ಹಾವೇರಿ: ಜಮೀನಿನ ನಕಾಶೆ ಪೂರೈಸಲು ₹ 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ₹ 15 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಭೂಮಾಪಕ ಅಶೋಕ ಎಚ್.ಜಿ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಸೆರೆ ಹಿಡಿದಿದ್ದಾರೆ.

'ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಗ್ರಾಮದ ರೈತ ಮಂಜುನಾಥ ಕಡ್ಲಿ ಅವರು ಜಮೀನಿವ ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಅಗತ್ಯವಿದ್ದ ಜಮೀನಿನ ನಕಾಶೆ ಬೇಕಿತ್ತು. ನಕಾಶೆ ನೀಡುವಂತೆ ಕೋರಿ ಹಾವೇರಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ಕಚೇರಿಯ ಭೂಮಾಪಕ ಅಶೋಕ ಬಳಿ ಅರ್ಜಿ ಸಲ್ಲಿಸಿದ್ದರು' ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.

'ನಕಾಶೆ ನೀಡಲು ಅಶೋಕ ₹ 30 ಸಾವಿರ ಕೇಳಿದ್ದ. ಅಷ್ಟು ಹಣವಿಲ್ಲವೆಂದು ರೈತ ಹೇಳಿದ್ದರು. ನಂತರ, ₹25 ಸಾವಿರಕ್ಕೆ ಮಾತುಕತೆ ಆಗಿತ್ತು. ಈ ಬಗ್ಗೆ ಮಂಜುನಾಥ ಅವರು ಕಚೇರಿಗೆ ದೂರು ಸಲ್ಲಿಸಿದ್ದರು. ಶನಿವಾರ ಮುಂಗಡವಾಗಿ ₹15 ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ದಾಳಿ ಮಾಡಿ ಅಶೋಕ ಅವರನ್ನು ಪುರಾವೆ ಸಮೇತ ಸೆರೆ ಹಿಡಿಯಲಾಗಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.