ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ

7

ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ

Published:
Updated:
Deccan Herald

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್ ವರ್ಕರ್ಸ್‌ ಯೂನಿಯನ್‌ ನೇತೃತ್ವದಲ್ಲಿ ಶನಿವಾರ ಇಲ್ಲಿನ ಆರ್‌ಟಿಒ ಬಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗ ಸಂಸ್ಥೆಯ ವಿಭಾಗೀಯ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಸಂಘದ ಅಧ್ಯಕ್ಷ ಜೆ.ಪಿ ಮಠದ ಮಾತನಾಡಿ, ಅಂತರ ನಿಗಮಕ್ಕೆ ವರ್ಗಾವಣೆಯಾದವರನ್ನು ಕೂಡಲೇ ವಿಮುಕ್ತಿಗೊಳಿಸಬೇಕು. ಬಿಎಂಟಿಸಿ ಹಾಗೂ ವಾಯವ್ಯ ನಿಗಮದಲ್ಲಿ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣ, ವೈದ್ಯಕೀಯ ವೆಚ್ಚ ಮರು ಪಾವತಿಸಬೇಕು ಎಂದು ಆಗ್ರಹಿಸಿದರು.

ಕೆಎಸ್‌ಆರ್‌ಟಿಸಿಯ ನಿಯಮಾವಳಿಯ ಫಾರಂ ನಂ 4 ಅನ್ನು ಕಾನೂನು ಮತ್ತು ಒಪ್ಪಂದಗಳ ಚೌಕಟ್ಟಿನಲ್ಲಿ ಬದಲಾವಣೆ ಮತ್ತಿತರ ಬೇಡಿಕೆಗಳನ್ನು ಚರ್ಚಿಸಿ ಜಾರಿಗೆ ತರಬೇಕು. ಸಿಬ್ಬಂದಿ ಹೆಚ್ಚಿಸಬೇಕು ಹಾಗೂ ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ತೆರಿಗೆ ರಿಯಾಯತಿ ಮತ್ತು ಇತರೆ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಜೆಟ್ಟಿ ರಾಜಶೇಖರ, ಕಾರ್ಯಾಧ್ಯಕ್ಷ ಜಿ.ಆರ್‌ ಸಾವಕಾರ, ಎಂ.ಎಫ್‌.ಯರ್ರೇಶೀಮೆ, ಎಂ.ಎಫ್‌. ಹಳ್ಳಿಕೇರಿ, ಎಸ್.ಎಂ. ಹಿರೇಮಠ, ಎಸ್‌.ಎಂ. ದೇವಣ್ಣ, ಎಂ.ಎಂ. ಮುಲ್ಲಾನವರ, ಕೃಷ್ಣಾ ರೆಡ್ಡಿ, ಎಂ.ಎಸ್. ವಾರದ, ಡಿ.ಪಿ. ಕಳಸೂರ ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !