ಹಾವೇರಿ:ಸಮಾಜ ಸೇವೆ ಮಾಡಬೇಕೆಂಬ ಉದ್ದೇಶ ಹೊಂದಿರುವ ಸಾಮಾಜಿಕ ಸೇವೆ ಸಂಸ್ಥೆಗಳ ಮುಖ್ಯ ಗುರಿ ಸಮಾಜ ಸೇವೆ ಆಗಿರಬೇಕು. ಸರಕಾರದ ಯೋಜನೆಗಳ ಅವಲಂಬಿತರಾಗಿ ಪರಾವಲಂಬಿಗಳಾಗಬಾರದು. ನಾನು ಬೆಳೆಯಬೇಕು ಜೊತೆಗೆ ಇತರರೂ ಬೆಳೆಯಬೇಕೆಂಬ ಎಂಬ ಧ್ಯೇಯೋದ್ದೇಶದ ಜೆಸಿ ಸಂಸ್ಥೆಯ ಕಾರ್ಯಗಳು ಶ್ಲಾಘನೀಯ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ರೇಣುಕಾಚಾರ್ಯ ಮಠದ ಆವರಣದಲ್ಲಿ ಬುಧವಾರ ನಡೆದಹಾವೇರಿ ಜೆಸಿ ಸಂಸ್ಥೆಯ ಜೆಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೆಸಿ ಸಂಸ್ಥೆಯ ಪೂರ್ವಾಧ್ಯಕ್ಷರಾದ ರವಿ ಗುಡಿಸಾಗರ ಮತ್ತು ಎಂ.ಎಸ್. ಪಾಟೀಲ ಅವರಿಗೆ ‘ಕಮಲ ಪತ್ರ’ ಎಂಬ ಸಂಸ್ಥೆಯ ಉನ್ನತ ಗೌರವ ನೀಡಲಾಯಿತು. ಸರ್ವಶ್ರೀ ಕೃಷ್ಣಾ ಮಂಗಳೂರ ಮುರಗೇಶ ಹುಂಬಿ, ಕಪಿಲ ರಾಠೋಡ, ಸಿದ್ಧಣ್ಣ ಮೆನಸಿನಹಾಳ ಹಾಗೂ ಎಂ.ಎಂ. ಹನುಮನಹಳ್ಳಿ ಅವರಿಗೆ ‘ವ್ಯಾಪಾರ ರತ್ನ’ ಪುರಸ್ಕಾರ ನೀಡಲಾಯಿತು.
ವಿಶ್ವ ಎಂಜಿನಿಯರ್‌ಗಳ ದಿನದ ಅಂಗವಾಗಿ ಎಂಜಿನಿಯರ್‌ಗಳಾದ ಸಿ.ಸಿ. ಹೊಸಮಠ ಮತ್ತು ಎಂ.ಎಂ. ಹೂಲಿಹಳ್ಳಿ ಅವರನ್ನು ಗೌರವಿಸಲಾಯಿತು. ಜೆಸಿ ಸಂಸ್ಥೆಯ ಅಧ್ಯಕ್ಷ ವೀರಯ್ಯ ಪ್ರಸಾದಿಮಠ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷರಾದ ಮಲ್ಲಿಕಾರ್ಜುನ ಶಾಂತಗಿರಿ, ಕಾರ್ಯದರ್ಶಿ ಚನ್ನಬಸಪ್ಪ ಮಾರ್ಯರ, ಜೂನಿಯರ್ ಜೆಸಿ ಅಧ್ಯಕ್ಷ ಭುವನ ಚೌಟಗಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.