ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಮಕರಿ ಗ್ರಾಮದಲ್ಲಿ ಎಲ್ಡಿಒ (ಲೈಟ್ ಡೀಸೆಲ್ ಆಯಿಲ್) ಟ್ಯಾಂಕ್ನಲ್ಲಿ ಬಿದ್ದು ಆಪರೇಟರ್ ಅಭಿಷೇಕ ಬಸಪ್ಪ ಗೌಡಗೇರಿ(20) ಎಂಬುವವರು ಮೃತಪಟ್ಟಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ತಾಂಡಾ ನಿವಾಸಿ ಅಭಿಷೇಕ ಅವರು ಮಕರಿ ಗ್ರಾಮದಲ್ಲಿರುವ ಆರ್.ಎನ್. ಗಂಗೋಳ ಅವರ ಡಾಂಬರ್ ತಯಾರಿಕಾ ಘಟಕದಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಭವಿಸಿದ ಅವಘಡದಲ್ಲಿ ಅವರು ಮೃತಪಟ್ಟಿದ್ದಾರೆ. ತಂದೆ ನೀಡಿರುವ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ರಟ್ಟೀಹಳ್ಳಿ ಠಾಣೆ ಪೊಲೀಸರು ಹೇಳಿದರು.

‘ಅಭಿಷೇಕ್ ಅವರು ಶುಕ್ರವಾರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಡಾಂಬರ್ ತಯಾರಿಕೆ ಕೆಲಸ ಶುರುವಾಗಿತ್ತು. ಡಾಂಬರ್ ತಯಾರಿಕೆಗೆ ಎಲ್ಡಿಒ ಅಗತ್ಯವಿತ್ತು. ಆದರೆ, ಎಲ್ಡಿಓ (ಲೈಟ್ ಡೀಸೆಲ್ ಆಯಿಲ್) ಟ್ಯಾಂಕರ್ನಲ್ಲಿದ್ದ ಆಯಿಲ್ ಹೊರಗೆ ಬಂದಿರಲಿಲ್ಲ. ಟ್ಯಾಂಕ್ನೊಳಗಿನ ಪೈಪ್ನಲ್ಲಿ ಕಸ ಸಿಕ್ಕಿರಬಹುದೆಂದು ತಿಳಿದಿದ್ದ ಅಭಿಷೇಕ, ಮುಚ್ಚಳ ತೆರೆದಿದ್ದರು.’

‘ಮುಚ್ಚಳ ತೆರೆದ ನಂತರ, ಕೋಲಿನ ಸಹಾಯದಿಂದ ಪೈಪ್ಗೆ ಅಂಟಿಕೊಂಡಿದ್ದ ಕಸ ತೆಗೆಯುತ್ತಿದ್ದರು. ಇದೇ ಸಂದರ್ಭದಲ್ಲಿ ಆಯತಪ್ಪಿ ಟ್ಯಾಂಕ್ನೊಳಗೆ ಬಿದ್ದಿದ್ದರು. ಟ್ಯಾಂಕ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಯಿಲ್ ಇದ್ದಿದ್ದರಿಂದ, ಅದರಿಂದ ಎದ್ದು ಮೇಲಕ್ಕೆ ಬರಲು ಆಗಿರಲಿಲ್ಲ. ಅಲ್ಲಿಯೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

‘ಕೆಲ ಹೊತ್ತಿನ ನಂತರ ಕೆಲಸಗಾರರು, ಅಭಿಷೇಕ್ ಅವರಿಗಾಗಿ ಹುಡುಕಾಟ ನಡೆಸಿದ್ದರು. ಟ್ಯಾಂಕ್ನ ಮುಚ್ಚಳ ತೆರೆದಿದ್ದನ್ನು ನೋಡಿ, ಒಳಗೆ ಗಮನಿಸಿದ್ದರು. ಅವಾಗಲೇ ಅಭಿಷೇಕ ಮೃತದೇಹ ಕಂಡಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.