ತಡಸ: ಹತ್ತಿರದ ಕುನ್ನೂರು ಗ್ರಾಮದಲ್ಲಿ ಮೂರು ತಿಂಗಳಿನಿಂದ ಸಮರ್ಪಕವಾಗಿ ಕುಡಿಯುವ ನೀರು ದೊರೆಯುತ್ತಿಲ್ಲ. ಸದ್ಯ ಬೇಸಿಗೆ ಕಾಲವಾದ್ದರಿಂದ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಪಂಚಾಯತಿಗೆ ಎಷ್ಟು ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳ ನಡೆಗೆ ಬೇಸತ್ತು ಗ್ರಾಮಸ್ಥರು ಶನಿವಾರ ಗ್ರಾಮ ಪಂಚಾಯತಿಯ ಎದುರು ನೀರು-ಬೇಕು, ನೀರು-ಬೇಕು, ಕುಡಿಯಲು ನೀರು ಕೊಡಿ’ ಎಂದು ಪ್ರತಿಭಟನೆ ನಡೆಸಿದರು.

ನಾವು ಸತತವಾಗಿ ಮೂರು ತಿಂಗಳಿನಿಂದ ಕುಡಿಯುವ ನೀರು ಸಮರ್ಪಕವಾಗಿ ಸಿಗದೇ ತೊಂದರೆ ಅನುಭವಿಸುತ್ತಿದ್ದೇವೆ. ಮಳೆಗಾಲದಲ್ಲಿ ಗ್ರಾಮದಲ್ಲಿನ ಗಟಾರಗಳು ತುಂಬಿ ಮನೆಗಳಿಗೆ ನೀರು ನುಗ್ಗುತ್ತವೆ ಪ್ರತಿ ವರ್ಷ ಇದೆ ಸಮಸ್ಯೆ ಎದುರಿಸುತ್ತಿದ್ದೇವೆ, ಗ್ರಾಮದಲ್ಲಿ ಅನೇಕ ಕೊಳವೆಬಾವಿಯ ಕೈಪಂಪುಗಳಿದ್ದು ಅವುಗಳನ್ನು ಸರಿಪಡಿಸಿಲ್ಲ, ಗ್ರಾಮದ ಕಲಮೇಶ್ವರ ದೇವಸ್ಥಾನದ ಹೊಂಡದ ಸ್ವಚ್ಛತೆ ಕೈಗೊಂಡಿಲ್ಲ. ಗ್ರಾಮದ ಕುನಗಾದೇವಿ ದೇವಸ್ಥಾನದ ಹತ್ತಿರದ ಕೆರೆ ಸುತ್ತಲೂ ಸ್ವಚ್ಛತೆ ಕೈಗೊಳ್ಳದೆ ಇದ್ದುದ್ದರಿಂದ ಅಲ್ಲಿನ ತ್ಯಾಜ್ಯ ಕುಡಿಯುವ ನೀರಿನಲ್ಲಿ ಪೈಪ ಲೈನ್ ಸೇರಿ ಮಿಶ್ರಣ ಆಗುವ ಸಾಧ್ಯತೆ ಇದೆ. ಗ್ರಾಮ ಪಂಚಾಯಿತಿಗೆ ಬರುವ ಸಾರ್ವಜನಿಕರಿಗೆ ಸಾರ್ವಜನಿಕ ಶೌಚಾಲಯ ಇಲ್ಲ. ಗ್ರಾಮದಲ್ಲಿ ಅಲ್ಲಲ್ಲಿ ಕೆಟ್ಟಿರುವ ರಸ್ತೆ ಹಾಗೂ ಗಟಾರ್ ನಿರ್ಮಾಣ ಆಗಿಲ್ಲ. ಗ್ರಾಮ ಪಂಚಾಯತಿ ಪ್ರತ್ಯೇಕ ಗ್ರಂಥಾಲಯ ಕೊಠಡಿ ನಿರ್ಮಾಣ ಆಗಿಲ್ಲ. ಈ ಎಲ್ಲ ಸಮಸ್ಯೆಗಳಿಂದ ನಮಗೆ ದಿನನಿತ್ಯದ ಜೀವನ ನಿರ್ವಹಣೆಗೆ ತೊಂದರೆಯಾಗಿದ್ದು ಈ ಕುರಿತು ಈಗಾಗಲೇ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನ ಆಗಿಲ್ಲ. ಈ ಕೂಡಲೇ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಆಡಳಿತಧಿಕಾರಿ ಭೇಟಿ: ಪ್ರತಿಭಟನೆ ಕೈಗೊಂಡ ಸಾರ್ವಜನಿಕರ ಮನವಿ ಸ್ವೀಕರಿಸಿದ ಪಂಚಾಯಿತಿ ಆಡಳಿದ ಅಧಿಕಾರಿ ಡಿ.ಬಿ.ಬಸವರಾಜ ಅವರು ಮೂಲ ಸೌಲಭ್ಯಗಳನ್ನು ಶೀಘ್ರದಲ್ಲಿ ಪರಿಹರಿಸುವುದಾಗಿ ತಿಳಿಸಿದರು. ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಹೇಳಿದ ಗಡುವಿನಲ್ಲಿ ಸಮಸ್ಯೆ ಇತ್ಯರ್ಥವಾಗದಿದ್ದರೆ ಮತ್ತೆ ಹೋರಾಟ ಮುಂದುವರಿಸುವುದಾಗಿ ತಿಳಿಸಿ ಪ್ರತಿಭಟನೆ ಹಿಂತೆಗೆದುಕೊಂಡು

ಪಿಡಿಓ ನಿರಂತರ ರಜೆ, ಉಸ್ತುವಾರಿ ನೇಮಿಸಿಲ್ಲ: ಸಾರ್ವಜನಿಕರ ಅಹವಾಲು ಸ್ವೀಕರಿಸಲು ಗ್ರಾಮ ಪಂಚಾಯತಿ ಅಧಿಕಾರಿಗಳೇ ಸಿಗುವುದಿಲ್ಲ, ಪಿಡಿಒ ರಜೆ ಹಾಕಿದ್ದು, ಅವರ ಸ್ಥಾನಕ್ಕೆ ಉಸ್ತುವಾರಿ ನೇಮಿಸಿಲ್ಲ ಎಂದು ದೂರಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುಸ್ತಾಕ ಕೊಲ್ಲಾಪುರ, ಗ್ರಾಮಸ್ಥರಾದ ಶಿವಾನಂದ ದೊಡ್ಡಮನಿ, ಯಲ್ಲಪ್ಪ ಬಾರ್ಕಿ, ಈರಣ್ಣ ಓಲೇಕಾರ, ಹನುಮಂತಗೌಡ ಪಾಟೀಲ, ಪಾಂಡು ಬಂಗಾಳೆ, ವಿನಾಯಕ ಮರಿಸಿದ್ದಣ್ಣವರ, ಯಲ್ಲಪ್ಪ ನವಲೂರ, ಮಹಾವವೀರಪ್ಪ ಕೋಳೂರ, ಮುದಕಯ್ಯಸ್ವಾಮಿ ಹಿರೇಮಠ, ಪರಶುರಾಮ ಕಾಳಿ, ಉಳವಯ್ಯಸ್ವಾಮಿ ಹಿರೇಮಠ, ಯಲ್ಲಪ್ಪ ಶ್ಯಾಡಂಬಿ, ಸುಮಂತಗೌಡ ಪಾಟೀಲ, ಫಕ್ಕಿರಪ್ಪಾ ಮರಿಸಿದ್ದಣ್ಣವರ, ದೇವರಾಜ ಹರಿಜನ, ಎಚ್.ಎಂ ಜಿಗಳೂರ, ದೀಪಕ್ ಕೋಳೂರ, ದಾದಾಪೀರ ಸಂಶಿ, ಬಸವರಾಜ ಮನಕಟ್ಟಿ, ನೀಲಕಂಠ ಯಲ್ಲಾಪುರ, ತಿಪ್ಪಣ್ಣ ಹಡಪದ, ಅಮೃತ ಮತ್ತಿಗಟ್ಟಿ, ಚನ್ನಪ್ಪ ಕರಡಿ, ಮೊಹ್ಮದಸಾಬ ಹುಬ್ಬಳ್ಳಿ, ಬಸಪ್ಪ ಕೋಳೂರ, ಯಲ್ಲಪ್ಪ ಇಂದೂರ, ಬಾಸುಸಾಬ ಮತ್ತೇಖಾನ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-22-567706034

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.