ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರು ಅಪಘಾತ: ವಿಮೆ ಮೊತ್ತ ಪಾವತಿಸುವಂತೆ ಇನ್ಸೂರನ್ಸ್ ಕಂಪನಿಗೆ ಆದೇಶ

ರಿಪೇರಿ ವೆಚ್ಚ ಪಾವತಿಸಲು ನಿರಾಕರಣೆ
Last Updated 9 ಜೂನ್ 2022, 15:39 IST
ಅಕ್ಷರ ಗಾತ್ರ

ಹಾವೇರಿ: ಅಪಘಾತಕ್ಕೀಡಾದ ವಾಹನದ ವಿಮೆ ಮೊತ್ತ ಪಾವತಿಗೆ ಬಜಾಜ್ ಅಲಯನ್ಸ್ ಜನರಲ್ ಇನ್ಸೂರನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಹಾವೇರಿ ತಾಲ್ಲೂಕು ಹಾವನೂರ ಗ್ರಾಮದ ನೀಲಪ್ಪ ಗುಡ್ಡಪ್ಪ ಕೆಂಗನಿಂಗಪ್ಪನವರ ಅವರು ತಾವು ಖರೀದಿಸಿದ ಕಾರಿಗೆ ವಿಮಾ ಪಾಲಿಸಿ ಪಡೆದಿದ್ದರು. ಕಾರು ಅಪಘಾತಕ್ಕೀಡಾದಾಗ ಕಾರು ರಿಪೇರಿ ವೆಚ್ಚ ಪಾವತಿಸಲು ವಿಮೆ ಕಂಪನಿ ನಿರಾಕರಿಸಿದ ಕಾರಣ ಪರಿಹಾರಕ್ಕಾಗಿ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪ್ರಭಾರ ಅಧ್ಯಕ್ಷರಾದ ಈಶ್ವರಪ್ಪ ಬಿ.ಎಸ್ ಹಾಗೂ ಸದಸ್ಯರಾದ ಉಮಾದೇವಿ ಎಸ್.ಹಿರೇಮಠ ಅವರು ₹2,73,106 ಪರಿಹಾರ ಮೊತ್ತ ಶೇ 6ರಂತೆ ಬಡ್ಡಿ ನೀಡಲು, ಮಾನಸಿಕ ಹಾಗೂ ದೈಹಿಕ ವ್ಯಥೆಗೆ ₹2 ಸಾವಿರ, ಪ್ರಕರಣದ ಖರ್ಚು ₹2 ಸಾವಿರಗಳನ್ನು 30 ದಿನದೊಳಗಾಗಿ ವಾಹನದ ಮಾಲೀಕನಿಗೆ ನೀಡಲು ಜನರಲ್ ಇನ್ಸೂರನ್ಸ್ ಕಂಪನಿಗೆ ಆದೇಶಿಸಿದ್ದಾರೆ.

ಇದಕ್ಕೆ ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT