ಗುರುವಾರ , ಮೇ 6, 2021
23 °C
ಡಾ.ಬಿ.ಆರ್. ಅಂಬೇಡ್ಕರ್ 130ನೇ ಜನ್ಮ ದಿನಾಚರಣೆ: ಶಾಸಕ ನೆಹರು ಓಲೇಕಾರ ಆಶಯ

ಸಮಾನತೆಯ ಕನಸು ನನಸಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಸಮಾಜದ ಎಲ್ಲ ಸಮುದಾಯದ ಜನರನ್ನು ಸಮಾನವಾಗಿ ಕಾಣದ ಹೊರತು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಮಾನತೆಯ ಕನಸು ನನಸಾಗಲು ಸಾಧ್ಯ ಇಲ್ಲ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ವಿವಿಧ ಪರಿಶಿಷ್ಟ ಜಾತಿ ಒಕ್ಕೂಟಗಳ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಅವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಸ್ಪೃಶ್ಯ, ದಲಿತ ಸಮುದಾಯವನ್ನು ಸಮಾಜದ ಮುಂದುವರಿದ ಜಾತಿ ಹಾಗೂ ಸಮುದಾಯಗಳ ಜನರು ಇನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಿಲ್ಲ. ನಾಯಿ, ಬೆಕ್ಕುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರೀತಿಯಿಂದ ಮುದ್ದಾಡುವ ಜನರು, ದಲಿತರನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಹಾವೇರಿಯಲ್ಲಿ ಲಿಂಗಾಯತರೊಬ್ಬರ ಮನೆಯಲ್ಲಿ ಬುಧವಾರ ಅಂಬೇಡ್ಕರ್ ಅವರ ಪೋಟೋವನ್ನು ಪೂಜೆ ಮಾಡಿ ಅವರ ಜನ್ಮ ದಿನವನ್ನು ಆಚರಿಸಿದರು. ಮುಂದೆ ಬಸವಣ್ಣ ಅವರ ಫೋಟೊ ಜೊತೆಗೆ ಅಂಬೇಡ್ಕರ್ ಫೋಟೊವನ್ನೂ ಎಲ್ಲರ ಮನೆಗಳಲ್ಲಿ ಪೂಜಿಸುವಂತಾಗಲಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ದಲಿತ ವರ್ಗದ ಏಳಿಗೆಗಾಗಿ ಶ್ರಮಿಸಿದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್‌. ಉತ್ತರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ನಮ್ಮಲ್ಲಿಯೇ ಜಾತಿಯ ಗುರುತಿನಿಂದ ಪರಿಚಯಿಸಿಸುಕೊಳ್ಳುವ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಈ ವ್ಯವಸ್ಥೆ ಬದಲಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಮಾತನಾಡಿದರು. ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕ ಆಂಜನೇಯ ಹುಲ್ಲಾಳ ಅವರು ಡಾ.ಬಿ.ಆರ್.ಅಂಬೇಡ್ಕರ್‌ ಅವರ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶ್ವರ ಮೇಗಳಮನಿ, ಜಿ.ಪಂ. ಸದಸ್ಯ ಸಿದ್ಧರಾಜ ಕಲಕೋಟಿ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ನಗರಸಭೆ ಉಪಾಧ್ಯಕ್ಷೆ ಜಾಹೀದಾಬಾನು ಜಮಾದಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಿವಕುಮಾರ ಸಂಗೂರ, ಜಿಲ್ಲಾ ಪಂಚಾಯಿತಿ ಸಿಇಒ ಮಹಮ್ಮದ್ ರೋಷನ್, ಎಸ್ಪಿ ಕೆ.ಜಿ. ದೇವರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ.ಪಾಟೀಲ, ತಹಶೀಲ್ದಾರ್‌ ಗಿರೀಶ ಸ್ವಾದಿ, ಪೌರಾಯುಕ್ತ ಚಲವಾದಿ, ಸಮಾಜದ ಮುಖಂಡರಾದ ಉಡಚಪ್ಪ ಮಾಳಜಿ, ಮಾಲತೇಶ ಯಲ್ಲಾಪುರ, ಜಗದೀಶ ಬೆಟಗೇರಿ, ಶಂಭು ಕಳಸದ, ಹೊನ್ನಪ್ಪ ತಗಡಿನಮನಿ, ಸುರೇಶ ಚಲವಾದಿ, ಚಂದ್ರಪ್ಪಾ ಶೇರಖಾನೆ ಇದ್ದರು. 

ಬಿಜೆಪಿ ಕಾರ್ಯಾಲಯ: 

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ  ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿಯನ್ನು ಆಚರಿಸಲಾಯಿತು.
ಶಾಸಕ ನೆಹರು ಓಲೇಕಾರ ಮಾತನಾಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಸಂತೋಷ ಆಲದಕಟ್ಟಿ, ಶ್ರೀಕಾಂತ ಪೂಜಾರ, ಚಂದ್ರಹಾಸ ಕ್ಯಾತಣ್ಣನವರ, ಹನುಂತಪ್ಪ ನೋಕಾರಪೂರ, ನಾಗರಾಜ ಹುಳ್ಳಿಕುಪ್ಪಿ, ಗಣೇಶ ಬದ್ರಶೆಟ್ಟಿ, ಕರಬಸಪ್ಪ ಹಳದೂರ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.