ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ‘ನಡೆದಾಡುವ ದೇವರ‘ ಹೆಜ್ಜೆಗುರುತು

ಹಂಸಭಾವಿಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಶಿವಕುಮಾರ ಸ್ವಾಮೀಜಿ
Last Updated 21 ಜನವರಿ 2019, 16:02 IST
ಅಕ್ಷರ ಗಾತ್ರ

ಹಂಸಭಾವಿ:ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಂಸಭಾವಿಗೆ ಎರಡು ಬಾರಿ ಭೇಟಿ ನೀಡಿದ್ದು, ಇಲ್ಲಿನ ಭಕ್ತರೊಂದಿಗೆ ಅವಿನಾಭಾವ ಬಾಂಧವ್ಯ ಹೊಂದಿದ್ದರು.

1994ರಲ್ಲಿ ಇಲ್ಲಿನ ಮೃತ್ಯುಂಜಯ ವಿದ್ಯಾಪೀಠದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ವಿ.ಕೆರೂಡಿ ನೆನಪಿಸಿಕೊಂಡರು.

2005ರ ಡಿಸೆಂಬರ್ 12ರಂದುಶಿವಯೋಗೀಶ್ವರ ಆಶ್ರಮದ ರಜತ ಮಹೋತ್ಸವ ಹಾಗೂ ಅಥಣಿ ಶಿವಯೋಗಿಗಳ ಮೂರ್ತಿಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿಯೂ ’ನಡೆದಾಡುವ ದೇವರು‘ ಭಾಗಿಯಾಗಿದ್ದರು. ಆಗ ಅವರಿಗೆ ತುಲಾಭಾರ ಮಾಡಲಾಗಿತ್ತು ಎಂದರು.

ಕುಗ್ರಾಮವಾಗಿದ್ದ ಹಂಸಭಾವಿಯಲ್ಲಿ ಶ್ರೀಗಳ ಸಮಾರಂಭಕ್ಕೆ 12 ಸಾವಿರ ಭಕ್ತರು ಬಂದಿದ್ದರು. ಇದು ಅವರ ಮೇಲಿನ ಭಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಇಲ್ಲಿನ ಶಿವಯೋಗೀಶ್ವರ ಆಶ್ರಮದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು

ಇಲ್ಲಿನ ಭಕ್ತವೃಂದ ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಪ್ರತಿ ವರ್ಷ ಅವರ ಹೆಸರಿನಲ್ಲಿ ಪುರಾಣ ಪ್ರವಚನ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT