ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯದತ್ತ ಹೆಚ್ಚು ಗಮನ ಹರಿಸಿ: ಲಮಾಣಿ

Published : 6 ಸೆಪ್ಟೆಂಬರ್ 2024, 15:46 IST
Last Updated : 6 ಸೆಪ್ಟೆಂಬರ್ 2024, 15:46 IST
ಫಾಲೋ ಮಾಡಿ
Comments

ಗುತ್ತಲ: ಆರೋಗ್ಯದ ಬಗ್ಗೆ ಪ್ರತಿಯೊಬ್ಬರು ಹೆಚ್ಚು ಗಮನ ಹರಿಸಬೇಕೆಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಶುಕ್ರವಾರ ಪಟ್ಟಣದ ಶಿವನಗರದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದಿಂದ ನೀಡುವ ಎಲ್ಲ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಚಿಕಿತ್ಸೆ ಪಡೆಯಬೇಕೆಂದು ಅವರು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ ಮಾತನಾಡಿ, ‘ಈಗಿನ ಯುವಕರು ಮದ್ಯಪಾನ ಮಾಡಿ ಎಗ್‌ರೈಸ್ ತಿಂದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆರೋಗ್ಯದತ್ತ ಗಮನ ನೀಡಬೇಕಿದೆ’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಪ್ರಭಾಕಾರ ಕುಂದೂರ ಮಾತನಾಡಿ, ‘ನಮ್ಮ ಕ್ಲಿನಿಕ್‌ನಲ್ಲಿ 12 ಸೇವೆಗಳು ಸಿಗುತ್ತವೆ. 30 ವರ್ಷದ ನಂತರ ಶುಗರ್,ಬಿಪಿ,ಕ್ಯಾನ್ಸರ್ ಹೆಚ್ಚಾಗುತ್ತಿದ್ದು ಯುವಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಅವರು ಹೇಳಿದರು.ಶಾಸಕ ರುದ್ರಪ್ಪ ಲಮಾಣಿಯವರ ಶುಗರ್ ಮತ್ತು ಬಿಪಿ ಚೆಕ್ ಮಾಡಿದ ಅವರು ಎರಡು ನಾರ್ಮಲ್ ಬಂದಿವೆ ನಮ್ಮ ಕ್ಲಿನಿಕ್ ಉದ್ಗಾಟಿನೆ ಬಳಿಕ ಶಾಸಕರ ರಕ್ತ ಪರೀಕ್ಷೆ ನಡೆಸಿದರು.

ಕಾರ್ಯಕ್ರಮದಲ್ಲಿ ಎಂ.ಎಂ.ಹಿರೇಮಠ,ಈರಪ್ಪ ಲಮಾಣಿ,ಐ.ಡಿ.ಲಮಾಣಿ,ಮಾದೇಗೌಡ್ರ ಗಾಜಿಗೌಡ್ರ,ಪಟ್ಟಣ ಪಂಚಾಯತಿ ಅಧ್ಯಕ್ಷ ಮಾಳವ್ವ ಗೊರವರ,ನಾಗರಾಜ ಈಳಿಗೇರ,ಶ್ರೀಧರ ದೊಡ್ಮನಿ,ಬಸವರಾಜ ಕಂಬಳಿ,ಸಂತೋಷ ಲಮಾಣಿ,ಡಾ.ನೀತಿನ್,ಹನಮಂತ ಲಮಾಣಿ,ನಿಂಗರಾಜ ಲಮಾಣಿ,ಸೇರಿದಂತೆ ಇನ್ನು ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT