ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸು ಸಾಕಾಣಿಕೆಗೆ ಆದ್ಯತೆ ನೀಡಿ: ಡಾ.ರಾಜು ಕೂಲೇರ

Last Updated 1 ಅಕ್ಟೋಬರ್ 2020, 16:36 IST
ಅಕ್ಷರ ಗಾತ್ರ

ಹಾವೇರಿ: ‘ಪಶುಪಾಲನೆ ರೈತರ ಆರ್ಥಿಕ ಸದೃಢತೆಗೆ ಅನುಕೂಲಕರವಾಗಿದ್ದು, ರೈತರು ಕೃಷಿ ಜೊತೆಗೆ ಹಸು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ರಾಜು ಕೂಲೇರ ಸಲಹೆ ನೀಡಿದರು.

ಹೊಂಬರಡಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮಿಶ್ರ ತಳಿ ಹಾಗೂ ದೇಶಿ ಆಕಳು ಮತ್ತು ಕರುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಜಾನುವಾರುಗಳಿಗೆ ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಹಾಗೂ ವಿವಿಧ ಜಾತಿಯ ಹಸುಗಳನ್ನು ಸಾಕಾಣಿಕೆಗೆ ಮುಂದೆ ಬರಬೇಕು ಎಂದು ಹೇಳಿದರು.

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಮಹೇಶ ಕಡಗಿ ಹಾಗೂ ಪಾಲಿಕ್ಲಿನಿಕ್ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಬಿ. ಸಣ್ಣಕ್ಕಿ ಅವರು ರೈತರಿಗೆ ಮಾಹಿತಿ ನೀಡಿದರು.

ಡಾ.ಪರಮೇಶ ಹುಬ್ಬಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು.ಡಾ.ಎಚ್.ಸಿ. ಪಾಟೀಲ್, ಡಾ.ಗಂಗಾಧರ ಸುಕ್ತೆ, ಡಾ.ವಿಜಯಕುಮಾರ್ ಹಳಕಟ್ಟಿ, ಡಾ.ಬೀರೇಶ ಸಣ್ಣಪುಟ್ಟಕ್ಕನವರ, ಡಾ.ರಂಗನಾಥ ಗುಡಿಸಾಗರ, ಡಾ.ರಾಘವೇಂದ್ರ ಕಿತ್ತೂರ, ಡಾ.ಅಣ್ಣಪ್ಪ ಸ್ವಾಮಿ, ಡಾ.ಸುರೇಶ ಮಾಗೋಡ, ಡಾ.ಕವಿರಾಜ ಐರಣಿ ಅವರು ಉತ್ತಮ ತಳಿಯ ರಾಸುಗಳ ಆಯ್ಕೆಯ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಉಪನಿರ್ದೇಶಕರಾದ (ಪಾಲಿಕ್ಲಿನಿಕ್) ಡಾ.ಗೋಪಿನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT