ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಾಸಶ್ರೇಷ್ಠ ಕನಕದಾಸರು ವಿಶ್ವಮಾನವ’

ಜಿಲ್ಲೆಯಾದ್ಯಂತ ಕನಕದಾಸ ಜಯಂತಿ ಆಚರಣೆ: ಆದರ್ಶ ಪಾಲನೆಗೆ ಸಲಹೆ
Last Updated 4 ಡಿಸೆಂಬರ್ 2020, 8:11 IST
ಅಕ್ಷರ ಗಾತ್ರ

ಬ್ಯಾಡಗಿ: ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿದ ಕನಕದಾಸರು ವಿಶ್ವಮಾನವರಾದರು ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಾಗಿನೆಲೆ ಕನಕ ಗುರುಪೀಠದಲ್ಲಿ 533ನೇ ಕನಕ ಜಯಂತ್ಯುತ್ಸವ ಹಾಗೂ 20ನೇ ಕನಕ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ‘ಕನಕರ ತೊಟ್ಟಿಲೋತ್ಸವ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬೆಂಗಳೂರು ರಾಮಾನುಜ ಮಠದ ಶ್ರೀದಂಡಿ ರಾಮಾನುಜ ಜೀಯರ್‌, ಕನಕ ಗುರುಪೀಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜಿಗೌಡ್ರ, ಧರ್ಮದರ್ಶಿ ಶಂಕ್ರಣ್ಣ ಮಾತನವರ, ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಮಾರುತಿ ಹರಿಹರ, ಪ್ರಧಾನ ಕಾರ್ಯದರ್ಶಿ ಹನುಮಂತಗೌಡ ಗಾಜಿಗೌಡ್ರ, ರಾಜೇಂದ್ರ ಹಾವೇರಣ್ಣನವರ, ಪ್ರದೇಶ ಕುರುಬರ ಸಂಘದ ನಿರ್ದೇಶಕ, ಸಿದ್ದಣ್ಣ ಲಿಂಗಮ್ಮನವರ ಉಪಸ್ಥಿತರಿದ್ದರು.

ರಾಣೆಬೆನ್ನೂರು ವರದಿ: ಕನಕದಾಸರು ಒಂದು ವರ್ಗದ ಪ್ರತಿನಿಧಿಯಲ್ಲ. ನಮ್ಮ ಸಂಸ್ಕೃತಿಯ ಪ್ರತಿನಿಧಿ, ಅಂತರಂಗದ ಮಾರ್ಗದರ್ಶಿ. ಒಬ್ಬ ಅನುಭಾವಿ ಸಾಹಿತಿಯಾಗಿ ಅವರ ಸಾಹಿತ್ಯಕ ಕೊಡುಗೆ ಅನನ್ಯವಾದುದು ಎಂದು ತಹಶೀಲ್ದಾರ್ ಬಸನಗೌಡ ಕೋಟೂರ ಹೇಳಿದರು. ನಗರದ ಮಿನಿವಿಧಾನಸೌಧದ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರೊ.ದೊಡ್ಡಬಿಲ್ಲಾ ಅವರು ಕನಕದಾಸರ ಕುರಿತು ಉಪನ್ಯಾಸ ನೀಡಿದರು. ಉಪ ತಹಶೀಲ್ದಾರ ಮಂಜುನಾಥ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎನ್‌. ಗುರುಪ್ರಸಾದ, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎ.ಬಿ. ಚಂದ್ರಶೇಖರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಹನುಮಂತಪ್ಪ ದೇವರಗುಡ್ಡ, ಕೃಷ್ಣಪ್ಪ ಕಂಬಳಿ, ವಕೀಲ ಮೃತ್ಯುಂಜಯ ಗುದಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT