ಹಾವೇರಿ: ‘ಧರ್ಮದ ರಕ್ಷಣೆಗಾಗಿ ಭಗವಂತ ಅನೇಕ ಅವತಾರಗಳನ್ನು ಎತ್ತಿ ಧರ್ಮವನ್ನು ಉದ್ಧಾರ ಮಾಡಿದ್ದಾನೆ. ಅಂತೆಯೇ ಈ ಕಲಿಯುಗದಲ್ಲಿ ಅವತರಿಸಿ ಈ ಧರ್ಮವನ್ನು, ಸಂಸ್ಕಾರವನ್ನು ಹಾಗೂ ಸಮಾಜವನ್ನ ಪುನರುತ್ಥಾನ ಮಾಡಿ ಸನಾತನ ಧರ್ಮದ ಜಾಗೃತಿ ಮೂಡಿಸಿದ ಕೀರ್ತಿ ಸಿಂದಗಿಯ ಶಾಂತವೀರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ’ ಎಂದು ಹೊಸದುರ್ಗ ತಾಲ್ಲೂಕಿನ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಹಾವೇರಿಯ ಸಿಂದಗಿ ಮಠದಲ್ಲಿ ಶುಕ್ರವಾರ ಶಾಂತವೀರ ಪಟ್ಟಾಧ್ಯಕ್ಷರ 43ನೇ ಪುಣ್ಯ ಸ್ಮರಣೋತ್ಸವದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ಸುಖ ಶಾಂತಿ, ಸಂತೋಷದಿಂದ ಇರಬೇಕಾದರೆ ಧರ್ಮ ಚೆನ್ನಾಗಿರಬೇಕು. ಧರ್ಮ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.

ಹಾಸ್ಯ ಭಾಷಣಕಾರರಾದ ಇಂದುಮತಿ ಸಾಲಿಮಠ ಅವರು ಹಾಸ್ಯ ನುಡಿ ಮತ್ತು ಹಾಡುಗಳಿಂದ ನೆರೆದಿದ್ದ ಭಕ್ತರನ್ನು ನಗೆ ಕಡಲಿನಲ್ಲಿ ತೇಲಿಸಿದರು.

ಬೈರನಹಟ್ಟಿಯ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಹೋತನಹಳ್ಳಿ ಸಿಂದಗಿಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಇದ್ದರು. ವೀರಯ್ಯ ಹಿರೇಮಠ, ಜಗದೀಶ್ ಜೋಗುರ, ಲಿಂಗಯ್ಯ ಚಿಕ್ಕಯ್ಯನಮಠ, ಚಂಬಣ್ಣ ಹೇರೂರ, ಮುರಗೆಪ್ಪ ಕಡೆಕೊಪ್ಪ ಇದ್ದರು. ಜಿ.ಎಸ್. ಭಟ್ ಸ್ವಾಗತಿಸಿದರು. ಶಿವಬಸಯ್ಯ ಆರಾಧ್ಯಮಠ ಕಾರ್ಯಕ್ರಮ ನಿರ್ವಹಿಸಿದರು.

ಆರೋಗ್ಯ ತಪಾಸಣೆ:

ಹಾವೇರಿಯ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯ ಹತ್ತಕ್ಕೂ ಹೆಚ್ಚು ನುರಿತ ಹಿರಿಯ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಸಿಂದಗಿ ಮಠದ ಆವರಣದಲ್ಲಿ ಜರುಗಿತು. ಶಿಬಿರದಲ್ಲಿ 250ಕ್ಕೂ ಹೆಚ್ಚು ರೋಗಿಗಳ ತಪಾಸಣೆ ಜರುಗಿತು. ಹಾವೇರಿಯ ಸೃಜನ ಆಪ್ಟಿಕಲ್ ಸಹಯೋಗದಲ್ಲಿ ಹುಬ್ಬಳ್ಳಿಯ ಜನಪ್ರಿಯ ಕಣ್ಣಿನ ಆಸ್ಪತ್ರೆ ಇವರು ನಡೆಸಿದ ಉಚಿತ ಕಣ್ಣಿನ ತಪಾಸಣೆಯಲ್ಲಿ 60ಕ್ಕೂ ಹೆಚ್ಚು ರೋಗಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.