ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಚಿವರ ಹೇಳಿಕೆಗೆ ಖಂಡನೆ

‘ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು’
Last Updated 5 ಡಿಸೆಂಬರ್ 2020, 3:28 IST
ಅಕ್ಷರ ಗಾತ್ರ

ಹಾನಗಲ್: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದಿರುವ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಹೇಳಿಕೆಯನ್ನು ಖಂಡಿಸಿ ಶುಕ್ರವಾರ ರೈತ ಸಂಘದಿಂದ
ಹಾನಗಲ್‌ನಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ಇರುವವರು ಇಂತಹ ಹೇಳಿಕೆ ನೀಡುವುದಿಲ್ಲ. ಕೃಷಿಕರ ಜಲ್ವಂತ ಸಮಸ್ಯೆಗಳ ಇತ್ಯರ್ಥಕ್ಕೆ ಯತ್ನಿಸದೇ ರೈತರನ್ನು ಹೇಡಿ
ಎಂದು ಸಂಭೋಧಿಸುವ ಬಿ.ಸಿ.ಪಾಟೀಲ ಹೇಳಿಕೆ ಅವಹೇಳನಕಾರಿ. ಎರಡು ವರ್ಷದ ನೆರೆ ಪರಹಾರ ಸಮರ್ಪಕವಾಗಿ ರೈತರಿಗೆ
ತಲುಪಿಲ್ಲ. ಅಲ್ಲದೆ, ಬೆಳೆವಿಮೆ ಪರಿಹಾರ ಬಾಕಿ ಉಳಿಸಿಕೊಂಡು ರೈತರನ್ನು ಸಮಸ್ಯೆಗೆ ತಳ್ಳುತ್ತಿರುವ ಸರ್ಕಾರದ ನಡೆ ರೈತರಿಗೆ ಮಾರಕವಾಗುತ್ತಿದೆ ಎಂದರು.

ಬೆಳೆ ಸಾಲ ಮರುಪಾವತಿ,
ಬಾಕಿ ಪಾವತಿಗಾಗಿ ಬ್ಯಾಂಕ್‌ಗಳಿಂದ ರೈತರಿಗೆ ನೋಟಿಸ್ ಬರುತ್ತಿವೆ. ಬೆಳೆನಷ್ಟ, ಬ್ಯಾಂಕ್‌ನ ಕಿರಿಕಿರಿಯಿಂದ ಅನ್ನದಾತ ಬಳಲುತ್ತಿದಾರೆ. ಈ ಬಗ್ಗೆ ಕೃಷಿ ಸಚಿವರು ಗಮನ ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ, ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ರಾಜೀವ ದಾನಪ್ಪನವರ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT