ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ಇಲಾಖೆಯಿಂದ ಪಾರ್ಸಲ್‌ ಸೇವೆ ಆರಂಭ

Last Updated 3 ಏಪ್ರಿಲ್ 2020, 14:42 IST
ಅಕ್ಷರ ಗಾತ್ರ

ಹಾವೇರಿ: ರಾಷ್ರ್ಟೀಯ ವಿಪತ್ತು ನಿರ್ವಹಣಾ ಅಡಿಯಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಭಾರತೀಯ ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳನ್ನು ಜನರಿಗೆ ಒದಗಿಸಲು ಪಾರ್ಸಲ್ ಸೇವೆಯನ್ನು ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಅಂಚೆ ಅಧೀಕ್ಷಕ ರಮೇಶ ಪ್ರಭು ಮನವಿ ಮಾಡಿಕೊಂಡಿದ್ದಾರೆ.

ಭಾರತೀಯ ಅಂಚೆ ಇಲಾಖೆಯು ಅವಶ್ಯಕವಾದ ಸೇವೆಗಳ ಅಡಿಯಲ್ಲಿ ಮನುಷ್ಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಔಷಧಿಗಳನ್ನು ಅಂಚೆ ಇಲಾಖೆಯ ರಿಜಿಸ್ಟರ್‌, ಸ್ಪೀಡ್‌ ಪೋಸ್ಟ್‌ ಮೂಲಕ ಕಳುಹಿಸಲು ವಿಶೇಷ ಸೌಲಭ್ಯ ಒದಗಿಸಲಾಗಿದೆ.

ಗ್ರಾಹಕರು ಸಾಮಾಜಿಕ ಭದ್ರತಾ ಪಿಂಚಣಿ ಪಾವತಿ, ಅವಶ್ಯಕ ವಸ್ತುಗಳ ಬುಕಿಂಗ್ ಮತ್ತು ಸಾಗಣೆಯನ್ನು ಮಾಡಲಾಗುವುದು, ಅಂಚೆ ಕಚೇರಿಯಲ್ಲಿಯೇ ಬಟವಾಡೆ ಮಾಡುವ ವ್ಯವಸ್ಥೆ, ಹಣಕಾಸಿನ ಸೇವೆಗಳು, ಜಮೆ ಮತ್ತು ಖರ್ಚಿನ ವ್ಯವಹಾರಗಳು, ಎ.ಟಿ.ಎಮ್ ಮೂಲಕ ವ್ಯವಹಾರ, ಗ್ರಾಮೀಣ ಭಾಗದಲ್ಲಿ ಎ.ಟಿ.ಎಮ್ ಇರದ ಪಕ್ಷದಲ್ಲಿ, ಮೈಕ್ರೊ ಎ.ಟಿ.ಎಮ್ ಮುಖಾಂತರ ಹಣಕಾಸಿನ ವ್ಯವಹಾರ ಮಾಡುವ ಸೌಲಭ್ಯ ಪಡೆಯಬಹುದಾಗಿದೆ.

‌ಗ್ರಾಮೀಣ ಭಾಗದಲ್ಲಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ, ಈ ಮೇಲಿನ ಅವಶ್ಯಕ ಸೇವೆಗಳನ್ನು ತಮ್ಮ ಹತ್ತಿರದ ಅಂಚೆ ಕಚೇರಿಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯೊಳಗಾಗಿಗೆ ಭೇಟಿ ನೀಡಿ ಸೌಲಭ್ಯ ಪಡೆದುಕೊಳ್ಳುವಂತೆ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT