ಶಿಗ್ಗಾವಿ: ಕಳೆದ ಐದು ದಿನಗಳಿಂದ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದ್ದರಿಂದ ಶಿಗ್ಗಾವಿ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳ ಜನ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ.

‘ಕಳೆದ 8 ದಿನಗಳ ಹಿಂದೆ ವಿವಿಧ ಬೀಜ ಮತ್ತು ಔಷಧಿ ಕಂಪನಿಗಳ ಮೂಲಕ ಕ್ಷೇತ್ರ ವೀಕ್ಷಣೆಗೆಂದು ಪ್ರವಾಸ ನಡೆಸಿದ್ದರು. ಕೆಲಸ ಮುಗಿಸಿಕೊಂಡು ಮರಳಿ ಶಿಗ್ಗಾವಿ ಬರಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ವಿಮಾನಗಳ ಹಾರಾಟ ರದ್ದಾಗಿರುವ ಕಾರಣ ಕಳೆದ ಎರಡು ದಿನಗಳಿಂದ ಕಾಲ ಕಳೆಯುವಂತಾಗಿದೆ ಎಂದು ಶಿಗ್ಗಾ, ಬಂಕಾಪುರ ಔಷಧಿ ಅಂಗಡಿ ಮಾಲೀಕರಾದ ರಮೇಶ ವನಹಳ್ಳಿ, ಬಸವರಾಜ ಚಿಗಳ್ಳಿ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ಕರ್ನಾಟಕದ ಸುಮಾರು 110 ಜನರಿದ್ದು, ಇಂಡಿಗೊ ವಿಮಾನಗಳ ಹಾರಾಟ ರದ್ದಾದ ಕಾರಣ ಪ್ರವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಇತರ ವಿಮಾನಗಳಿಂದ ಬರಲು ₹10 ಸಾವಿರ ಪ್ರಯಾಣ ದರಕ್ಕೆ ₹60 ಸಾವಿರ ದರ ಕೇಳುತ್ತಿದ್ದಾರೆ. ನಿಲ್ದಾಣದಲ್ಲಿ ಸರಿಯಾದ ಕುಡಿಯುವ ನೀರು, ಊಟ ಸಿಗುತ್ತಿಲ್ಲ. ಪ್ರತಿ ವಸ್ತುವಿಗೆ ಶೇ 10ರಷ್ಟು ದರ ಹೆಚ್ಚಾಗಿದೆ. ಏನು ಮಾಡಬೇಕು ಎಂಬುವುದು ತಿಳಿಯದಾಗಿದೆ. ಕರ್ನಾಟಕದ ಸಚಿವರು, ಶಾಸಕರಿಗೆ ಸಂಪರ್ಕಿಸಿದರೆ ಯಾರು ಸಂಪರ್ಕಿಸುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.