ಬುಧವಾರ, ಅಕ್ಟೋಬರ್ 21, 2020
26 °C

‘ಅಗರಬತ್ತಿ ಮಾರಿ ಸಾಲಿ ಕಲಿಸಿದ್ದು ಸಾರ್ಥಕವಾಯ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ‘ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಮನೆ ಮನೆಗೆ ಹೋಗಿ ಅಗರಬತ್ತಿ ಮಾರಾಟ ಮಾಡಿ, ಬಂದ ಲಾಭದಲ್ಲಿ ಮಗನಿಗೆ ಶಾಲೆ ಕಲಿಸಿದ್ದು ಸಾರ್ಥಕವಾಯಿತು’ ಎಂದು ಪಿಎಸ್‌ಐ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ 153ನೇ ರ‍್ಯಾಂಕ್‌ ಪಡೆದಿರುವ ಕುಮಾರ ಕುರಗುಂದ ಅವರ ತಾಯಿ ಗೌರಮ್ಮ ‘ಪ್ರಜಾವಾಣಿ’ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಕುಮಾರ ಅವರ ತಂದೆ ಶಿವಪ್ಪ ಪಟ್ಟಣದಲ್ಲಿ ಮನೆ ಮನೆಗೆ ಹೊಗಿ ಕಟ್ಟಿಗೆ ಒಡೆಯುವ ಕೂಲಿ ಕೆಲಸ ಮಾಡುತ್ತಾರೆ. ‘ಮಗ ಪಿಎಸ್‌ಐ ಆಗಿರುವುದು ಬಹಳ  ಖುಷಿ ತಂದಿದೆ’ ಎಂದು ಅವರು ಹೇಳಿದರು. 

ಪ್ರಾಥಮಿಕ ಶಿಕ್ಷಣವನ್ನು ಪಟ್ಟಣದಲ್ಲಿಯೇ ಮುಗಿಸಿದ ಕುಮಾರ, ಪ್ರೌಢಶಿಕ್ಷಣವನ್ನು ದೇವರಗುಡ್ಡ ಗ್ರಾಮದಲ್ಲಿ, ಪಿಯುಸಿ ಮತ್ತು ಪದವಿಯನ್ನು ಹಾವೇರಿ ಸರ್ಕಾರಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬೆಂಗಳೂರಿನಲ್ಲಿ ಸ್ಪರ್ಧಾ ವಿಜೇತ ಸೆಂಟರ್‌ನಲ್ಲಿ ಮೂರು ತಿಂಗಳು ಪಿಎಸ್‌ಐ ಪರೀಕ್ಷೆಗೆ ತರಬೇತಿ ಪಡೆದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು