ಎಂದು ಯುವ ಮುಖಂಡ ಸತೀಶ್ ಗೌಡ ಹೇಳಿದರು.

ನಗರದ ಹುಳಿಯಾರು ರಸ್ತೆಯಲ್ಲಿರುವ ಗಾಡಿ ಬಸವಣ್ಣ ಬಡಾವಣೆಯಲ್ಲಿ ಈಚೆಗೆ ತಮ್ಮ ಜನಸಂಪರ್ಕ ಕಚೇರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

‘ಚುನಾವಣೆ ಘೋಷಣೆಯಾದಾಗ ಜನರ ಬಳಿ ಬಂದು, ಹಣ ಕೊಟ್ಟು ಗೆಲ್ಲುವ ಮೂಲಕ ಮತದಾರರನ್ನು ಅವಮಾನಿಸುವ ಮುಖಂಡರಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಹಣಕ್ಕಿಂತ ಜನರಿಗೆ ಸ್ಪಂದಿಸುವ ಗುಣಕ್ಕೆ ಮತದಾರರ ಒಲವು ಎಂಬುದನ್ನು ಸಾಬೀತುಪಡಿಸಬೇಕು’ ಎಂದು ಮನವಿ ಮಾಡಿದರು.

‘ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಮನೋಭಾವ ಇಲ್ಲವಾಗಿರುವುದು ಪ್ರಜಾಪ್ರಭುತ್ವದ ಅಣಕ. ನೂತನ ಹೈಟೆಕ್ ಆಸ್ಪತ್ರೆ, ತಾಲ್ಲೂಕು ಪಂಚಾಯಿತಿ ಕಚೇರಿ, ತಾಲ್ಲೂಕು ಸೌಧ ಕಟ್ಟಡಗಳು ನಿರ್ಮಾಣಗೊಂಡು ಎರಡು ವರ್ಷವಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ವಾಣಿವಿಲಾಸ ಅಣೆಕಟ್ಟೆಯ ಎರಡೂ ನಾಲೆಗಳು ದುರಸ್ಥಿ ಯಾಗದ ಕಾರಣ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು 20 ದಿನ ತೆಗೆದುಕೊಳ್ಳುತ್ತಿದ್ದ ಕಡೆ 30 ದಿನಗಳಾದರೂ ನೀರು ಮುಟ್ಟುತ್ತಿಲ್ಲ’ ಎಂದು ದೂರಿದರು.

‘ಹೆಸರಿಗೆ ಕೆಎಸ್ಆರ್ಟಿಸಿ ಡಿಪೊ ಬಂದಿದ್ದು, ಒಂದೇ ಒಂದು ಹೊಸ ಬಸ್ ಬಿಟ್ಟಿಲ್ಲ. ಗ್ರಾಮೀಣ ಪ್ರದೇಶದ ಜನರು ಸಾರಿಗೆ ವ್ಯವಸ್ಥೆ ಇಲ್ಲದೆ ಆಡಳಿತ ವ್ಯವಸ್ಥೆಯನ್ನು ಶಪಿಸುತ್ತಿದ್ದಾರೆ. ಜನಸಂಪರ್ಕ ಕಚೇರಿ ಆರಂಭವಾದ ನಂತರ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಜನಾಂದೋಲನ ನಡೆಸಲಾಗುವುದು. ಪ್ರಮುಖವಾಗಿ ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಸಾರಿಗೆ ಸಂಪರ್ಕ, ರಸ್ತೆ ಸುಧಾರಣೆ, ಸಕ್ಕರೆ ಕಾರ್ಖಾನೆ ಪುನರಾರಂಭ, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಅಜಯ್ಕುಮಾರ್, ಟಿ.ಬಿ. ಸರ್ಕಲ್ ರಾಜಣ್ಣ, ರಾಜಕುಮಾರ ನಾಯ್ಕ್, ಅರುಣ್ ಕುಮಾರ್, ಅಶ್ಮತ್ ಅಲಿ, ಮಂಜುನಾಥ್ ಯಾದವ್, ಪೇಂಟರ್ ಚಂದ್ರು, ಲಕ್ಕವ್ವನಹಳ್ಳಿ ಮಂಜಣ್ಣ, ದಿವಾಕರ್ ಆರ್.ಗೌಡ, ರವಿಚಂದ್ರಗೌಡ, ರಾಜೇಂದ್ರ, ಪುನೀತ್ ಯಾದವ್, ತಿಪ್ಪೇಸ್ವಾಮಿ, ರೋಹಿತ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-44-588141741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.