ಸೋಮವಾರ, ನವೆಂಬರ್ 29, 2021
20 °C

ತೋಂಟದ ಸಿದ್ಧಲಿಂಗಶ್ರೀ ಆಧುನಿಕ ಬಸವಣ್ಣ: ಡಿ.ಎಸ್. ಮಾಳಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಮಾದಿಗ ಸಮಾಜದ ಬಗ್ಗೆ ಅಂತಃಕರಣ ಹೊಂದಿದ್ದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ‘ಆಧುನಿಕ ಬಸವಣ್ಣ’ ಎಂದರೆ ತಪ್ಪಾಗಲಾರದು ಎಂದು ಅಖಿಲ ಕರ್ನಾಟಕ ಆದಿ ಜಾಂಬವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮಾಳಗಿ ಅಭಿಪ್ರಾಯಪಟ್ಟರು. 

ನಗರದ ಮುರುಘರಾಜೇಂದ್ರಮಠದಲ್ಲಿ ಶನಿವಾರ ಜಿಲ್ಲಾ ಡಿ.ಎಸ್.ಎಸ್ ಹಾಗೂ ಮಾದಿಗರ ಮಾಹಾಸಭಾ ಸಂಯುಕ್ತ ಆಶ್ರಯದಲ್ಲಿ ನಡೆದ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ 3ನೇ ವರ್ಷದ ಪುಣ್ಯ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.  

ಪರಮಪುಜ್ಯರು 30 ವರ್ಷಗಳಿಂದ ಅವಿಭಾಜ್ಯ ಧಾರವಾಡ ಜಿಲ್ಲೆಯಾದ್ಯಂತ ಮಾದಿಗ ಸಮಾವೇಶ ಮತ್ತು ಜಾಗೃತಿ ಕಾರ್ಯಕ್ರಮಗಳ ಸಾನ್ನಿಧ್ಯವಹಿಸಿ ನಮ್ಮ ಸಮಾಜವನ್ನು ಜಾಗೃತಿಗೊಳಿಸಿದ್ದಾರೆ. ಶ್ರೀಗಳು ಹೋರಾಟಗಾರರು, ತಳ ಸಮುದಾಯದ ಹಿತಚಿಂತಕರು ಎಂದು ಬಣ್ಣಿಸಿದರು. 

ಸಾಮಾಜಿಕ ನ್ಯಾಯದ ಹರಿಕಾರರಾಗಿ, ಬಡವರ, ರೈತರ, ಅಲ್ಪಸಂಖ್ಯಾತರ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿಗಳಾಗಿದ್ದರು. 12ನೇ ಶತಮಾನದಲ್ಲಿ ಕೊಂಡಿ ಮಂಚಣ್ಣನಂಥ ಜಾತಿವಾದಿಗಳು ವಿಶ್ವಗುರು ಬಸವಣ್ಣನವರಿಗೆ
ಕಿರುಕುಳ ಕೊಟ್ಟ ಹಾಗೆ ಸಿದ್ಧಲಿಂಗ ಶ್ರೀಗಳಿಗೆ ಕೆಲವೊಂದು ಜನರು ತೊಂದರೆ ಕೊಟ್ಟಾಗ ಅವಿಭಾಜ್ಯ ಧಾರವಾಡ ಜಿಲ್ಲೆಯ ಮಾದಿಗ ಜನಾಂಗದವರು ಪೂಜ್ಯರ ಪರವಾಗಿ ಕೈಜೋಡಿಸಿದ್ದೇವೆ ಎಂದರು. 

ಸಭೆಯಲ್ಲಿ ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಾಗರಾಜ ಮಾಳಗಿ, ಬಿ.ಎಸ್.ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣನವರ, ರೈತಸಂಘಧ ಅಧ್ಯಕ್ಷ ಮಾದೇವಪ್ಪ ಮಾಳಮ್ಮನವರ, ಡಿ.ಎಸ್. ಎಸ್ ಸಂಚಾಲಕರಾದ ಮಾಲತೇಶ ಯಲ್ಲಾಪುರ, ಮಂಜಪ್ಪ ಮರೋಳ, ರಾಮುಗಾಳೆಪ್ಪನವರ, ಗುಡ್ಡಪ್ಪ ಚಿಕ್ಕಪ್ಪನವರ, ಶ್ರೀಕಾಂತ ಗಡ್ಡಿ, ಭೀಮಣ್ಣ ಯಲ್ಲಾಪುರ, ಶೆಟ್ಟಿ ವಿಭೂತಿ, ಕಾಳಪ್ಪ ಬಡಿಗೇರ, ಮಲ್ಲೇಶ ಕಡಕೋಳ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು