ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಯೂರಿಯಾ ಕೊರತೆ ಇಲ್ಲ; ಕೃಷಿ ಇಲಾಖೆ

ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಶಿಸ್ತುಕ್ರಮ; ಜಂಟಿ ನಿರ್ದೇಶಕ
Last Updated 1 ಆಗಸ್ಟ್ 2019, 12:08 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿ ಕೃಷಿಗೆ ಅಗತ್ಯವಿರುವಷ್ಟು ಯೂರಿಯಾ ಗೊಬ್ಬರ ದಾಸ್ತಾನಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್ ಅಭಯ ನೀಡಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ್ದ ರೈತ ಮುಖಂಡರು, ‘ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆ ಉಲ್ಭಣಿಸಿದೆ.ಕೆಲ ರಸಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಒಂದನ್ನೇ ಕೇಳಿದರೆ ಕೊಡುತ್ತಿಲ್ಲ. ಅದರ ಜತೆಗೆ ಬೇರೆ ಗೊಬ್ಬರವನ್ನೂ ಖರೀದಿಸಿದರೆ ಮಾತ್ರ ಯೂರಿಯಾ ಕೊಡುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಕೃಷಿ ಅಧಿಕಾರಿಗಳು ಗೊಬ್ಬರ ಪೂರೈಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದರು.

ಕೊರತೆ ಇಲ್ಲ: ‘ರಾಜ್ಯ ಮಾರಾಟ ಮಂಡಲದಲ್ಲಿ ಸದ್ಯ 1,033 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಅವಶ್ಯವಿರುವ ಸಹಕಾರ ಸಂಘಗಳಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ, ಬಾಗಲಕೋಟೆ ಜಿಲ್ಲೆಯಿಂದ 500 ಟನ್ ಹಾಗೂ ಯಾದಗಿರಿ ಜಿಲ್ಲೆಯಿಂದ 1,030 ಟನ್ ರಸಗೊಬ್ಬರ ಗುರುವಾರ ಪೂರೈಕೆಯಾಗಿದೆ’ ಎಂದು ಮಂಜುನಾಥ್ ಹೇಳಿದ್ದಾರೆ.

‘ರಾಷ್ಟ್ರೀಯ ಕೆಮಿಕಲ್ ಫರ್ಟಿಲೈಸರ್ಸ್ (ಎನ್‌ಸಿಎಫ್) ಸಂಸ್ಥೆಯಿಂದ 2 ಸಾವಿರ ಟನ್ ಹಾಗೂ ‘ಇಫ್ಕೋ’ ಸಂಸ್ಥೆಯಿಂದ 1,500 ಟನ್ ರಸಗೊಬ್ಬರ ಶನಿವಾರದೊಳಗೆ ಪೂರೈಕೆ ಆಗಲಿದೆ. ಅದನ್ನುಜಿಲ್ಲೆಯಲ್ಲಿ ಅವಶ್ಯವಿರುವ ವಿವಿಧ ಸಹಕಾರ ಸಂಘಗಳು ಹಾಗೂಖಾಸಗಿ ಮಾರಾಟಗಾರರಿಗೆ ಪೂರೈಕೆ ಮಾಡಲಾಗುವುದು’ ಎಂದು ವಿವರಿಸಿದ್ದಾರೆ.

‘ಈ ಎಲ್ಲ ಮೂಲಗಳಿಂದ ಜಿಲ್ಲೆಗೆ ಒಟ್ಟು 6,063 ಟನ್ ರಸಗೊಬ್ಬರ ಪೂರೈಕೆ ಆಗುತ್ತಿದೆ. ಅಲ್ಲದೇ, ಖಾಸಗಿ ಮಾರಾಟಗಾರರ ಬಳಿ 1,832 ಟನ್ ಹಾಗೂ ಸಹಕಾರ ಸಂಘಗಳಲ್ಲಿ 1,440 ಟನ್ ರಸಗೊಬ್ಬರ ಲಭ್ಯವಿರುವ ಕಾರಣ, ರೈತರು ಆತಂಕ ಪಡುವುದು ಬೇಡ’ ಎಂದು ಅಭಯ ನೀಡಿದ್ದಾರೆ.

ದರ ಹೆಚ್ಚಿದ್ದಲ್ಲಿ ಸಂಪರ್ಕಿಸಿ: ‘ಯೂರಿಯಾದ ಜತೆಗೆ ಇತರೆ ಯಾವುದೇ ರಸಗೊಬ್ಬರ ಅಥವಾ ಲಘು ಪೋಷಕಾಂಶಗಳನ್ನು ಲಿಂಕ್ ಮಾಡದಿರಲುರಸಗೊಬ್ಬರ ಮಾರಾಟಗಾರರಿಗೆಈಗಾಗಲೇ ಸೂಚಿಸಲಾಗಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಇಂತಹ ಪ್ರಕರಣಗಳು ಕಂಡುಬಂದರೆ ತಕ್ಷಣ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳು, ಜಂಟಿ ಕೃಷಿ ನಿರ್ದೇಶರು (82779 31800) ಹಾಗೂ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT