ಶನಿವಾರ, ಅಕ್ಟೋಬರ್ 19, 2019
27 °C

ಹಾವೇರಿ: ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಶಾಲಾ ಮಕ್ಕಳ ರಕ್ಷಿಸಿದ ವ್ಯಕ್ತಿ

Published:
Updated:
Prajavani

ಹಾವೇರಿ: ನಗರದ ಸರಸ್ವತಿ ಚಿತ್ರಮಂದಿರದ ಬಳಿ ಶುಕ್ರವಾರ ಸಂಜೆ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಶಾಲಾ ಮಕ್ಕಳಿಬ್ಬರನ್ನು ಸ್ಥಳೀಯ ವ್ಯಕ್ತಿಯೊಬ್ಬರು ರಕ್ಷಿಸಿದ್ದಾರೆ.

ಸಂಜೆ 5.30ರ ಸುಮಾರಿಗೆ ಮಕ್ಕಳಿಬ್ಬರು ಶಾಲೆ‌ ಮುಗಿಸಿಕೊಂಡು ಮಳೆಯಲ್ಲೇ ಮನೆಗೆ ಮರಳುತಿದ್ದರು. ಈ ವೇಳೆ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯುತಿತ್ತು.

ಪಾದಚಾರಿ ಮಾರ್ಗದಿಂದ ಕೆಳಗೆ ಇಳಿಯುವ ವೇಳೆ ಮಕ್ಕಳು ಕಾಲು ಜಾರಿ ರಭಸವಾಗಿ ಹರಿಯುತಿದ್ದ ಆ ನೀರಿಗೆ ಬಿದ್ದರು. ತಕ್ಷಣ ರಕ್ಷಣೆಗೆ ಧಾವಿಸಿದ ಸ್ಥಳೀಯ ವ್ಯಕ್ತಿಯೊಬ್ಬರು, ಇನ್ನೇನು ಚರಂಡಿಯೊಳಗೆ ಹೋಗುತಿದ್ದ ಮಕ್ಕಳನ್ನು ಹಿಡಿದುಕೊಂಡು ಹೊರಗೆ ಎಳೆದರು.

ಆ ವ್ಯಕ್ತಿಯ ಸಮಯಪ್ರಜ್ಞೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಪೋಷಕರೂ ಕೃತಜ್ಞತೆ ಸಲ್ಲಿಸಿದರು‌. ರಕ್ಷಣೆಯ ದೃಶ್ಯವನ್ನು ಯಾರೋ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Post Comments (+)