ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಲೋಕಸಭಾ ಕ್ಷೇತ್ರ: 6 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, ಕಣದಲ್ಲಿ 10 ಮಂದಿ

Last Updated 8 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹಾವೇರಿ:ಹಾವೇರಿ ಲೋಕಸಭಾ ಕ್ಷೇತ್ರದ ನಾಮಪತ್ರ ಹಿಂಪಡೆಯಲು ಏ.8 ಕೊನೆ ದಿನವಾಗಿದ್ದು, ಅಂತಿಮವಾಗಿ 10 ಮಂದಿ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಸಲ್ಲಿಸಿದ್ದ 16 ಅಭ್ಯರ್ಥಿಗಳ ಪೈಕಿ ಆರು ಮಂದಿ ಹಿಂಪಡೆದಿದ್ದಾರೆ.

ನಾಮಪತ್ರ ಹಿಂಪಡೆದವರು:
ರುದ್ರಯ್ಯ ಅಂದಾನಯ್ಯ ಸಾಲಿಮಠ (ಪಕ್ಷೇತರ), ಮಂಜುನಾಥ ಕಲವೀರಪ್ಪ ಪಂಚಾನನ ಬಡಿಗೇರ (ಪಕ್ಷೇತರ), ಚಂದ್ರಪ್ಪ ಅಡ್ಡಿಕಾರ (ಪಕ್ಷೇತರ), ಹಾಶಂಪೀರ ಇನಾಂದಾರ (ಪಕ್ಷೇತರ), ಮಕ್ಬೂಲ್ ಅಹ್ಮದ್ ಮುಲ್ಲಾನವರ(ಪಕ್ಷೇತರ), ಡಾ.ಟಿಪ್ಪುಸಾಬ ಹುಸೇನಸಾಬ ಕಲಕೋಟಿ (ಪಕ್ಷೇತರ)

ಕೈ ಕಸರತ್ತು:

ಏ.5ರ ನಾಮಪತ್ರ ಪರಿಶೀಲನೆಯ ಬಳಿಕ ಕಣದಲ್ಲಿದ್ದ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಭಾರಿ ಕಸರತ್ತುಗಳು ನಡೆದಿದ್ದವು. ಹಾವೇರಿಯು ಮುಸ್ಲಿಂ ಬಾಹಳ್ಯ ಹೊಂದಿದ್ದ ಕ್ಷೇತ್ರವಾಗಿದ್ದು, ಸತತ 14 ಚುನಾವಣೆಗಳ ಬಳಿಕ ಕಾಂಗ್ರೆಸ್‌ ಅಲ್ಪಸಂಖ್ಯಾತೇತರ ಅಭ್ಯರ್ಥಿಗೆ ಟಿಕೆಟ್ ನೀಡಿತ್ತು. ಹೀಗಾಗಿ, ಅದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದ 6 ಅಲ್ಪಸಂಖ್ಯಾತರು ಕಣಕ್ಕೆ ಇಳಿದಿದ್ದರು. ಈ ಪೈಕಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದವರು ಸ್ಪರ್ಧೆಯಿಂದ ಹೊರಗುಳಿಯುವಂತೆ ಮಾಡುವಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ. ಆದರೆ, ಬಿಎಸ್ಪಿ ಸೇರಿ ಸ್ಪರ್ಧೆಗಿಳಿದ ಅಯೂಬ್ ಖಾನ್ ಪಠಾಣ್ ಕಣದಲ್ಲಿದ್ದಾರೆ.

ಒಟ್ಟಾರೆ, ಆರು ಅಲ್ಪಸಂಖ್ಯಾತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ಇಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. ಮೂವರು ಹಿಂಪಡೆದರೆ, ಈಗ ಒಬ್ಬರು (ಬಿಎಸ್ಪಿ) ಕಣದಲ್ಲಿ ಇದ್ದಾರೆ.

ಅಭ್ಯರ್ಥಿಗಳು:
ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಸೇರಿದಂತೆ ಮೂವರು ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳಾದರೆ, ನೋಂದಾಯಿತ ಪಕ್ಷಗಳಾದ ಉತ್ತಮ ಪ್ರಜಾಕೀಯ ಪಕ್ಷ ಮತ್ತು ಇಂಡಿಯನ್ ಲೇಬರ್ ಪಾರ್ಟಿಯ ಅಭ್ಯರ್ಥಿಗಳು ಇಬ್ಬರು ಹಾಗೂ ಐವರು ಪಕ್ಷೇತರರು ಇದ್ದಾರೆ. ಟ್ರಕ್, ಟ್ರ್ಯಾಕ್ಟರ್‌ ಓಡಿಸುತ್ತಿರುವ ರೈತ, ಡೀಸೆಲ್‌ ಪಂಪ್, ಹೂಕೋಸು, ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆಗಳನ್ನು ಪಡೆದಿದ್ದಾರೆ.

ಕಣದಲ್ಲಿರುವ 10 ಅಭ್ಯರ್ಥಿಗಳ ಪೈಕಿ 6 ಮಂದಿ ಹಾವೇರಿ ಜಿಲ್ಲೆಯವರಾದರೆ, ಮೂವರು ಗದಗದವರು. ಒಬ್ಬರು ಬೆಂಗಳೂರಿನವರು. ಮೂವರು ಹಾನಗಲ್, ಇಬ್ಬರು ರಾಣೆಬೆನ್ನೂರು, ಒಬ್ಬರು ಹಾವೇರಿ, ಇಬ್ಬರು ಮುಂಡರಗಿ, ಒಬ್ಬರು ಗದಗ ತಾಲ್ಲೂಕಿನವರು. ಒಬ್ಬರು ಬೆಂಗಳೂರಿನವರು.

72 ವರ್ಷದ ಡಿ.ಆರ್. ಪಾಟೀಲ ಹಾಗೂ ವಿ.ವಿ. ಕಬ್ಬಿಣದ ಎಲ್ಲರಿಗಿಂತ ಹಿರಿಯರಾದರೆ, 35 ವರ್ಷದ ಹನುಮಂತಪ್ಪ ದೇವೇಂದ್ರಪ್ಪ ಕಬ್ಬಾರ ಕಿರಿಯರು. ಒಟ್ಟಾರೆ, 5 ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರು. ವಿ.ವಿ.ಕಬ್ಬಿಣದ ಏಳನೇ ತರಗತಿ ಓದಿದ್ದರೆ, ಮೂವರು ಎಸ್ಸೆಸ್ಸೆಲ್ಸಿ ಹಾಗೂ ಆರು ಮಂದಿ ಪದವೀಧರರು.

***

ಸಲ್ಲಿಕೆಯಾದ ನಾಮಪತ್ರ; 19

ತಿರಸ್ಕೃತಗೊಂಡ ನಾಮಪತ್ರ; 3

ನಾಮಪತ್ರ ಹಿಂತೆಗೆದುಕೊಂಡವರು; 6

ಅಂತಿಮವಾಗಿ ಕಣದಲ್ಲಿ ಉಳಿದವರು; 10

***

ಕಣದಲ್ಲಿರುವ ಅಭ್ಯರ್ಥಿಗಳು
ಅಭ್ಯರ್ಥಿ; ಪಕ್ಷ; ಚಿಹ್ನೆ; ವಯಸ್ಸು; ವಿದ್ಯಾರ್ಹತೆ; ವಿಳಾಸ
ದ್ಯಾಮನಗೌಡ ರಾಮನಗೌಡ ಪಾಟೀಲ (ಡಿ.ಆರ್.ಪಾಟೀಲ); ಕಾಂಗ್ರೆಸ್; ಕೈ; 72 ; ಬಿ.ಇ. (ಮೆಕ್ಯಾನಿಕಲ್); ಹುಲಕೋಟಿ, ಗದಗ

ಶಿವಕುಮಾರ ಉದಾಸಿ; ಬಿಜೆಪಿ; ಕಮಲ; 52; ಬಿ.ಇ. (ಮೆಕ್ಯಾನಿಕಲ್); ಗೌಳಿಗಲ್ಲಿ, ಹಾನಗಲ್

ಆಯೂಬ್‍ಖಾನ್ ಪಠಾಣ; ಬಿಎಸ್ಪಿ; 64; ಎಲ್‌.ಎಲ್‌.ಬಿ.; ವಿದ್ಯಾನಗರ; ಹಾವೇರಿ

ಈಶ್ವರ ಪಾಟೀಲ; ಉತ್ತಮ ಪ್ರಜಾಕೀಯ ಪಾರ್ಟಿ; ಆಟೊ ರಿಕ್ಷಾ ; 37;ಎಸ್ಸೆಸ್ಸೆಲ್ಸಿ; ಮೇಡ್ಲೇರಿ, ರಾಣೆಬೆನ್ನೂರು

ಶೈಲೇಶ ನಾಜರೇ ಅಶೋಕ; ಇಂಡಿಯನ್ ಲೇಬರ್ ಪಾರ್ಟಿ(ಅಂಬೇಡ್ಕರ್ ಪುಲೆ); ಬಕೆಟ್; 48; ಬಿ.ಕಾಂ.; ಶಿವಾಜಿನಗರ, ಬೆಂಗಳೂರು

ಬಸವರಾಜ ಶಂಕ್ರಪ್ಪ ದೇಸಾಯಿ; ಪಕ್ಷೇತರ; ಟ್ರಕ್; 47; ಎಸ್ಸೆಸ್ಸೆಲ್ಸಿ; ಮುಂಡರಗಿ, ಗದಗ

ವೀರಭದ್ರಪ್ಪ ವೀರಪ್ಪ ಕಬ್ಬಿಣದ; ಪಕ್ಷೇತರ; ಡೀಸೆಲ್ ಪಂಪ್; 72; 7ನೇ ತರಗತಿ; ಕೊರ್ಲಹಳ್ಳಿ, ಮುಂಡರಗಿ

ಹನುಮಂತಪ್ಪ ದೇವೇಂದ್ರಪ್ಪ ಕಬ್ಬಾರ; ಪಕ್ಷೇತರ; ಕಹಳೆ ಊದುತ್ತಿರುವ ಮನುಷ್ಯ; 35; ಬಿ.ಎ.; ಮಣಕೂರ, ರಾಣೆಬೆನ್ನೂರು

ರಾಮಪ್ಪ ಸಿದ್ದಪ್ಪ ಬೊಮ್ಮೊಜಿ; ಪಕ್ಷೇತರ; ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ ; 64; ಬಿ.ಕಾಂ. ಎಲ್‌ಎಲ್‌ಬಿ; ಬ್ಯಾತನಾಳ; ಹಾನಗಲ್

ಶಿದ್ದಪ್ಪ ಕಲ್ಲಪ್ಪ ಪೂಜಾರ; ಪಕ್ಷೇತರ; ಹೂಕೋಸು; 37; ಎಸ್ಸೆಸ್ಸೆಲ್ಸಿ; ಬಮ್ಮನಹಳ್ಳಿ ಹಾನಗಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT