ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ಭೂತೇಶ್ವರ ದೇವಸ್ಥಾನ ಉದ್ಘಾಟನೆ

Last Updated 7 ಡಿಸೆಂಬರ್ 2022, 5:19 IST
ಅಕ್ಷರ ಗಾತ್ರ

ಹಾನಗಲ್: ಭೂತಾರಾಧನೆಯ ಪ್ರಸಿದ್ಧ ಕ್ಷೇತ್ರವಾಗಿ ಗುರುತಿಸಿಕೊಂಡ ಹಾನಗಲ್ ತಾಲ್ಲೂಕಿನ ನಾಲ್ಕರ್‌ ಕ್ರಾಸ್‌ ಸಮೀಪದ (ಮಾವಕೊಪ್ಪ) ಸಪ್ತಪುತ್ರೋ ಚೌಡೇಶ್ವರಿ ಮತ್ತು ಭೂತೇಶ್ವರ ದೇವಸ್ಥಾನದಲ್ಲಿ ಫೆಬ್ರುವರಿ 10 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಭಕ್ತರ ದೇಣಿಗೆ ಸಂಗ್ರಹಿಸಿ ರೂ 30 ಲಕ್ಷ ವೆಚ್ಚದಲ್ಲಿ ದೇವಸ್ಥಾನ ನವೀಕರಣ, ರೂ 70 ಲಕ್ಷದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಕಲ್ಯಾಣ ಮಂಟಪ ಉದ್ಘಾಟನೆ ಮತ್ತು ಸರ್ವಧರ್ಮ ಉಚಿತ ಸಾಮೂಹಿಕ ವಿವಾಹಗಳು ನಡೆಯಲಿವೆ.

ಮಂಗಳವಾರ ದೇವಸ್ಥಾನ ಅಂಗಳದಲ್ಲಿ ಈ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆಗೊಳಿಸಿದ ದೇವಸ್ಥಾನ ಉಸ್ತುವಾರಿ ರಾಜಣ್ಣ ಗೌಳಿ, ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ರಾಜ್ಯದ ಭಕ್ತರು ಭೂತೇಶ್ವರ ಸನ್ನಿಧಿಗೆ ಭಕ್ತಿ ಸಮರ್ಪಿಸುತ್ತಾರೆ. ಹೀಗಾಗಿ ಧಾರ್ಮಿಕ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳ ಸಾನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ನೇತೃತ್ವದಲ್ಲಿ ಒಟ್ಟು 9 ಮಠಾಧೀಶರು ವಹಿಸಿಕೊಳ್ಳಲಿದ್ದಾರೆ ಎಂದರು.

ಭಕ್ತರ ಸೇವೆ, ಹರಕೆಗಳಿಗೆ ಇಂಬು ನೀಡುವ ದೃಷ್ಠಿಯಿಂದ ಸುಮಾರು 2 ಎಕರೆ ದೇವಸ್ಥಾನ ಆವರಣವನ್ನು ಸಜ್ಜುಗೊಳಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೇವಸ್ಥಾನ ಸಮಿತಿಯ ಅಮರೇಂದ್ರ ಎಸ್. ಲಕ್ಷ್ಮಣ ಶೇಷಗಿರಿ, ಫಕ್ಕೀರಪ್ಪ ವಾಲಿಕಾರ, ಶಾಂತಪ್ಪ ಯತ್ನಳ್ಳಿ, ಗೋವಿಂದಪ್ಪ ವಾಲಿಕಾರ, ಶಾಂತಕುಮಾರ ನಾಯ್ಕ, ದೇವಿಂದ್ರಪ್ಪ ಬಿದರಕೊಪ್ಪ, ಪರಮೇಶ ನಾಯ್ಕ, ಸುಭಾಸಚಂದ್ರ ಬಿದರಕೊಪ್ಪ, ಮೂಕಣ್ಣ ಕುರಡಿ, ಬಸನಗೌಡ ಪಾಟೀಲ, ಕೃಷ್ಣಪ್ಪ ಹುಣಸಿಕಟ್ಟಿ, ಶಂಕ್ರಪ್ಪ ಅಸುಂಡಿ, ಹನುಮಂತ್ಪ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT