ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ತಹಶೀಲ್ದಾರ್ ಪ್ಲಾಟಿನ ಇ-ಸ್ವತ್ತು ಉತಾರ ನೀಡುವಂತೆ ಆಗ್ರಹಿಸಿ ನಿವೇಶನ ಖರೀದಿದಾರರು ಪುರಸಭೆ ಮುಂದೆ ಶನಿವಾರ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಶಿವಾನಂದ ಅಜ್ಜನವರ ಅವರಿಗೆ ಮನವಿ ಸಲ್ಲಿಸಿದರು.

ಕಳೆದ 20 ವರ್ಷಗಳ ಹಿಂದೆ ಇಲ್ಲಿನ ನಿವೇಶನಗಳನ್ನು ಖರೀದಿ ಮಾಡಲಾಗಿದೆ. ಸುಮಾರು 242 ಜನರ ನಿವೇಶನ ನೋಂದಣಿ ಮಾಡಲಾಗಿದೆ. ಖರೀದಿ ಸಮಯದಲ್ಲಿ ಪ್ರತಿ ನಿವೇಶನ ಖರೀದಿದಾರರಿಂದ ಪುರಸಭೆಗೆ 6 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಅಭಿವೃದ್ಧಿ ತೆರಿಗೆ ತುಂಬಿಸಿಕೊಂಡಿದ್ದಾರೆ. ಅಲ್ಲದೆ ಕೆಲವರಿಗೆ ಕೈಬರಹ ಉತ್ತರ ನೀಡಿದ್ದಾರೆ. ಆದರೆ ಈವರೆಗೆ ಈ ನಿವೇಶನದ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಂಡಿಲ್ಲ. ಇ-ಸ್ವತ್ತು ಉತಾರ ನೀಡುತ್ತಿಲ್ಲ. ಇದರಿಂದಾಗಿ ನಿವೇಶನ ಖರೀದಿಗಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಶೀಘ್ರ ಇತ್ತ ಗಮನ ಹರಿಸಬೇಕು. ಇಲ್ಲದಿದ್ದರೆ ಸದ್ಯದಲ್ಲೇ ಪುರಸಭೆಗೆ ಬೀಗ ಹಾಕಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಮನವಿ ಸ್ವೀಕರಿಸಿ ಮಾತನಾಡಿ, ‘ಮೇಲಾಧಿಕಾರಿಗಳಿಗೆ ವರದಿ ಕಳುಹಿಸುತ್ತೇನೆ. ನಂತರ ಮೇಲಾಧಿಕಾರಿಗಳ ಆದೇಶದನ್ವಯ ಮುಂದಿನ ಕಾರ್ಯ ಕೈಗೊಳ್ಳಲಾಗುವುದು’ ಎಂದರು.

ಮುಖಂಡರಾದ ರುದ್ರಪ್ಪ ಬಳ್ಳಾರಿ, ಮಾಲತೇಶ ತಳವಾರ, ಎಸ್.ಎಸ್.ದೇವಸೂರ, ಎಸ್.ಕೆ.ಅಣ್ಣಪ್ಪನವರ, ಹುಲಿಗೆಪ್ಪ ದೊಡ್ಡಮನಿ, ಬಿ.ವಿ.ವನಹಳ್ಳಿ, ವಿ.ವಿ.ಹಿರೇಮಠ, ರಾಮನಗೌಡ್ರ ಪಾಟೀಲ, ಭರತ್ಸಿಂಗ್ ಚವ್ಹಿ, ರಾಘವೇಂದ್ರ ಬಾಬುಸಿಂಗನವರ, ರವಿ ಕೊಲ್ಲಾಪುರ, ಪದ್ಮಾ ಹಿರೇಮಠ, ಮತ್ತಣ್ಣ ಮರಾಠಿ, ಮಾಲತೇಶ ಬಾಬುಸಿಂಗನವರ, ವಿನಯ ವನಹಳ್ಳಿ, ಲಕ್ಷ್ಮವ್ವ ದೊಡ್ಡಮನಿ, ಶಿಲ್ಫಾ ದೊಡ್ಡಮನಿ, ಹರೀಶ ಭವಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.