ಹಾವೇರಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಒಟ್ಟಾರೆ ₹61,74,800 ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನಮೂರ್ತಿ ಮಾಹಿತಿ ನೀಡಿದ್ದಾರೆ.
₹26.36 ಲಕ್ಷ ನಗದು, ₹4.94 ಲಕ್ಷ ಮೌಲ್ಯದ 12.85 ಕೆ.ಜಿ ಬೆಳ್ಳಿ, ₹2.34 ಲಕ್ಷ ಮೌಲ್ಯದ 572 ಲೀಟರ್ ಅಕ್ರಮ ಮದ್ಯ, ₹4,400 ಮೊತ್ತದ ಗಾಂಜಾ, ₹28.05 ಲಕ್ಷ ಮೌಲ್ಯದ 18,924 ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವಿರ ನೀಡಿದರು.
ಚುನಾವಣಾ ನೀತಿಸಂಹಿತೆ ಮೇಲೆ ನಿಗಾವಹಿಸಲು 12 ವಿಡಿಯೊ ಸರ್ವಲನ್ಸ್ ತಂಡ, ಆರು ವಿಡಿಯೊ ವಿಂಗ್ ತಂಡ, ಆರು ಅಕೌಂಟ್ ತಂಡ, ಆರು ಸಹಾಯಕ ವೆಚ್ಚ ವೀಕ್ಷಕರ ತಂಡ ಹಾಗೂ 141 ಸೆಕ್ಟರ್ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ದೂರು ನಿರ್ವಹಣಾ ಸಮಿತಿ:
ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕ್ಷೇತ್ರದಲ್ಲಿ ಕ್ಷೇತ್ರವಾರು ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಹಾನಗಲ್ ಕ್ಷೇತ್ರಕ್ಕೆ ದೂ:08375-200390, ಶಿಗ್ಗಾವಿ ಕ್ಷೇತ್ರಕ್ಕೆ ದೂ:08375-200391, ಹಾವೇರಿ ಕ್ಷೇತ್ರಕ್ಕೆ ದೂ: 08375-200392, ಬ್ಯಾಡಗಿ ಕ್ಷೇತ್ರಕ್ಕೆ ದೂ:08375-200393, ಹಿರೇಕೆರೂರು ಕ್ಷೇತ್ರಕ್ಕೆ ದೂ:08375-200394 ಹಾಗೂ ರಾಣೆಬೆನ್ನೂರು ಕ್ಷೇತ್ರಕ್ಕೆ ದೂ.08375-200395 ಹಾಗೂ ಜಿಲ್ಲಾ ಮಟ್ಟದಲ್ಲಿ ಉಚಿತ ಕರೆಗೆ 1950 ಸ್ಥಾಪಿಸಲಾಗಿದೆ.
ವಿಶೇಷ ತಂಡ ರಚನೆ:
ಆದಾಯ ತೆರಿಗೆ ಇಲಾಖೆ ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ನಿಯಂತ್ರಣ ಕೊಠಡಿ ತೆರೆದಿದೆ. ಯಾವುದೇ ವ್ಯಕ್ತಿ ಹಾಗೂ ಪಕ್ಷಗಳು ನಗದು ವಿತರಣೆ ಹಾಗೂ ಯಾವುದೇ ರೀತಿಯ ವಸ್ತುಗಳನ್ನು ಹಂಚುತ್ತಿದ್ದರೆ ಶುಲ್ಕ ರಹಿತ ಸಹಾಯವಾಣಿಗೆ ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡಬಹುದು.
ಮಾಹಿತಿ ನೀಡಿದವರ ಹೆಸರನ್ನು ಗೋಪ್ಯವಾಗಿ ಇರಿಸಲಾಗುವುದು. ದೂರು ನೀಡಬೇಕಾದ ಸಂಪರ್ಕ ಸಂಖ್ಯೆ 1800-425-2115/ 080-22861126/ 080-22866916, ಮೊ:8277422825, 827413614 ಸಂಪರ್ಕಿಸಿ ಮಾಹಿತಿ ನೀಡಲು ತಿಳಿಸಿದರು.
21 ಚೆಕ್ ಪೋಸ್ಟ್:
ಜಿಲ್ಲೆಯಲ್ಲಿ 21 ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಈ ಪೈಕಿ 13 ಜಿಲ್ಲೆಯ ಗಡಿ ಭಾಗಗಳಲ್ಲಿ ಸ್ಥಾಪಿಸಲಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಕೊಪ್ಪರಸಿಕೊಪ್ಪ, ಗೊಂದಿ, ಹಳ್ಳಿಬೈಲ್, ಸಮ್ಮಸಗಿ. ಶಿಗ್ಗಾವಿ ಕ್ಷೇತ್ರದ ತಡಸ ವಡಗಟ್ಟ, ರಾಮನಕೊಪ್ಪ(ತಡಸ), ಕೋಣನಕೇರಿ (ಬಸವನಕೊಪ್ಪ), ಪಾಣಿಗಟ್ಟಿ. ಹಾವೇರಿ ಕ್ಷೇತ್ರದ ಯಲವಿಗಿ, ಹಾವೇರಿ (ಆರ್.ಟಿ.ಒ ಕಚೇರಿ), ತೆರೆದಹಳ್ಳಿ, ಕಂಚಾರಗಟ್ಟಿ. ಬ್ಯಾಡಗಿ ಕ್ಷೇತ್ರದ ಕುಮ್ಮೂರ ಕ್ರಾಸ್, ಮೋಟೆಬೆನ್ನೂರು, ಹುಲಬಿಕೊಂಡ. ರಾಣೆಬೆನ್ನೂರು ಕ್ಷೇತ್ರದ ಮಾಕನೂರ ಕ್ರಾಸ್, ತುಮ್ಮಿನಕಟ್ಟಿ, ಹರನಗಿರಿ ಸೇಸುವೆ ಹಾಗೂ ಮಾಗೋಡ ಕ್ರಾಸ್‍ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.