ಗ್ರಂಥಾಲಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ

7

ಗ್ರಂಥಾಲಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಗ್ರಾಮಸ್ಥರ ಆಕ್ರೋಶ

Published:
Updated:
Deccan Herald

ಕುಮಾರಪಟ್ಟಣ: ಇಲ್ಲಿಗೆ ಸಮೀಪದ ಮಾಕನೂರು ಗ್ರಾಮದಲ್ಲಿ ಓದುಗರ ಅನುಕೂಲಕ್ಕಾಗಿ ಸ್ಥಾಪಿಸಿರುವ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಸೂಕ್ತ ನಿರ್ವಹಣೆಯಿಲ್ಲದೆ ಮೇಲ್ಛಾವಣಿ ಶಿಥಿಲಗೊಂಡು ಕುಸಿದು ಬೀಳುವ ಹಂತ ತಲುಪಿದೆ.

ಗ್ರಂಥಾಲಯದಲ್ಲಿ ಓದುಗರಿಗೆ ಪ್ರಯೋಜನ ಆಗಲಿ ಎಂದು ಇಲಾಖೆ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳು, ರ್ಯಾಕ್, ದಿನಪತ್ರಿಕೆಗಳು, ಮಾಸ ಪತ್ರಿಕೆಗಳನ್ನು ವದಗಿಸಲು ಸಿದ್ದ ಇದ್ದರೂ ಇಲ್ಲಿ ಮಾತ್ರ ದಿನಪತ್ರಿಕೆಗಳು ಹೊರೆತುಪಡಿಸಿದರೆ ಬೇರೆ ಇನ್ಯಾವ ಸೌಲಭ್ಯಗಳು ಇಲ್ಲದಂತಾಗಿದೆ ಜೊತೆಗೆ ಮಳೆ ಬಂದಾಗ ಸೋರುತ್ತಿದೆ.

ಓದುಗರು ಬರುವ ಸ್ಥಳ ಎಂದು ಗೊತ್ತಿದ್ದರೂ ಸರಿಯಾಗಿ ಸ್ವಚ್ಚಗೊಳಿಸುವುದಿಲ್ಲ, ಬಾಗಿಲು ತೆಗೆದು ಕೈಬಿಟ್ಟರೆ ಮತ್ತೆ ಬಾಗಿಲು ಮುಚ್ಚುವ ವೇಳೆಗೆ ಹಾಜರಾಗುವ ಗ್ರಂಥಾಲಯ ಮೇಲ್ವಿಚಾರಕನ ಕರ್ತವ್ಯಲೋಪಕ್ಕೆ ಇನ್ನಷ್ಟು ಹದಗೆಟ್ಟಿದೆ ಇದಕ್ಕೆ ಸಂಬಂಧಪಟ್ಟ ಇಲಾಖೆ ಅವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

'ಇತ್ತೀಚೆಗೆ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಲು ಅರಣ್ಯ ಮತ್ತು ಪರಿಸರ ಸಚಿವ ಆರ್.ಶಂಕರ್ ಗ್ರಾಮಕ್ಕೆ ಭೇಟಿ ನೀಡಿದ್ದರು, ಈ ವೇಳೆ ಕಟ್ಟಡ ಇರುವ ಸ್ಥಿತಿಯನ್ನು ಕಂಡು ಸ್ಥಳದಲ್ಲೆ ಇದ್ದ ಪಿಡಿಒ ನಾಗರಾಜ ಕೆ.ಬಿ ಅವರಿಗೆ ಕೂಡಲೇ ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವುದಕ್ಕೆ ಕ್ರಮ ಕೈಗೊಳ್ಳಿ' ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದರು.

'ಗ್ರಾಮ ಪಂಚಾಯ್ತಿಗೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ತಿಳಿಸಿದ್ದಾರೆ ಹಾಗೂ ಮೇಲ್ವಿಚಾರಕನ ಕರ್ತವ್ಯಲೋಪದ ಬಗ್ಗೆ ಅನೇಕ ದೂರುಗಳು ಬಂದಿವೆ ಸ್ಥಳಕ್ಕೆ ಭೇಟಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ'
- ವೆಂಕಟೇಶ್ವರಿ, ಜಿಲ್ಲಾ ಗ್ರಂಥಾಲಯ ಅಧಿಕಾರಿ, ಹಾವೇರಿ

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !