ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಳ್ಳೆ, ಚಪ್ಪಾಳೆ ಇದ್ದರೇನೇ ಬದುಕು: ಸಚಿವ ಬಿಸಿ ಪಾಟೀಲ್

Last Updated 14 ನವೆಂಬರ್ 2021, 13:35 IST
ಅಕ್ಷರ ಗಾತ್ರ

ಹಾವೇರಿ: ಶಿಳ್ಳೆ‌, ಚಪ್ಪಾಳೆ ಇದ್ದರೇನೇ ಕಲಾವಿದರ ಜೀವನ. ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ನೋಡುವ ಮೂಲಕ ಚಿತ್ರರಂಗ ಮತ್ತು ಕಲಾವಿದರನ್ನು ಜನರು ಬೆಳೆಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಿರೇಕೆರೂರಿನಲ್ಲಿ ಭಾನುವಾರ ನಡೆದ ‘ರೈತರೊಂದಿಗೊಂದು ದಿನ’ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಛಲಕ್ಕೆ ಹೆಸರಾದವನು ದುರ್ಯೋಧನ. ನಾನು ಆಧುನಿಕ ಕೌರವನ ಪಾತ್ರ ಮಾಡಿದ್ದೆ. ನಟ ದರ್ಶನ್‌ ಅವರು ಪೌರಾಣಿಕ ಕೌರವನ ಪಾತ್ರ ಮಾಡಿದ್ದಾರೆ. ದರ್ಶನ್ ಅವರ ಸ್ಫೂರ್ತಿಯಿಂದಯಶಸ್ ಸೂರ್ಯನನ್ನು ಚಿತ್ರರಂಗಕ್ಕೆ ಪರಿಚಯಿಸಿ, ಬೆಳೆಸಲು ಮುಂದಾಗಿದ್ದೇವೆ. ಅದರಂತೆ ‘ಗರಡಿ’ ಚಿತ್ರ ನಿರ್ಮಾಣವಾಗುತ್ತಿದೆ ಎಂದರು.

ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಮೆಚ್ಚಿ ಹಿರೇಕೆರೂರಿಗೆ ದರ್ಶನ್‌ ಬಂದಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೇ ದರ್ಶನ್‌ ತಾರೆಯಾಗಿ ಬೆಳೆದು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದರ್ಶನ್‌ ಅವರು ರೈತರ ಮೇಲಿನ ಅಭಿಮಾನದಿಂದ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ.ದುರ್ಗಾದೇವಿ ಪಾದಾರವಿಂದಗಳಿಗೆ ನಮಸ್ಕರಿಸುವ ಮೂಲಕ ಗರಡಿ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ಹುಟ್ಟುಹಬ್ಬ ಆಚರಣೆ

ರೈತಗೀತೆಯೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಇತ್ತೀಚೆಗೆ ಅಗಲಿದ ಚಿತ್ರನಟ ದಿ.ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ವೇದಿಕೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ರೈತರ ಹೆಸರಿನಲ್ಲಿ ಸಾರ್ವಜನಿಕವಾಗಿ ಆಚರಿಸಿಕೊಂಡರು.
ದರ್ಶನ್ ಅಭಿಮಾನಿಗಳಿಂದ ಬಿ.ಸಿ.ಪಾಟೀಲ ಹಾಗೂ ದರ್ಶನ್‌ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಸೌಮ್ಯ ಬ್ಯಾನರ್ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗರಡಿ ಚಲನಚಿತ್ರದ ಶೀರ್ಷಿಕೆ ಬಿಡುಗಡೆಯನ್ನುನಿರ್ದೆಶಕ ಯೋಗರಾಜ್ ಭಟ್ ನೆರವೇರಿಸಿದರು. ಈ ಚಲನಚಿತ್ರದ ಹಿಂದೆ ಆಲದ ಮರದ ತರಹ ನಿಂತವರು ನಟ ದರ್ಶನ್.ನೂತನ ಯಶಸ್ ಸೂರ್ಯರಂತವರನ್ನು ಕೈಹಿಡಿದು ನಡೆಸಬೇಕಾಗಿದೆ ಎಂದರು.

ಪ್ರಾಸ್ತಾವಿಕವಾಗಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಮಾತನಾಡಿದರು. ನಟ ಯಶಸ್‌ ಸೂರ್ಯ, ಬಿಜೆಪಿ ಯುವನಾಯಕಿ ಸೃಷ್ಟಿ ಪಾಟೀಲ, ದೊಡ್ಡಗೌಡಪಾಟೀಲ, ಗುರುಶಾಂತ್ ಯತ್ನಾಳ್, ಸಿದ್ದರಾಜ್ ಕಲ್ಬಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT