ಸೋಮವಾರ, ಮೇ 16, 2022
24 °C

‘ಮಾನವೀಯತೆಯೇ ನಿಜವಾದ ಶಿಕ್ಷಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮಾನವೀಯತೆಯೇ ಜೀವನದಲ್ಲಿ ಕಲಿಯಬಹುದಾದ ನಿಜವಾದ ಶಿಕ್ಷಣ. ವ್ಯಕ್ತಿಯಲ್ಲಿ ಅಂತರ್ಗತವಾಗಿರುವ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅನಾವರಣಗೊಳಿಸುವುದೇ ಶಿಕ್ಷಣ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. 

ನಗರದ ಎಸ್.ಜೆ.ಎಂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 2020-21ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್‌ ಗೈಡ್ಸ್‌, ಸೇವಾದಳ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. 

ಯಶಸ್ಸು ಗಳಿಸಲು ನಿರಂತರ ಪರಿಶ್ರಮ, ಆಸಕ್ತಿ ಅಗತ್ಯ. ಜ್ಞಾನ ಸಂಪಾದನೆ ಹೆಚ್ಚಿದಷ್ಟೂ ಅನುಭವ ಹೆಚ್ಚಾಗುತ್ತದೆ. ಇವು ಯಶಸ್ಸಿನತ್ತ ಕೊಂಡೊಯುತ್ತವೆ ಎಂದರು. 

ಕಾಲೇಜು ಪ್ರಾಂಶುಪಾಲ ಪಿ.ಬಿ. ವಿಜಯಕುಮಾರ, ಹಾವೇರಿ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ನಿಸ್ಸೀಮಗೌಡ್ರ, ವೀರಾಪುರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಬಸವರಾಜ, ರಾಜೇಂದ್ರ ಸಜ್ಜನರ ಉಪನ್ಯಾಸಕ ವಿ.ಎನ್‌.ಆಲದಕಟ್ಟಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ಕುಮಾರ್ ಅಭೀಷಕ ಇಚ್ಚಂಗಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು