ಸೋಮವಾರ, ನವೆಂಬರ್ 18, 2019
29 °C

ಹಳೆ ಮನೆ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ವ್ಯಕ್ತಿ ಸಾವು

Published:
Updated:

ಹಾವೇರಿ: ಕಾಗಿನೆಲೆ ರಸ್ತೆಯ ದರ್ಗಾ ಬಳಿ ಬುಧವಾರ ಬೆಳಿಗ್ಗೆ ಹಳೆ ಮನೆಯೊಂದನ್ನು ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಫಕ್ಕೀರಪ್ಪ (40) ಎಂಬುವರು ಮೃತಪಟ್ಟಿದ್ದಾರೆ.

ಪ್ರತಿದಿನ ಸಂಜೆ ಹೊತ್ತಿಗೆ ಸುರಿಯುತ್ತಿರುವ ಮಳೆಯಿಂದ ಇಡೀ ಮನೆ ಶಿಥಿಲಗೊಂಡಿತ್ತು. ಹೀಗಾಗಿ, ಮಾಲೀಕರು ಆ ಕಟ್ಟಡ ನೆಲಸಮ ಮಾಡಿಸಲು ನಿರ್ಧರಿಸಿದ್ದರು. ಅವರ ಸೂಚನೆಯಂತೆ ಫಕ್ಕೀರಪ್ಪ ಬೆಳಿಗ್ಗೆ 11.45ರ ಸುಮಾರಿಗೆ ಇಬ್ಬರು ಸಹಕಾರ್ಮಿಕರ ಜತೆ ಗೋಡೆ ಒಡೆಯುತ್ತಿದ್ದರು.

ಈ ವೇಳೆ ಇಡೀ ಮನೆಯ ಕುಸಿದಿದ್ದು, ಫಕ್ಕೀರಪ್ಪ ಅವಶೇಷಗಳಡಿ ಸಿಲುಕಿಕೊಂಡರು. ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದರು. ನಂತರ ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸಿ ಶವವನ್ನು ಹೊರತೆಗೆದರು. ಮೃತರ ಊರು, ವಿಳಾಸದ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಪ್ರತಿಕ್ರಿಯಿಸಿ (+)