ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘಟನೆಗೆ ಸೇವಾ ಮನೋಭಾವ ಅಗತ್ಯ’

Last Updated 16 ಡಿಸೆಂಬರ್ 2020, 16:20 IST
ಅಕ್ಷರ ಗಾತ್ರ

ಹಾವೇರಿ: ‘ಸಮುದಾಯದ ಸಂಘಟನೆಗೆ ವ್ಯಕ್ತಿ ತನ್ನ ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು ಸೇವೆ ಮನೋಭಾವನೆಯಿಂದ ತೊಡಗಿಸಿಕೊಂಡರೆ ಮಾತ್ರ ಸಮುದಾಯ ಸಂಘಟನೆ ಮಾಡಲು ಸಾಧ್ಯ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಶಿವಶಕ್ತಿ ಪ್ಯಾಲೇಸ್‍ನಲ್ಲಿ ಈಚೆಗೆ ನಡೆದ ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಸಪ್ತ ಜಿಲ್ಲೆಗಳ ಛಲವಾದಿ ಸಮುದಾಯ ಸಂಘಟನೆಯ ಅಭಿವೃದ್ಧಿ ಸಮಾಲೋಚನೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಛಲವಾದಿ ಸಮುದಾಯ ಸಂಘಟನೆಯ ಅಭಿವೃದ್ಧಿಯಾಗಬೇಕಾದರೆ ಮೊದಲು ಸಂಘಟನೆಯಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ನಂತರ ಎಲ್ಲರನ್ನೂ ಪರಿವರ್ತನೆಯ ಹಾದಿಯಲ್ಲಿ ತೆಗೆದುಕೊಂಡು ಹೋಗಿ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಿಸುವ ಮೂಲಕ ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಇಂದು ಛಲವಾದಿ ಸಮುದಾಯದಲ್ಲಿ ಮಹತ್ತರವಾದ ಬದಲಾವಣೆ ತರಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಆದ್ದರಿಂದ ಪಾಲಕರು, ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಛಲವಾದಿ ಸಮುದಾಯದ ಕ್ಷೇಮಾಭಿವೃದ್ಧಿಯ ರಾಜ್ಯ ಘಟಕದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಸದಾಶಿವ ಆಯೋಗ ಜಾರಿಗೊಳಿಸಿ ಒಳ ಮೀಸಲಾತಿಗೆ ಅನುವು ಮಾಡಿಕೊಂಡಬೇಕೆಂದು ಒತ್ತಾಯಿಸಿದರು.

ನಿವೃತ್ತ ಪೋಲಿಸ್ ಅಧಿಕಾರಿ ರುದ್ರಮುನಿ ಸ್ವಾಮಿ ಹಾಗೂ ಹಾವೇರಿ ಛಲವಾದಿ ಜಿಲ್ಲಾ ಘಟಕದ ಅಧ್ಯಕ್ಷ ಶಂಭು ಕಳಸದಮಾತನಾಡಿದರು.ಛಲವಾದಿ ಸಂಘದ ಹಿರಿಯ ಮುಖಂಡರಾದ ಎನ್.ಬಿ.ಕಾಳೇ, ಪಿ.ಡಿ.ಸಾವಕ್ಕನವರ, ಕಾರ್ಯದರ್ಶಿ ರಾಘವೇಂದ್ರ ಕನವಳ್ಳಿ, ಮಂಜುನಾಥ, ಗೌರವಾಧ್ಯಕ್ಷ ನಿಂಗಪ್ಪ ಗಾಳೆಮ್ಮನವರ, ಖಜಾಂಚಿ ಸತೀಶ ಕಾಟೇನಹಳ್ಳಿ ಹಾಗೂ ಪದಾಧಿಕಾರಿಗಳು ಇದ್ದರು. ಮಂಜುನಾಥ ಕರ್ಜಗಿ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT