ರಾಣೆಬೆನ್ನೂರು: ನಗರದ 110/11 ಕೆ.ವಿ ಆರೇಮಲ್ಲಾಪುರ ವಿದ್ಯುತ್ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಜೂನ್ 12ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

110 ಕೆ.ವಿ ಆರೇಮಲ್ಲಾಪುರ ವಿದ್ಯುತ್ ಕೇಂದ್ರ ವ್ಯಾಪ್ತಿಯ ಮೆಡ್ಲೇರಿ, ಹಿರೇಬಿದರಿ, ಕೋಣನತಂಬಗಿ, ಅರೇಮಲ್ಲಾಪುರ, ಸೋಮಲಾಪುರ, ಐರಣಿ, ರಾಹುತನಕಟ್ಟಿ, ಯಕ್ಲಾಸಪುರ, ಯಲ್ಲಾಪುರ ಗ್ರಾಮ ಹಾಗೂ 33 ಕೆ.ವಿ ಚಳಗೇರಿ ವಿದ್ಯುತ್ ಕೇಂದ್ರ ವ್ಯಾಪ್ತಿಯ ಚಳಗೇರಿ, ಕರೂರು, ಖಂಡೇರಾಯನಹಳ್ಳಿ, ವಡೇರಾಯನಹಳ್ಳಿ, ಹುಲಿಕಟ್ಟಿ, ನದಿಹರಳಹಳ್ಳಿ, ಎಣ್ಣಿಹೊಸಳ್ಳಿ, ಹುಣಿಸಿಕಟ್ಟಿ, ದೇವನಗೊಂಡನಕಟ್ಟಿ, ಮಾಗೋಡ, ಕಮದೋಡ ಗ್ರಾಮಗಳಿಗೆ ಮತ್ತು ರಾಣೆಬೆನ್ನೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುದೇನೂರು ವಾಟರ್ ಸಪ್ಲೈ, ವೆಂಕಟೇಶ್ವರ ಹ್ಯಾಚರಿ, ರಾಮ್ಕೊ ಫ್ಯಾಕ್ಟರಿ ಮತ್ತು ಗೋಲ್ಡನ್ ಹ್ಯಾಚರಿ ಸ್ಥಾವರಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ.

‘ಈ ಮೇಲಿನ ಗ್ರಾಮಗಳ ಎಲ್ಲ ಎನ್ಜೆವೈ, ಕೃಷಿ, ನೀರಾವರಿ ಪಂಪಸೆಟ್ಗಳ 11 ಕೆ.ವಿ ಮತ್ತು 33 ಕೆ.ವಿ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದರೆ ಎಲ್ಲ ಕೃಷಿ, ನೀರಾವರಿ ಪಂಪಸೆಟ್ಗಳ 11 ಕೆ.ವಿ ಮಾರ್ಗಗಳಿಗೆ ವೇಳೆ ಬದಲಾವಣೆ ಮಾಡಿ, ಹಿಂದಿನ ದಿನದ ರಾತ್ರಿ ಪಾಳಿಯಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು’ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.