ಧರ್ಮಗುರುಗಳಿಗೆ ರಾಜಕಾರಣ ಬೇಡ: ದಿಂಗಾಲೇಶ್ವರ ಸ್ವಾಮೀಜಿ

7
ನೆಹರೂ ಓಲೇಕಾರ ಸಚಿವರಾಗಲಿ: ಬಾಲೇಹೊಸೂರಿನ ಹಾರೈಕೆ

ಧರ್ಮಗುರುಗಳಿಗೆ ರಾಜಕಾರಣ ಬೇಡ: ದಿಂಗಾಲೇಶ್ವರ ಸ್ವಾಮೀಜಿ

Published:
Updated:
Prajavani

ಹಾವೇರಿ: ಧರ್ಮದಲ್ಲಿ ರಾಜಕಾರಣಿಗಳು ಹಾಗೂ ರಾಜಕಾರಣದಲ್ಲಿ ಧರ್ಮಗುರುಗಳು ಹಸ್ತಕ್ಷೇಪ ಮಾಡುವುದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಶಾಸಕ ನೆಹರು ಓಲೇಕಾರ ಹುಟ್ಟುಹಬ್ಬ ಅಂಗವಾಗಿ ನಗರದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಾವೇರಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬಿಜೆಪಿ ನಾಯಕರ ಗುದ್ದಾಟದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಮುಜುಗರಕ್ಕೆ ಈಡಾಗುತ್ತಿದ್ದಾರೆ. ಇವರಿಗೆಲ್ಲ ಹಿರಿಯ ಶಾಸಕರಾದ ಸಿ.ಎಂ. ಉದಾಸಿ ಅವರು ಬುದ್ದಿ ಹೇಳಿ, ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ನಾವು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಆದರೆ, ಸಮಾಜವನ್ನು ಒಡೆಯುವವರ ವಿರುದ್ಧ ಹೋರಾಟ ಮಾಡುತ್ತೇವೆ. ರಾಜಕಾರಣಿಗಳು ಜಾತಿ ಮತ್ತು ಪಕ್ಷ ಭೇದ ಮರೆತು ರಾಜಕಾರಣ ಮಾಡಬೇಕು ಎಂದರು.

ಯಾವುದೇ ರಾಜಕಾರಣಿಗಳು ‘ಧರ್ಮ ದ್ರೋಹ’ ಮಾಡಬಾರದು ಎಂದ ಅವರು, ಶಾಸಕ ನೆಹರು ಓಲೇಕಾರ ಸಚಿವರಾಗಬೇಕು ಎಂಬ ಅಭಿಮಾನಿಗಳ ಆಶಯ ಈಡೇರಲಿ ಎಂದು ಹಾರೈಸಿದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಾಧನೆ ಇಲ್ಲದೇ ಸತ್ತರೆ ಶವಕ್ಕೂ ಬೆಲೆ ಇಲ್ಲ. ಸಮಾಜದಲ್ಲಿ ನಿಷ್ಠುರತೆಯಿಂದ ಕೆಲಸ ಮಾಡಬೇಕಾದರೆ ನಿಂದನೆಗಳು ಸಹಜ. ಹೊಸ ವರ್ಷದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವಾಗಲಿ  ಎಂದು ಹಾರೈಸಿದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಓಲೇಕಾರ ಅವರು ಶಾಸಕರಾಗುವ ಪೂರ್ವದಲ್ಲಿ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮುಂದಿನ ದಿನದಲ್ಲಿ ಮಂತ್ರಿಯಾಗಲಿ ಎಂದರು.

ನೆಹರು ಓಲೇಕಾರ ಮತ್ತು ಪ್ರೇಮಿಲಾ ದಂಪತಿ ಕೇಕ್‌ ಕತ್ತರಿಸಿ, ಪರಸ್ಪರ ತಿನ್ನಿಸುವ ಮೂಲಕ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

ಹುಕ್ಕೇರಿಮಠದ ಸದಾಶಿವ ಸ್ವಾಮಿ, ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಹತ್ತಿ ಮತ್ತೂರು ವಿರಕ್ತಮಠದ ನಿಜಗುಣ ಶಿವಯೋಗಿ ಸ್ವಾಮೀಜಿ, ನರಸೀಪುರ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ, ಅಗಡಿಯ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಹನುಮನಹಳ್ಳಿ ಹಾಲಸ್ವಾಮಿಮಠದ ಹಾಲಸಿದ್ದರಾಮ ಸ್ವಾಮೀಜಿ, ಶಾಸಕ ಸಿ.ಎಂ.ಉದಾಸಿ, ಜಿಲ್ಲಾ ಪಂಚಾಯ್ತಿ ಸದಸ್ಯ ಎನ್‌.ಎಂ.ಈಟೇರ, ಬಸವರಾಜ ಬೆಳವಡಿ, ಭೋಜರಾಜ ಕರೂದಿ, ನಿಂಗಪ್ಪ ಮೈಲಾರ, ಗಿರೀಶ ತುಪ್ಪದ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !