ಹಾವೇರಿ: ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ನಡೆದ ‘ಪ್ರಜಾಧ್ವನಿ ಯಾತ್ರೆ’ಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.
‘ಯಡಿಯೂರಪ್ಪ ಹಾಗೂ ಬಿಜೆಪಿಯವರು ಅನೈತಿಕ ರಾಜಕಾರಣ ಪ್ರಾರಂಭಿಸಿದರು. ಕೋಟ್ಯಂತರ ರೂಪಾಯಿ ಕೊಟ್ಟು ಶಾಸಕರನ್ನು ಖರೀದಿ ಮಾಡಿದರು. ನಿಮ್ಮ ಜಿಲ್ಲೆಯವರೂ ಕೂಡಾ ಒಬ್ರು (ಬಿ.ಸಿ.ಪಾಟೀಲ) ಬಿಜೆಪಿಗೆ ಹೋದರು. ಈಗ ಪತಿವ್ರತೆ ತರ ಮಾತಾಡ್ತಾರೆ, ಏನ್ ಮಾಡೋದು’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
‘₹1 ಸಾವಿರ ಕೋಟಿ ಖರ್ಚು ಮಾಡಿ ಹಿಂಬಾಗಿಲಿನಿಂದ ಅಧಿಕಾರ ಹಿಡಿದರು. ಯಡಿಯೂರಪ್ಪ ಕೊಟ್ಟ ಹಣ ಖರ್ಚು ಮಾಡಿ ಎಲೆಕ್ಷನ್ ಗೆದ್ದರು. ಇದು ರಾಜಕೀಯ ವ್ಯಭಿಚಾರ. ಇವರು ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ಮುಳುಗಿದರು. ಬಿ.ಸಿ. ಪಾಟೀಲ್ ತಮ್ಮ ಮನೆಯಿಂದ ಖರ್ಚು ಮಾಡಿ ಗೆಲ್ಲಲಿಲ್ಲ’ ಎಂದು ಆರೋಪಿಸಿದರು.
****
‘ಡಬಲ್ ಎಂಜಿನ್’ ಸರ್ಕಾರ ಹಳಿ ತಪ್ಪಿದ ವಾಹನವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ ಜನರ ಪಾಲಿಗೆ ಡಬ್ಬಾ ಎಂಜಿನ್ ಆಗಿದೆ‘
– ಸಲೀಂ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.