ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರ್ಯಾಯ ಸಮ್ಮೇಳನ ಒಳ್ಳೆಯ ಬೆಳವಣಿಗೆ ಅಲ್ಲ: ಸಚಿವ ಸುನಿಲ್ ಕುಮಾರ್

Last Updated 6 ಜನವರಿ 2023, 11:17 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರದ ವತಿಯಿಂದ ನಡೆಯುತ್ತಿರುವ ಸಮ್ಮೇಳನಕ್ಕೆ ವಿರುದ್ಧವಾಗಿ ಪರ್ಯಾಯ ಸಮ್ಮೇಳನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೊಡ್ಡ ಕಾರ್ಯಕ್ರಮದಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಬಹುದು. ಅದನ್ನು ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.

ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಮಹತ್ವವಾಗಿರುವ ಈ ಸಮ್ಮೇಳನ, ನಾಡಿನ ಜನತೆಗೆ ಒಳ್ಳೆಯ ಸಂದೇಶ ನೀಡಲಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬುದನ್ನು ಸಾರಲಿದೆ ಎಂದು ತಿಳಿಸಿದರು.

ಅವಧಿ ಮುಗಿದರೂ ನಿಲ್ಲದ ಗಾಯನ
ಹಾವೇರಿ:
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾ ತಂಡಗಳು ಸಮಯದ ಎಚ್ಚರಿಕೆಗೆ ಕಿವಿಗೊಡದೆ ಪ್ರದರ್ಶನ ನೀಡಿದವು. ಇದರಿಂದ ಕಲಾ ತಂಡಗಳ ಸಮಯ ಕಡಿತ ಮಾಡಲಾಯಿತು.

ಪ್ರತಿ ತಂಡಕ್ಕೆ 10 ನಿಮಿಷ ನೀಡಲಾಗಿತ್ತು. ಕಲಾವಿದರು ಸಮಯ ಮುಗಿದಿದ್ದರೂ ಗಾಯನ ಮುಗಿಸದೆ, ಮೊತ್ತೊಂದು ಗೀತೆಯನ್ನು ಹಾಡಲು ಮುಂದಾದಾಗ ಆಯೋಜಕರು ಮೈಕ್ ಬಂದ್ ಮಾಡುವುದಾಗಿಎಚ್ಚರಿಕೆ ನೀಡಿದರು. ಆದರೆ, ಮೈಕ್ ಬಂದಾಗದಿದ್ದರಿಂದ ಕಲಾವಿದರು ಗಾಯನ ನಿಲ್ಲಿಸಲಿಲ್ಲ. ಇದರಿಂದ ಆಯೋಜಕರು ಪೇಚಿಗೆ ಸಿಲುಕಿ, ಪರಿ ಪರಿಯಾಗಿ ಮನವಿ ಮಾಡಿಕೊಂಡರು.

ಬಳಿಕ ತಂಡಗಳಿಗೆ ನೀಡಿದ್ದ ಸಮಯ ಕಡಿತ ಮಾಡಿ, 8 ನಿಮಿಷ ನೀಡಿದರು. ಆದರೂ ಕಲಾ ತಂಡಗಳು ನಿಲ್ಲಿಸದಿದ್ದರಿಂದ ಆಯೋಜಕರು ವೇದಿಕೆಗೆ ಬಂದು ಮೈಕ್ ಕಸಿದರು. ಬಳಿಕ 5 ನಿಮಿಷ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT