ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೌಲಭ್ಯ ಪಡೆಯಲು ಸಂಘಟಿತರಾಗಿ’

Last Updated 7 ಏಪ್ರಿಲ್ 2021, 15:13 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಂಘಟಿತರಾಗಬೇಕು ಹಾಗೂ ಅವಕಾಶ, ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ತ್ರಿಮತಸ್ಥ ಅಸಂಘಟಿತ ಪುರೋಹಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಬಿ.ಅನಂತಮೂರ್ತಿ ಹೇಳಿದರು.

ನಗರದ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ಅಸಂಘಟಿತ ಕಾರ್ಮಿಕರಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವೈದ್ಯಕೀಯ ಚಿಕಿತ್ಸೆಗಾಗಿ ಇಎಸ್‌ಐ ಪಿಎಫ್‌ ಕಾರ್ಡುಗಳ ವಿತರಣೆ, ಪಿಂಚಣಿ ವೇತನ, ಸ್ವಯಂ ಉದ್ಯೋಗಿಗಳಿಗೆ ಪ್ರೋತ್ಸಾಹ, ವೇದಾಧ್ಯಯನ ಪಂಡಿತರಿಗೆ ಗೌರವಧನ ವಿತರಣೆ, ಸಹಾಯಧನ ಸೇರಿದಂತೆ ಗೃಹ ನಿರ್ಮಾಣ ಸಾಲ ವಿತರಣೆ, ವಿದ್ಯಾರ್ಥಿವೇತನ, ದೇವಾಲಯದ ಅರ್ಚಕರ ಕುಂದುಕೊರತೆಗಳ ವಿಚಾರಣೆ ಮತ್ತು ನಿವಾರಣೆಯು ಸಂಘದ ಮುಖ್ಯ ಯೋಜನೆಗಳಾಗಿವೆ ಎಂದು ಹೇಳಿದರು.

ಪದಾಧಿಕಾರಿಗಳ ವಿವರ:

ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಗೌರವಾಧ್ಯಕ್ಷರಾಗಿ ದತ್ತಾತ್ರೇಯ ನಾಡಿಗೇರ, ಅಧ್ಯಕ್ಷರಾಗಿ ರವೀಂದ್ರ ಪಾಟೀಲ್‌, ಉಪಾಧ್ಯಕ್ಷರಾಗಿ ಶಶಿಧರ ಎಸ್‌.ಕುಲಕರ್ಣಿ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಆರ್‌.ಪಾಟೀಲ, ಸಹ ಕಾರ್ಯದರ್ಶಿಯಾಗಿ ರಾಮಸ್ವಾಮಿ ಪಾಟೀಲ, ಖಜಾಂಚಿಯಾಗಿ ಸುಧೀಂದ್ರ ಕದರಮಂಡಲಗಿ, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ ಸಮೇರಾಯರ್‌, ಮಾರುತಿರಾಯ ಸಮೇರಾಯರ್‌ ಹಾಗೂ ಸದಸ್ಯರಾಗಿ ವೆಂಕಟೇಶ ಸಮೇರಾಯರ್‌, ತಿಮ್ಮಯ್ಯ ಸಮೇರಾಯರ್‌ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ವೆಂಕಟೇಶ್‌ ಎಸ್‌.ಎಸ್‌., ಸುದರ್ಶನ್‌ ಆಚಾರ್ಯ, ಪ್ರಭು ಮೂರ್ತಿ ಆರ್‌., ರಾಜೇಶ್‌ ಡಿ.ಎಸ್‌, ಆಂಜನೇಯ ಎಸ್‌.ಎ., ಮಂಜುನಾಥ ಎಸ್‌.ಬಿ., ಸುರೇಶ್‌ಕುಮಾರ್‌ ಕೆ.ವಿ. ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT