ಬುಧವಾರ, ಸೆಪ್ಟೆಂಬರ್ 18, 2019
21 °C

ನಿಶ್ಚಿತಾರ್ಥಕ್ಕೆ ಬಂದಿದ್ದ ಬಾಲಕಿ ಅತ್ಯಾಚಾರ–ಕೊಲೆ

Published:
Updated:

ಶಿಗ್ಗಾವಿ (ಹಾವೇರಿ ಜಿಲ್ಲೆ): ತಾಲ್ಲೂಕಿನ ಖುರ್ಸಾಪುರದಲ್ಲಿನ ಮದುವೆ ನಿಶ್ಚಿತಾರ್ಥಕ್ಕೆ ಬಂದಿದ್ದ ಏಳು ವರ್ಷದ ಬಾಲಕಿಯನ್ನು ಹುಬ್ಬಳ್ಳಿಯ ವ್ಯಕ್ತಿಯೊಬ್ಬ ಸೋಮವಾರ ರಾತ್ರಿ ಅತ್ಯಾಚಾರ ಎಸಗಿ ಕೊಲೆಗೈದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕಿಯನ್ನು ಸಮೀಪದ ಮನೆಯಲ್ಲಿ ರಾತ್ರಿ ಮಲಗಿಸಿದ್ದ ಪೋಷಕರು, ಮದುವೆ ನಿಶ್ಚಿತಾರ್ಥ(ಇಳೆ) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ಮನೆಯಲ್ಲಿ ಮಲಗಿದ್ದ ಆರೋಪಿಯು, ಬಾಲಕಿಯನ್ನು ಹಿತ್ತಲಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ. ಬಳಿಕ ಶೌಚಾಲಯದಲ್ಲಿ ಎಸೆದು ಪರಾರಿಯಾಗಿದ್ದನು.

ಆರೋಪಿಯನ್ನು ಬಂಧಿಸಿದ ಪೊಲೀಸರು, ಫೋಕ್ಸೊ ಕಾಯಿದೆ ಅಡಿ ದೂರು ದಾಖಲಿಸಿದ್ದಾರೆ. ಘಟನೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಶಿಗ್ಗಾವಿ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

Post Comments (+)